ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತ ಅನಂತ ಗೋವಿಂದಾಯ ಕಾಯ ಪೂಜಾ ಪ ದ್ವಾದಶನಾಮದ ನಾರಾಯಣಾರ್ಚನೆ ದ್ವಾದಶಬಾಧೆಯ ಕಳೆಯುವ ಕೀರ್ತನೆ ಅ.ಪ ಕೇಶವಾಯ ನಮಃ ಓಂ ಕೇಶವಾಯ ನಮಃ ಕ್ಲೇಶವು ಕರಗಿ ಈಶನು ಮನದಲಿ ನಿಲ್ಲುವನು 1 ಮಾಧವಾಯನಮಃ ಓಂ ಮಾಧವನೆನೆ ಕ್ರೋಧವು ಅಳಿದು ಮೋದದಿ ಮನ ಮಿಡಿಯುವುದು 2 ವಿಷ್ಣುವೇನ್ನಮಃ ಓಂ ವಿಷ್ಣುವೆನ್ನಿರಿ ಸ- ಕಾಯ ಕರ್ಮನಿಷ್ಠೆಯಲಿ 3 ಮಧುಸೂದನಾಯನಮಃ ಓಂ ಮಧುಸೂಧನಾಯ ಮದಗಳೆಂದೂ ಮಥಿಸೋಡುವವು ತಿಳಿಯ 4 ತ್ರಿವಿಕ್ರಮಾಯನಮಃ ಓಂ ತ್ರಿವಿಕ್ರಮನೆನಲು ಭವಿಯುಕಾಮಮೋಹತೊಲಗಿ ಕೋಮಲನಾಗುವನು 5 ಶ್ರೀಧರಾಯನಮಃ ಓಂ ಶ್ರೀಧರಾಯವೆನ್ನಿ ಸೋದರತ್ವಮೂಡಿ ಮತ್ಸರ ಮರೆಯುವುದು 6 ಹೃಷಿಕೇಶಾಯನಮಃ ಓಂ ಹೃಷಿಕೇಶನೆನು ಹುಸಿಯನಾಡದ ಲೋಭರಹಿತ ತನುವೀಯುವನು 7 ಪದ್ಮನಾಭಾಯನಮಃ ಓಂ ಪದ್ಮನಾಭನೆನಲು ಛದ್ಮವೇಶನ ದ್ವಾದಶಾಪೇಕ್ಷೆಗಳೀಡಾಡುವವು 8 ದಾಮೋದರಾಯ ನಮ:ಓಂ ದಾಮೋದರೆಂದರೆ ಆಮೋದದಿ ಮನ ಶ್ರೀಹರಿಪದಕೆರಗುವುದು9 ವಾಮನಾಯನಮ:ಓಂ ವಾಮನನೆಂದರೆ ಅಮಮ! ನಿಲ್ಲುವ ಕಣ್ಮುಂದೆ ನೆಲಮುಗಿಲೊಂದಾಗಿ 10 ಆಳ್ವಾರಾಚಾರ್ಯರಾದಿ ಗುರುಗಳು ಪೇಳಿದ ಈ ಮಂತ್ರ ಸೂತ್ರ 11 ಅನುದಿನ ಬಿಡದೆ ಮನದಲಂದರು ಸಾಕು ಸನುಮತದಲಿ ಕಾಯ್ವ ನಮ್ಮ ಜಾಜಿಕೇಶವ 12
--------------
ನಾರಾಯಣಶರ್ಮರು
ಇಂದು ವನಜದಳಾಂಬಕ ದೊರೆಯ ಪ. ಕನಸಿನಲೆ ಕಂಡೆನು ಮನಸಿಜನಯ್ಯನ ದನುಜಸಂಕುಲವನೆಲ್ಲವ ಕ್ಷಣದಿಸವರಿದ ಕಡುಗಲಿರಾಮನ ಅ.ಪ. ವರ ರನ್ನಹಾರ ಕಿರೀಟ ಕೋಟಿತರಣಿಸನ್ನಿಭಸಂಕಾಶ ಕೌಸ್ತುಭ ಶ್ರೀವತ್ಸ ಲಾಂಚಿತವಕ್ಷ | ಕೊರಳೊಳು ಧರಿಸಿರ್ಪ ವರರತ್ನ ಹಾರಂಗಳ್ | ತರುಣಿ ಶ್ರೀ ತುಳಸೀ ವನಮಾಲೆಯಿಂದೊಲಿಯಲ್ | ಪರಮ ಮಂಗಳಮೂರ್ತಿವರದ ಹಸ್ತವನೆತ್ತಿ | ಶರಣಜನ ಮೋಹಿಪ ದುರುಳ ರಕ್ಕಸರ ಬೇರಸವರಿದ ಪಾರಕೀರ್ತಿ | ಅರಿತೆನಾ ತರಳ ಪ್ರಹ್ಲಾದನಂ ಪೊರೆದ ಕರುಣಾಮೂರ್ತಿ 1 ವೇದಪಾರಾಯಣಗೈವ ವರದ್ವಾದಶನಾಮದಿ ಮೆರೆವ ಕೀರ್ತನದಿಂ ಮೈಮರೆವ | ಸಾಧುಸಜ್ಜನವೃಂದ ಭಕ್ತಿಭಾವದಿ ಕೈಕಟ್ಟಿ | ಶ್ರೀಧರಾಚ್ಯುತ ಪಾದ ಸಮ್ಮುಖದಿ ನಿಂದು ಭಜಿಪರ ಪರಮಾದರದೆನೋಡಿ | ಶ್ರೀದೇವಿ ಕೆಲದೋಳ್ ನೆಲಸಿರಲ್ ಮನದಿ ಸಂತಸವು ಮೂಡಿ | ಸಾದರದಿ ಕರೆದಾದರಿಸಿ ಕಾಂಕ್ಷಿತಾರ್ಥವನೀಡಿ | ಮೋದಗೊಳ್ಳುತಿಹ ಶ್ರೀಧರನ ಕಂಡು ಮೈಮರೆದೆನೇನಿವನ ನೋಡಿ 2 ಕನಕಖಚಿತ ರತ್ನಮಂಟಪದ ಮಧ್ಯೆ | ಮಿನುಗುವ ಮಣಿಪೀಠದಿ ವೈದೇಹಿ | ವನಜಾಕ್ಷಿ ಕುಳಿತಿರಲು ಕೆಲದೊಳ್ ಮರುತಾತ್ಮಜ | [ನುನಮಿಸ] (ರ)ಲು ಪರಮಸಂಭ್ರಮದಿ ಸೋದರರು ಸಂಸೇವಿಸೆ | [ವÀನ] ತರಣಿಸುತ ಸಪರಿವಾರ ಸಂಭ್ರಮಿಸೆ, ಶರಣ ವಿಭೀಷ | ಣನು ಜಯಘೋಷವೆಬ್ಬಿಸೆ ವರವಸಿಷ್ಟಾದೈಖಿಲ | ಮುನಿವರ ರಾಶೀರ್ವಚಿಸೆ ಸರಸವಚನವೆರಸಿ ರಘುವರ ವರನೆ ತಾನೆಂದು ತೋರೆ 3
--------------
ನಂಜನಗೂಡು ತಿರುಮಲಾಂಬಾ