ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಚಿಂತಿಸಿ ನೀನು ಬಳಲುವದೇಕೆ ಮನವೆ ಹರಿನಾಮ ಸ್ಮರಣೆಯು ಹರುಷದಲಿ ಸ್ಮರಿಸಿ ಧರ್ಮಾರ್ಥ ಕಾಮ ವರಮೋಕ್ಷ ಫಲಗಳು ಕರುಣಾ ಕಟಾಕ್ಷದಿಂದ ಶ್ರೀಧರ ನಿರುತ ಕೊಡುವ ಪ ಅರಿಷಡ್ವರ್ಗಕೆ ಸಿಲ್ಕಿ ಅರಿಯದೆ ಭವಸಾಗರದೊಳು ಮುಣುಗಿ ಮೈಮರೆದು ಶ್ರೀನರಹರಿ ಶರಣರ ಪೊರೆವ ಬಿರುದುಳ್ಳಂಥ ಗರುಡವಾಹನ ಸಿರಿಯರಸ ಪರಮಾತ್ಮನ ಕಮಲ ಅನುದಿನ 1 ನೆಚ್ಚಿ ನೀ ಮಂದಾಂಧನಾಗಿ ಅಂದು ಪ್ರಹ್ಲಾದ ಪರಮಾನಂದದಿ ಕರೆಯಲು ದ್ವಂದ್ವರೂಪತಾಳಿ ಬಂದು ಕಾಯಿದಾ ವೃಂದಾರ ಕೇಂದ್ರನುತ ಮಂದರಧರ ಮುಚುಕುಂದ ವರದನ್ನ ಸಲಹೆಂದು ಮೊರೆಯ ಹೋಗದೆ 2 ನರಜನ್ಮ ತಾಳಿ ಸುಖಸ್ಥಿರ ಮಾರ್ಗ ಕಾಣದೆ ಸತ್ಪುರುಷರ ಜರಿದು ಗರ್ವ ಭರಿತನಾಗಿ ಮುರನರಕಾಂತಕ ಮುಕ್ತಿದಾಯಕ ಶುಭಕರ ಸ್ಮರಜನಕ ಶ್ರೀಧರ ಮಾಧವ ತ್ವರದಿ ರಕ್ಷಿಸೋಯನ್ನ ಹರಿಸರ್ವೋತ್ತಮ ನೆನದೆ 3
--------------
ಹೆನ್ನೆರಂಗದಾಸರು