ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ರಾಯ ಹರಿಯ ಪ್ರಿಯ ಕೃಷ್ಣರಾಯದಾರಿ ನೋಡುವನು ತೊರೆಯದಿ ಅಪ್ಪಣೆಯ ಬೇಡಿ ಎರಗಿ ನಿಂತಳು ಪ. ಹರಿಯ ಬದಿಯಲಿ ಹೋಗಿ ನೀನು ಪರಮ ಪ್ರೇಮದಿಂದಲೈವರು ಬರುವರು ಈ ಕ್ಷಣದಲಿ ಎಂದು ಎರಗಿ ಹೇಳಮ್ಮ1 ಚಿತ್ತಜನೈಯನ ನೋಡಿ ಚಿತ್ತಹರುಷ ಬಡಿಸೆವಮ್ಮವೃತ್ತಾಂತವ ಹೋಗಿ ಹೇಳೆ ಕೀರ್ತಿವಂತಗೆ2 ಮಿತ್ರೆ ದ್ರೌಪತಿಯು ದೂತೆಗೆ ತೃಪ್ತಿಪಡಿಸಿ ಭೋಜನಾದಿಮುತ್ತು ರತ್ನದ ವಸ್ತ ವಸ್ತ್ರಗಳೆ ಕೊಟ್ಟಳು 3 ಅಂಬುಜಾಕ್ಷೆ ದ್ರೌಪತಿಯುತಾಂಬೂಲ ಅಡಿಕೆ ಕೊಟ್ಟುಸಂಭ್ರಮದಿ ಆನೆ ಅಂಬಾರಿ ಕೊಟ್ಟಳು 4 ಕುಂತಿದೇವಿ ಮೊದಲಾದವರುಕಾಂತೆಯರ ಪರಿವಾರ ಸಹಿತ ಕಂತುನೈಯನ ಕರೆಯ ಬರಲು ನಿಂತಾರಂತ್ಹೇಳೆ 5 ಪಂಚ ಪಾಂಡವರ ಮಡದಿ ಪಾಂಚಾಲಿ ದೇವಿಯುತಾನು ಕೆಂಚೆಯರಿಂದ ಕೂಡಿಮುಂಚೆ ಬಾಹೋರಂತ್ಹೇಳೆ6 ಪನ್ನಂಗ ಶಯನನ ನೋಡದೆ ಅನ್ನ ಸೊಗಸವಮ್ಮ ನಮಗೆ ಚನ್ನರಂಗಯ್ಯನ ಮುಂದೆ ಇನ್ನು ನೀ ಹೇಳೆ 7 ಮುದ್ದು ರಂಗನಮುಖವ ನೋಡದೆ ನಿದ್ರೆ ಬಾರದಮ್ಮ ನಮಗೆ ಹದ್ದು ವಾಹನನ ಮುಂದೆ ಸುದ್ದಿ ನೀ ಹೇಳೆ 8 ವೀತ ದೋಷ ರಾಮೇಶನ ಪ್ರೀತಿ ಇರಲಿ ಅಂತೆ ಹೇಳಮ್ಮಆತನ ಕಾಣದೆ ಒಂದು ಮಾತು ಸೊಗಸದು 9
--------------
ಗಲಗಲಿಅವ್ವನವರು
ಹರಿಯು ಉಂಬೊ ಹರುಷವಮ್ಮನಮ್ಮ ದೊರೆಗಳೈವರು ಮಾಡೊ ಉಪಚಾರವಮ್ಮಪಲ್ಲ ಮಂದಗಮನೆಯರ ಸಹಿತ ಕೃಷ್ಣ ಬಂದು ಮಿಂದು ಮಡಿಗಳನುಟ್ಟು ಶೀಘ್ರದಲಿ ಬಂದು ಕುಳಿತತಂದು ದ್ರೌಪತಿಯು ಬಡಿಸುತಿರಲು ಇಂದಿರೇಶ ಹರುಷದಲಿ ಉಣುತ 1 ಮೆಲ್ಲಗೆ ಉಣ್ಣಯ್ಯ ಯದುವೀರ ಹಿಂದೆ ಖಲ ಬುತ್ತಿಯ ಕದ್ದು ಉಂಡ ಅತಿಶೂರಗೊಲ್ಲರೆಲ್ಲರ ಕೂಡ ವಿಹಾರ ಗೊಲ್ಲರೆಲ್ಲರ ಕೂಡ ವಿಹಾರಿಎನಿಸಿ ಎಲ್ಲ ಪದಾರ್ಥ ಚಲ್ಲದಿರೊ ಧೀರ2 ಕದ್ದ ಬೆಣ್ಣಿಯ ನೆನೆಸಬೇಡ ನಮ್ಮ ಮುದ್ದು ರಾಮೇಶಗೆ ಬೇಕಾದ್ದು ಬೇಡೊ ಸಿದ್ಧ ದ್ರೌಪತಿ ನೀಡುತಿರಲು ಉದ್ದಿನ ಕಾಳಷ್ಟು ಭಿಡೆಯು ಬ್ಯಾಡ3
--------------
ಗಲಗಲಿಅವ್ವನವರು
ಧನ್ಯರೆ ನೀವು ಧನ್ಯರೆಪನ್ನಂಗ ಶÀಯನನ ಕನ್ಯೆಯರುನಮಮ್ಯಾಲೆ ಅನಂತ ದಯಮಾಡಿಮನ್ನಿಸಿ ಬನ್ನಿರಿ ಪ.ಇಂದಿರಾ ದೇವಿಯರು ಕುಂದುನೋಡದೆನಮ್ಮ ಮಂದಿರಕ್ಕೆ ಬನ್ನಿರೆಂದು ದ್ರೌಪತಿಯು 1ಮುದ್ದು ಪಾದಕೆ ನಾನು ಬಿದ್ದು ಬೇಡುವೆದಯಇದ್ದರೆ ಬಾ ಅನಿರುದ್ಧನ ರಾಣಿ 2ಕಡುಬ್ಯಾಗಸುಭದ್ರಾ ಅಡಿಗೆರಗುತಕರಹಿಡಿದು ರಾಮೇಶನ ಮಡದಿ ಬಾರಮ್ಮ 3
--------------
ಗಲಗಲಿಅವ್ವನವರು