ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಇಂದುಧರನ ಪಾದದ್ವಂದ್ವಗಳನು ದಿನವು | ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು | ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಪ ಸತಿಗೆ ಅಧರ್Àಕಾಯ ಹಿತದಿಂದಲಿ ಇತ್ತು | ಚತುರತನದಲಿಳೆಯೊಳು ಪತಿತ ಮಾನವರಿಗೆ | ಮತಿಬಾಹದೊ ಮಾನಸ ಸತತ ದೃಢವನೀವ | ಪ್ರತಿದಿನದಲಿ ಕಾಯ್ವಾ 1 ವಿಷವ ಧರಿಸಿ ಸುಮನಸರ ನಡುವೆ ಮೆರೆದೆ | ಪಶುವಾಹನ ಪರಮೇಶ ಅಸುರಾರಿಗಲ್ಲದ | ಅಸುರರ ಕೊಲ್ಲುವ ರಂಜಿಸುವಾ | ಶಶಿ ಜಟಾ ಕಮನೀಯ ಮಣಿಮಕುಟಾ 2 ಕಡಲ ತಡಿಯವಾಸ | ವೊಡಿಯ ರಾಮನ ದಾಸ | ಮೃಡರುಂಡ ಮಾಲಾಭೂಷಾ || ಬಿಡದೆ ಸೇತುಬಂದ ವಿಜಯವಿಠ್ಠಲನ | ಅಡಿಗಡಿಗೆ ನೆನೆಸುವ ಶಿವರಾಮಲಿಂಗಾ 3
--------------
ವಿಜಯದಾಸ
ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ದಾಶರಥೇ ದಯಮಾಡು ನಿನ್ನ ದಾಸದಾಸನ ನೋಡುದಾಸದಾಸನ ನೋಡು ಮುದ್ದು ದಾಶರಥೇ ದಯ ಮಾಡು ಪ ನೀರಜಾಕ್ಷ ನಿಜ ಮಾಯ ಮಮತೆ ಸಂಸಾರ ಶರಧಿಯೊಳು ಬಿದ್ದುಪಾರುಗಾಣದೆ ಬರಿದೆ ಪೋಗುವಾ ತಾರಕ ಬ್ರಹ್ಮ ನೀನೆಂದೂ 1 ವಿಶ್ವ ಕುಟುಂಬನೆ ಎನಗಾ ಇಂಗುಗೊಡದೆಯೆಲ್ಲರ್ಗಲ್ಲಿ 2 ಇಂದಿರೇಶ ಮುಚುಕುಂದ ವರದ ಮುನಿ ವಂದ್ಯನೆ ದಶರಥ ಕಂದಾಚಂದದಿ ನಿನ್ನ ಪದದ್ವಂದ್ವಗಳನುದಿನ ವಂದಿಸುವೆನುಮುದದಿಂದಾ3
--------------
ಇಂದಿರೇಶರು
ಶ್ರೀ ಗಣಾಧಿನಾಥಾಶ್ರಿತ ಸೌಖ್ಯಧಾತ ಪ ನಾಗಭೂಷಣಸುತ ನಾರದಾದಿವಂದಿತ ಅ.ಪ ಗಜವದನ ಗಣೇಶ ಲಂಬೋದರ ಗಿ- ರಿಜಾಮಲ ಸಮುದ್ಭವ ಭೂತೇಶ ಭೂರಿ ಭಜಿಸುವೆ ನಾನಿನ್ನ ಸುಜನರ ಕಾರ್ಯಕೆ ಬರುತಿಹ ವಿಘ್ನ ರಜಗಳಿಗೆ ನಮೊ ನಮೋ ಎಂಬುವೆನಾಂ 1 ಇಂದುಧರನ ತನಯಾ ರವಿ ಶಶಿ ಸಂ- ಕ್ರಂದನ ಮುಖ ಸುರಬೃಂದ ಸೇವ್ಯಮೃದು ಮಂದಹಾಸ ಪೂರ್ಣೇಂದುವದನ ಸ್ಫುರಿ- ತೇಂದೀವರನಯನಾ ಇಂದಿನದಿನ ಸಕಲ ದೇಶದವರು ಮುದ- ದಿಂದ ನಾಟಿ ಭೈರವಿ ಶ್ರೀರಾಗಗ- ದ್ವಂದ್ವಗಳನು ಕೊಂಡಾಡುತಲಿಹರೊ 2 ಪಾಶಾಂಕುಶಗಳ ಕರದಿ ಹಿಡಿದು ನಿಜ- ದೋಷದೂರ ಗುರುರಾಮವಿಠಲನ ದಾಸರದಾಸ್ಯವನಿತ್ತು ಸದಾಸಂ- ತೋಷದಿಂದ ಪಾಲಿಸು ಎನ್ನನು ಸ- ರ್ವೇಶ ಮೋದಕ ಪ್ರಿಯ ವಿಘ್ನೇಶಾ 3
--------------
ಗುರುರಾಮವಿಠಲ