ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀಹರಿಯ ಗುಣಗಾನ ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ ಪ ಒದಗಿ ಬರುವ ಮೃತ್ಯುವ ಪರಿಹರಿಸುವ ಪದುಮನಾಭನ ಪದಪದುಮಕ್ಕೆರಗುವ ಅ.ಪ ಚಂಚಲ ಸಿರಿಗಾಗಿ ಲೋಕ ಪ್ರ- ಪಂಚಕೆ ಬೆರಗಾಗಿ ಸಂಚಿತ ಕರ್ಮವ ಕಳೆಯದೆ ಕಾರ್ಯವು ಮಿಂಚಿದ ಬಳಿಕಾಯಾಸಕ್ಕಿಂತಲು1 ಚಿಂತೆಯೆಲ್ಲವ ಕಳೆದು ಮನದಿ ನಿ- ಶ್ಚಿಂತೆಯಾಗಿ ನಲಿದು ಅಂತರಂಗದಿ ಲಕ್ಷ್ಮೀಕಾಂತನ ತುತಿಸುತ ಸಂತೋಷ ಶರಧಿಯಳೋಲ್ಯಾಡುವುದು 2 ಶರಣ ಜನರ ಪೊರೆವ, ದ್ವಾರಕಾ-ಪುರವರದಲಿ ತಾನಿರುತಿರುವಪರಮ ಪುರುಷ ನಮ್ಮ ಸಿರಿಕೃಷ್ಣರಾಯನಮುರಳಿಧರನ ಸೇವಿಸಿ ಸುಖಿಯಾಗುವ.3
--------------
ವ್ಯಾಸರಾಯರು