ಬಾರೋ ವೆಂಕಟೇಶ ಬೇಗ
ಬಾರೋ ಎನ್ನ ಮನೆಗೆ ಈಗ ಪ.
ಬಾರೋ ಲಕ್ಷ್ಮೀರಮಣ ಶ್ರೀಶಾ
ಬಾರೋ ಸರ್ವರ ಹೃದಯವಾಸ ಅ.ಪ.
ಸರ್ಪಶಯನಾಗಿ ಬೇಗ ಕ್ಷಿಪ್ರದಿ ಲಕ್ಷ್ಮೀಸಮೇತ ಇರಲೂ
ಪಾದ ತೊಳೆದ ದಯಾಳೂ 1
ಕುಂದನೊಂದೆಣಿಸದಂತೆ ಬಂದು ಕಾಯ್ದಜಮಿಳನಿಗೊಲಿದೆ
ತಂದೆ ಬಾಧೆಗೆ ತರಳ ಕೂಗೆ ಬಂದೆ ಸ್ತಂಬದಿ ನಾರಸಿಂಹ 2
ಕರಿಯು ಕೂಗೆ ಸಿರಿಗ್ಹೇಳದೆಲೆ ಭರದಿಬಂದು ಕಾಯ್ದ ಹರಿಯೆ
ತರುಳೆ ದ್ರೌಪದಿಗಕ್ಷಯವಿತ್ತಾ ಕರುಣವಾರಿದೆ ಶ್ರೀ ಶ್ರೀನಿವಾಸ 3