ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ ಚಿಂತಿಸು ಮನವೆ ನಿರಂತರ ಶ್ರೀಮದ ನಂತಗಿರಿಯಲಿ ನಿಂತು ಭಜಕರ ಚಿಂತಿತಪ್ರದ ನಂತಶಯನನ ಅ.ಪ ಶಾಂತ್ಯಾದಿ ಗುಣಭರಿತ ಮಹಂತ ಮುನಿ ಮಾ ರ್ಕಾಂಡೇಯಗೊಲಿದು ಸತತ ಪರ್ವತದಿ ಲಕ್ಷ್ಮೀ ಕಾಂತನೆಸುರ ಸಹಿತ ಸನ್ನಿಹಿತನೆನುತ ಕಂತುಹರನುತ ನಂತ ಮಹಿಮನ ಸಂತಸದಿ ಸಂತುತಿಸುತಲಿ ತ- ದಿನಕರಾನಂತ ದೇವನ 1 ನಾರ ಶಿಂಹನದರ್ಶನ ಕೊಳ್ಳುತಿರೆ ಮುನಿ ಬಲ ದ್ವಾರದಿಂದಲಿ ಪ್ರತಿದಿನ ವಿರುತಿರೆ ಪ್ರಥಮ ದ್ವಾದಶಿಯೊಳು ಸಾಧನ ತಕ್ಷಣ ಪ್ರಸನ್ನ ಸೂರ್ಯಸುತನ ಉದಯದಲಿ ಭಾಗೀರಥಿಯು ಪು ಷ್ಕರಣಿಯೊಳು ಬರೆ ಪಾರಿಜಾತದ ಭೂರುಹಂಗಳ ಚಾರುರೂಪವ ತೋರಿದಾತನ 2 ನೀರಜಾಸನ ವಂದಿತ ಬಂಗಾರಮಕುಟ ಕೇಯೂರ ಕಂಕಣ ಭೂಷಿತ ಚಕ್ರಾದಿ ಚಿನ್ಹಿತ ಚಾರುಶಿಲೆಯೊಳು ಸನ್ನಿಹಿತ ಭಜಕರನು ಪೊರೆಯುತ ವಾರವಾರಕೆ ಭಕುತಜನ ಪರಿವಾರದಿಂ ಸೇವೆಯನು ಕೊಳ್ಳುತ ಧಾರುಣಿಯೊಳು ಮೆರೆವ ಕಾರ್ಪರ ನಾರಶಿಂಹಾತ್ಮಕ ಸ್ವರೂಪನ3
--------------
ಕಾರ್ಪರ ನರಹರಿದಾಸರು