ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ನೋಡಿದರು ಹಾನಂತೆ ಹರಿ ಎಲ್ಲ ಜಗವ ತುಂಬಿಹನಂತೆ ಪ ಮಣ್ಣುಮುಳ್ಳು ಎಲ್ಲ ಬಿಡದೆ ಸೋಸಿಲಿನೋಡಲಲ್ಹಾನಂತೆ ಅ.ಪ ಸಾಗರ ನಿಲಯ ತಾನಂತೆ ಕೂಗಲು ಕಂಬಂದಿ ಬಂದನಂತೆ ನಾಗಶಾಯಿದ್ದ್ವೊಯ್ಕುಂಠಂತೆ ಬೇಗನೆ ಸರಸಿಯಲ್ಲಿದ್ದನಂತೆ ನೀಗಿ ಚಂಚಲಮನ ಬಾಗಿ ವಿಚಾರಿಸಲು ಯೋಗಿ ವಂದ್ಯ ಎಲ್ಲಿಲ್ಲಂತೇ 1 ದ್ವಾರಕಾಪುರದಲ್ಲಿ ಮನೆಯಂತ ಕ್ರೂರನ ಸಭೆಗೊದಗಿದನಂತೆ ಸಾರನಿಗಮಕಗೋಚರನಂತೆ ಪೋರಗೆ ದೊರೆತ್ವವಿತ್ತನಂತೆ ಸಾರಮನದ ವಿಕಾರವಳಿದು ತಿಳಿ ಅ ಪಾರಮಹಿಮ ಯಾರೆಲ್ಲಂತೇ 2 ಘೋರರಕ್ಕಸ ಸಂಹರನಂತೆ ಸೇರಿಭಕ್ತರ ಸಲಹುವನಂತೆ ಮೂರು ಲೋಕಗಳ ದೊರೆಯಂತೆ ಸಾರಥಿತನ ಮಾಡಿದನಂತೆ ಮೂರುಲೋಕದ ಧಣಿ ಓರ್ವ ಶ್ರೀರಾಮನೆ ಆರಾಧಿಪರಲ್ಲಿ ಹಾನಂತೆ 3
--------------
ರಾಮದಾಸರು
ಜಾಣಿ ರಂಗಯ್ಯನ ಕಾಣದೆ ನಿಲ್ಲದು ಮನ ವಾಣಿ ರಮಣನ ಪಿತನ ವೇಣದಿ ಕರೆತಾರಮ್ಮ ಪ. ಜರಿಯ ಸುತನು ತಾನು ಜಗಳಕೆ ಬಾಹೋನೆಂದು ಕರೆಸಿದ ವಿಶ್ವಕರ್ಮನ ಕರೆಸಿದ ವಿಶ್ವಕರ್ಮನ ದ್ವಾರಕಾವಿಪುರನಿರ್ಮಿಸೆಂದ ಕ್ಷಣದಾಗೆ ಜಲದೊಳು1 ತಳಿರು ತೋರಣನಿವಹ ಮೇರುವಿಗೆ ಪೊನ್ನ ಕಳಸ ಮೇರುವಿಗೆ ಪೊನ್ನ ಕಳಸ ಕನ್ನಡಿ ಮನೋಹರವಾಗಿದ್ದು ಸಟಿಯಿಲ್ಲ2 ದ್ವಾರಕಾಪುರದ ಶೃಂಗಾರ ವರ್ಣಿಸಲು ಮೂರು ಕಣ್ಣವಗೆ ವಶವಲ್ಲಮೂರು ಕಣ್ಣವಗೆ ವಶವಲ್ಲ ನಾಲ್ಕು ಮುಖದವಗೆ ಬಲುಮಿಗಿಲು3 ಹದಿನಾರು ಸಾವಿರ ಚದುರೆಯರ ಮಂದಿರ ಮದನನಯ್ಯನ ಮನೆಮಧ್ಯಮದನನಯ್ಯನ ಮನೆಮಧ್ಯ ದ್ವಾರಕೆಅದ್ಬುತವಾಗಿ ಬೆಳಗಿದೆ 4 ಶಿಶುಪಾಲ ದಂತವಕ್ತ್ರ ಮೊದಲಾದ ಮಹಾಅಸುರರನ್ನೆಲ್ಲ ಅಳುಹಿದ ಅಸುರರನ್ನೆಲ್ಲ ಅಳಿದು ದ್ವಾರಕೆಯಲ್ಲಿನಸು ನಗುತಿದ್ದ ನರಹರಿ 5 ಸತ್ಯದಿ ರುಕ್ಮಿಣಿ ಸತ್ಯಭಾಮಾದೇವಿ ವಾರಿಜ ಮುಖಿ ಷಣ್ಮಹಿಷೇರಸಹಿತಾಗಿಷಣ್ಮಹಿಷೇರ ಸಹಿತಾಗಿಕಾರುಣ್ಯಸಿಂಧು ರಾಮೇಶ ಕುಳಿತಿದ್ದ 6 ಶ್ರೀ ರಮಾರಮಣನಾದ ಶ್ರೀ ಕೃಷ್ಣನ ಅರಮನೆಗೆಸುಭಧ್ರೆ ಮುಯ್ಯ ತರುತಾಳೆಸುಭಧ್ರೆ ಮುಯ್ಯ ತರುತಾಳೆÀಹಸ್ತಿನಾವತಿಯ ಭೂಸುರರೆಲ್ಲ ಬರತಾರೆ7
--------------
ಗಲಗಲಿಅವ್ವನವರು
ದುರಿತ ವಿನಾಶನಾ ದುರಿತ ಇಂದು ಪುರಂದರನ ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ ಉದ್ಧಾರ ಸಂದೇಹ ಸಲ್ಲದಿದಕೆ ಪ ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ ಚಾರು ಮಂಡಿತನಾಗಿ ಇರುತಿರಲು ಯದು ಪರಿ ವಾಲಗ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ ನಾರದನು ಧರೆಗಿಳಿದನು 1 ಬರುತಲೇ ವೈಕುಂಠಪುರದರಸಗೆರಗಿದನು ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ ಮೂವತ್ತೆರಡು ರಾಗಗಳಲಿದಿರುನಿಂದು ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ ಸುರರು ಶಿರವನೆ ತೂಗಲು2 ಅಚ್ಚುತನು ಪರಮ ಭಾಗವತನ್ನ ಭಕುತಿಗೆ ಮೆಚ್ಚಿದನು ಬೇಡುವುದು ವರವಧಿಕವೆಂದೆನಲು ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ- ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ 3 ವರ ಪಡೆದು ನಾರದನು ಇರುತಿರಲು ತಾವಿತ್ತ ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ ಪುರಂದರವೆಂಬ ನಗರಿಯಲ್ಲಿ ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ 4 ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ- ದೆಂದು ಇಂದಿರೆಪತಿಯು ದಯದಿಂದ ವಲಿದವರ ಕುಣಿಕುಣಿದು ನಂದವನೆ ತೋರಿಕೊಳು ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ ಪರ ಬೊಮ್ಮ ಬಂದು ಸಿಲುಕಿದನೆಂಬುವುದೆ ಇದಕೆ ಪ್ರಾಮಾಣ್ಯವೆಂದು ತಿಳಿದು ಸುಜನರು 5 ವಾಸವನೆ ಮಾಡಿದರು ಪ್ರಹ್ಲಾದನವತಾರ ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ ಪುರಂದರ ದಾಸರೆಂಬುವ ಪೆಸರಲಿ ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು ವಸಿಸಿದರು ಧರ್ಮಬಿಡದೆ 6 ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ ತಟಿನಿಗಳು ತಪಸು ಫಲವಾಯಿತೆಂದು ತಪನ ಕಾಲದಲೆದ್ದು ದಾಸರಾ ಸದನದಲಿ ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ ಸುಪಥವನು ಇಚ್ಛಿಸುವರು 7 ಅವರೆಂದ ವಚನಗಳೆÀಲ್ಲ ವೇದಾರ್ಥವಾಗಿ ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ ಭುವನ ನಿಧಿಯೊಳಗೆ ಮುಳುಗಿ ಪವನ ಮತವಿಡಿದು ಪರಿಪೂರ್ಣಮಾಚಾರದಲಿ ತವಕದಿಂದಲಿ ಹರಿಯ ಪಾದವನೆ ಪಡಕೊಂಡು ನವರೂಪಿನಲಿ ಇಪ್ಪರು 8 ಏನು ಇದು ಎಂತೆಂದು ದೂಷಿಸದಿರಿ ದಾಸರ ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ ಕಾಣುವಾ ಜನ ಲಾಲಿಸೆ 9
--------------
ವಿಜಯದಾಸ
ನಲಿನಲಿದರು ದ್ವಾರಕಾಪುರದಿ ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ. ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ. ಅಂಬರದಲಿ ಭೇರಿ ವಾದ್ಯಗಳೆಸಗೆ ತುಂಬುರು ನಾರದರು ಗಾನವ ಪಾಡೆ ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1 ವಿಪ್ರರು ವೇದ ಮಂತ್ರವ ಪಠಿಸೆ ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2 ದೇವಕಿ ವಸುದೇವನಿಗ್ಹರುಷವನಿತ್ತು ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ ಕಾವ ಸಕಲ ಜೀವರ ಹೃದಯನಿವಾಸ ದೇವ ಯಶೋದೆ ನಂದ ಕಂದನ ನೋಡಿ 3
--------------
ಸರಸ್ವತಿ ಬಾಯಿ
ಪಲಿಮಾರು ಮಠದ ಶ್ರೀರಘುವರ್ಯರ ಕೃತಿಗಳು ಯುಗ್ಮ ಉಡುಪಿನ ಕೃಷ್ಣನೇ 1 ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾ ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ2 ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ ಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ 3 ಮೊಸರು ಭಾಂಡವನೊಡೆದು ಬೆಣ್ಣೆಯನಸುನಗುತಲೀ ಭಕ್ಷಿಸೀ ಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ4 ಸತಿ ನುಡಿದಳು 5 ವಿತತ ವೈಭವ ಈ ಪರಿಯಲಿಪ್ರತಿಮೆಯನ್ನೇ ಮಾಡಿಸಿ ಸತತ ಪೂಜೆಯ ಮಾಳ್ಪರೀ ಅತಿ ಪ್ರೀತಿಯಿಂದಲಿ ಕೊಡು ಎನಗೆ 6 ಪರಿ ಪೇಳೆ ವಿಶ್ವ-ಕರ್ಮನಿಂದಾ ಮಾಡಿಸಿ ಕಮಲನಾಭನು ಇತ್ತು(ದ್ದು) ಅದರಲಿ ವಿಮಲ ಪೂಜೆಯ ಕೊಂಡನು 7 ಶರಧಿ ತೀರದಲಿತ್ತನು8 ನಾವೆಯಲ್ಲಿ ಗೋಪಿಚಂದನ ಸಂವೃತಾರ್ಚಯು ಬರುತಿರೆ ನಾವೆಯೊಡೆಯಲು ಮಧ್ವಮುನಿಪನು ಭಾವದಿಂದಲೆ ತಂದನು 9 ಅವರರೊಡೆಯ ಶ್ರೀ ಮರುತಪತಿತತ್ ಪ್ರತಿಷ್ಠೆಯ ವಿರಚಿಸಿ ಕುಮುದ ಬಂಧು ಕ್ಷೇತ್ರದಲಿ ನಿ-ನ್ನಮಿತ ಪೂಜೆಯ ಮಾಡಿದ 10 ನನ್ನ ಹಿರಿಯರ ಪುಣ್ಯ ಫಲಿಸಲು ನಿನ್ನ ಪೂಜೆಯ ಮಾಡುತಧನ್ಯನಾದೆನು ಮುಕ್ತಿ ಕರಗತ ಎನ್ನಗಾಯಿತು ಕೃಷ್ಣನೇ 11 ಮಧ್ವಪೂಜಿತ ರಕ್ಷಿಸೆನ್ನನು ಸಾಧ್ವಸೋಝ್ಝಿತ ಸದ್ಗುಣ ಸಾಧ್ವಲಂಕೃತ ವೇಷ ಮುಕ್ತಿ ಪ-ದಾಬ್ಜನೇ ರಘುತಿಲಕನೇ 12
--------------
ಅನ್ಯದಾಸರು
ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ದ್ವಾರಕಾಪುರದವರು ಪ. ದಟ್ಟಾದ ಬೀದಿಯಲಿ ಪಟ್ಟಾವಳಿಯ ಜವಳಿ ಇಟ್ಟು ಮಾರುವರು ಕಡೆಯಿಲ್ಲಇಟ್ಟು ಮಾರುವರು ಕಡೆಯಿಲ್ಲದ್ವಾರಕಾಶೆಟ್ಟರ ಭಾಗ್ಯ ಸರಿಗಾಣಿ1 ಅಚ್ಚ ಜರತಾರಿ ಹೆಚ್ಚಿನ ಜವಳಿಯಚಿತ್ರದ ಮಲ್ಲಿಗೆ ನಡುವಿಟ್ಟಚಿತ್ರದ ಮಲ್ಲಿಗೆ ನಡುವಿಟ್ಟು ಅಲ್ಲಲ್ಲಿಹಚ್ಚಿ ಮಾರುವವರು ಕಡೆಯಿಲ್ಲ 2 ಜವಳಿ ಅಂಗಡಿ ಮುಂದೆ ಹವಳಗಾರರು ಅಲ್ಲಿ ಕೊಳ್ಳುವ ನಾರಿಯರು ಕಡೆಯಿಲ್ಲ ಕೊಳ್ಳುವ ನಾರಿಯರು ಕಡೆಯಿಲ್ಲ ದ್ವಾರಕಾಕಳೆಯ ವರ್ಣಿಸಲು ವಶವಲ್ಲ 3 ಕಂಚು ಹಿತ್ತಾಳೆ ಮಾರುವ ಕಂಚುಗಾರರಂಗಡಿಸಂಚಿತವಾದ ನವಧಾನ್ಯಸಂಚಿತವಾದ ನವಧಾನ್ಯ ಅಲ್ಲಲ್ಲಿಹಚ್ಚಿಮಾರುವವರು ಕಡೆಯಿಲ್ಲ4 ರಂಗ ರಾಮೇಶನ ನಗರೀಲೆ ಬಂಗಾರ ಬೆಳ್ಳಿ ಬೆಲೆ ಮಾಡಿಬಂಗಾರ ಬೆಳ್ಳಿ ಬೆಲೆ ಮಾಡಿ ಮಾರುವ ರಂಗದುಟಿಯವರುಕಡೆಯಿಲ್ಲ 5
--------------
ಗಲಗಲಿಅವ್ವನವರು
ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಪ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ | ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1 ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2 ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3 ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4 ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5 ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ 6 ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
--------------
ವಿಜಯದಾಸ