ನಾರಾಯಣ--------ಜಾಯನಮ: ಪ
ಸರ್ವವಾರಿಜೋದ್ಭವ ಹರಿ ನೀ ಪೊತ್ತ
ಶಿರಲೋಕ ಎರಡೇಳಾರೊಳಾನೇಕ ದ್ವಾದಶಾದಿ--
ಶಾಸನ ಆದಿದಿಕ್ಪಾಲರಾ ಬೇಕಾದ ಹಾಗೆ
ಪತಿ ¨್ರಹ್ಮನೀನೆ 1
ಜಗದೊಳು ಹುಟ್ಟಿದ ಪ್ರಾಣಿಗಳಿಗೆ ಎಲ್ಲ
ಬಗೆ ಬಗೆ ಸಂಹಾರ ಕರ್ತನಾಗಿ
ಅಗಣಿತ ಮಹಿಮ ತಾಮಸಯುಕ್ತನಾದಂಥ
ಮೃಗ ಚರ್ಮಾಂಬರಧರ ಮಹಾದೇವನೀನೆ 2
ಸಕಲ ಚರಾಚರ ಸಲಹುತಲಿರುವಂಥ
ನಿಕರಾದಿ ಸಾತ್ವಿಕ ನಿಜಧರ್ಮಾದಿ
ಅಕಲಂಕ ಮಹಿಮ ಶ್ರೀಹರಿ 'ಹೊನ್ನ ವಿಠ್ಠಲ’
ಸಕಲ ಸ್ವತಂತ್ರನಾದ ಸರ್ವೋತ್ತಮ ನೀನೆ 3