ಜಯದೇವಿ ಜಯದೇವಿ ಜಯ ಆದಿಶಕ್ತಿ|
ಜಯಜಯಚಂದ್ರಲೆಮಾತೆ ರವಿಶತ ನಿಜದೀಪ್ತಿ ಪ
ಸುರಮುನಿ ಸೇವಿತವಾದಾ ಚಾರುವಿಲಾಸದಲೀ |
ಇರುತಿರೆ ನಾರಾಯಣಮುನಿ ಭಕುತಿಗೆ ಪ್ರೇಮದಲೀ |
ಕರುಣದಿಭೀಮರಥಿಯಾ ಬಂದು ನೀ ತೀರದಲಿ |
ದಾರಿ ತಪ್ಪಿದ ದುರುಳನ ಮರ್ದಿಸಿ ಭೃಮರದಲಿ 1
ಅಂದಿಗಿಂದಿಗೆ ನಿಂತು ಪ್ರಸನ್ನತಿ ಗ್ರಾಮದಲಿ |
ದ್ವಂದ್ವಚರಣವ ದೋರಿ ಮುಕುತಿಗೆ ಖೂನದಲಿ |
ಬಂದವ ದರ್ಶನ ಸ್ಪರ್ಶನ ಪೂಜನ ಮಾಡುತಲಿ |
ಚಂದದಿ ಇಹಪರ ಸುಖವಾ ಪಡೆದರು ಸುಲಭದಲಿ2
ವಿವೇಕ ಹರಿವಾಣದಿ ಭಾವದಾರತಿ ನಿಲಿಸಿ |
ತೀವಿದ ಸಮ್ಮಜ್ಞಾನದ ಜ್ಯೋತಿಯ ಪ್ರಜ್ವಲಿಸಿ |
ಆವಗುಬೆಳಗುವ ಮಹೀಪತಿ ನಂದನತಾನಮಿಸಿ |
ಅನುದಿನ ಅಪರಾಧವ ಕ್ಷಮಿಸಿ 3