ಮಲಗು ಮಲಗಯ್ಯ ಹನುಮ ಕಲಿಭಂಜನ ಭೀಮ
ಜಲಧಿ ಅಲವಬೋಧನಾಮಾ ಜೋ ಜೋ ಪ
ತ್ರೇತೆಯಲಿ ರಾಮದೂತನಾಗಿ ನೀ ಬಂದು
ಭೀತಿಯಿಲ್ಲದೆ ಲಂಕೆಯ ದಹಿಸಿದೆಯೊ ಅಂದು
ಸೀತೆಯಿತ್ತಂಥ ಚೂಡಾಮಣಿಯನು ತಂದು
ಪ್ರೀತಿಪಡಿಸಿದೆ ರಾಮನ ನೀ ದಯಾಸಿಂಧು 1
ದ್ವಾಪರಾಂತದಲಿ ಭೀಮನಾಗಿ ನೀ ಬಂದೆ
ಪಾಪಿ ಕೀಚಕ ದುಶ್ಶಾಸನಾದ್ಯರ ಕೊಂದೆ
ಸಿರಿ ಕೃಷ್ಣನ ಪಾದಕೆರಗಿ ನಿಂದೆ
ಭಾಪು ಭಾಪುರೆಂದೆನಿಸಿಕೊಂಡೆ ಅವನಿಂದೆ 2
ನಾನೆ ದೇವರೆಂಬ ಮತವನು ಹೆಮ್ಮೆಯಿಂದ
ದಾನವರೀ ಕಲಿಯುಗದಲಿ ಪೊಗಳೆ ಮುದದಿಂದ
ನೀನವತರಿಸಿ ಮಧ್ವಮುನಿ ಪೆಸರಿನಿಂದ
ಹೀನ ಮತವ ಮುರಿದೆಯೊ ವಾಗ್ಭಾಣಗಳಿಂದ 3
ಏಕಾದ್ಯಶ ಕರ್ಮಗಳ ಶ್ರೀ ಹರಿಗರ್ಪಿಸಿ
ಆತನನು ನೀ ಬಹು ಸಂತೋಷವನುಪಡಿಸಿ
ಜಾತರಹಿತನಾಗೆನುತ ಆಶಿಷವ ವಹಿಸಿ
ವಾತಸುತ ಕುಳಿತಿಹೆ ಯಂತ್ರೋದ್ಧಾರನೆನಿಸಿ 4
ಕಂಗಳನು ಮುಚ್ಚಿ ಜಪಮಾಲೆಯನು ತಿರುಗಿಸುತ
ರಂಗೇಶವಿಠಲನ ತಾನದೊಳು ಸ್ಮರಿಸುತ
ಹಿಂಗೇಕೆ ಕುಳಿತಿಹೆ ಮಲಗೇಳಯ್ಯ ದಾತ
ತುಂಗ ವಿಕ್ರಮ ನೀನು ತ್ರಿಭುವನದಿ ಪ್ರಖ್ಯಾತ 5