ಒಟ್ಟು 10 ಕಡೆಗಳಲ್ಲಿ , 2 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ವರ್ಣಿಸಿ ದೂತೆ ಪ. ಗೆಜ್ಜೆ ಘಿಲ ಘಿಲಕೆಂದು ಬಂದಳು ದೂತೆಗುಜ್ಜಿ ದ್ರೌಪತಿಗೆರಗಿ ನಿಂತಳುನಮ್ಮ ಅರ್ಜುನಗೆ ಅತಿ ದಯವೆಂದಳು ನಿರ್ಜರೇಶನ ಕಂಡೆನೆಂದಳು1 ಕಳಕಳಿಯ ಸೂಸುತ ತನ್ನ ಥಳ ಥಳ ಮುಖಕಮಲ ಹೊಳೆವುತದೂತೆನಳಿನ ತೋಳಿನ ವಸ್ತ ಝಳ ಝಳಿಸುತಬಂದು ಕುಳಿತಳೆ ಮಾತಿನ ಚಪಲೆ 2 ನಡೆದು ಅಚ್ಯುತನಲ್ಲೆ ಹೋದೆಯಾ ಕೃಷ್ಣನ ಅಡಿಗೆರಗಿ ಮುಖ ನೋಡಿದೆಯನಯ ನುಡಿಯ ಮಾತುಗಳನೆ ಆಡಿದೆಯ ನಿಮ್ಮ ಒಡೆಯರ ಭಕುತಿ ಕೊಂಡಾಡಿದೆಯ ದೂತೆ 3 ಶಾಂತ ಮೂರುತಿ ನಿನ್ನ ನೋಡಿದನೇನಐವರಿಗೆ ಅಂತಃಕರುಣ ಭಾಳ ಮಾಡಿದನೇನಎನ್ನ ಅಂತರಂಗದ ಮಾತು ನುಡಿದೆಯೇನಲಕ್ಷ್ಮಿಕಾಂತನ ಗುಣ ಕೊಂಡಾಡಿದೆಯ ದೂತೆ4 ಎನ್ನ ದ್ರೌಪತಿ ಕಳುಹ್ಯಾಳೆಂದೇನೆ ಸ್ವಾಮಿನಿನ್ನ ಮಾತುಗಳ ಮನಕೆ ತಂದಾನೇನ ಕೃಷ್ಣ ಎನ್ನ ಪ್ರಾಣವು ಐವರದೆಂದನೇನಇನ್ನುದಯದ ಸುಗ್ಗಿ ಸುದ್ದಿ ತಂದೇನ ದೂತೆ 5 ಭಾವೆ ರುಕ್ಮಿಣಿಪಾದ ನೋಡಿದೆಯ ನೀನುಭಾವ ಭಕುತಿಯಲಿ ವಂದನೆ ಮಾಡಿದೆಯ ನಿಮ್ಮ ಮೋಹ ದ್ರೌಪತಿಗಿರಲಂದೆಯ ಮುಯ್ಯಾ ತಾಹೊ ವಿಸ್ತಾರವ ಕೊಂಡಾಡಿದೆಯ 6 ಪಾದ ಕಂಡೆಯಘೃತ ಹಾಲು ಸಕ್ಕರೆ ಸವಿದುಂಡೆಯ ವಸ್ತ್ರ ವೀಳ್ಯ ರಾಮೇಶನಿಂದ ಕೊಂಡೆಯನಿನ್ನ ಕಣ್ಣು ಹಬ್ಬವ ಮಾಡಿಕೊಂಡೇನ ದೂತೆ 7
--------------
ಗಲಗಲಿಅವ್ವನವರು
ಕರೆತಾರೆ ಕರೆತಾರೆ ಕರೆತಾರೆ ಸಖಿಜರ ಜರತಾರಿ ನೀರೆ ಅವರ ಸುರತ ರಂಗಯ್ಯನ ಗುರುತದ ಮಡದಿಯರ ಕರೆ ತಾರೆ ಪ. ಸೃಷ್ಟಿಗಧಿಕವಾದ ಪಟ್ಟಾವಳಿಯ ಸೀರೆಘಟ್ಟಿ ಕಂಕಣವ ನಡುವಿಟ್ಟುಘಟ್ಟಿ ಕಂಕಣವ ನಡುವಿಟ್ಟು ತಂದೆವ ಧಿಟ್ಟ ದ್ರೌಪತಿಗೆ ಉಡುಗೊರೆ 1 ಖಡ್ಡಿ ಪೈಠಣ ಸೀರೆ ದೊಡ್ಡ ಮುತ್ತಿನ ದಂಡೆಕಡ್ಡಿ ಬಳೆ ದೋರೆ ನಡುವಿಟ್ಟುಕಡ್ಡಿ ಬಳೆ ದೋರೆ ನಡುವಿಟ್ಟು ತಂದೆವಗುಣಾಢ್ಯ ಸುಭದ್ರಾಗುಡುಗೊರೆ2 ಅತ್ತಿ ಹೂವಿನ ಸೀರೆ ಕುತನಿ ಕುಪ್ಪುಸ ಸುತ್ತು ಮುತ್ತಿನ ನೆನೆದಂಡೆ ಸುತ್ತು ಮುತ್ತಿನ ನೆನೆದಂಡೆ ತಂದೆವ ಮಿತ್ರಿ ವೃಂದಾಗೆ ಉಡುಗೊರೆ 3 ಮೋತಿ ಚೂರಿನ ಸೀರೆ ಜಾತಿ ಮುತ್ತಿನ ದಂಡೆ ನೂತನವಾದ ಚವರಿಯ ನೂತನವಾದ ಚವರಿ ರಾಗಟೆಗೊಂಡೆಯ ಕಂಠಿ ಕಾಳಿಂದಿಗೆ ಉಡುಗೊರೆ4 ಸಾರಸನ ಸೀರೆ ತೋರ ಮುತ್ತಿನ ದಂಡೆಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ತಂದೆವನಾರಿ ಲಕ್ಷಣಾಗೆ ಉಡುಗೊರೆ5 ಅಂಬುಜಾಕ್ಷಿಗೆ ತಕ್ಕ ಗೊಂಬಿ ಪೈಠಣಿಸೀರೆ ಜಂಬುದ್ವೀಪದ ನೆನಿದಂಡೆ ಜಂಬುದ್ವೀಪದ ನೆನಿದಂಡೆ ತಂದೆವಜಾಂಬವಂತಿಗೆ ಉಡುಗೊರೆ6 ಸಾವಿರಕಬೆಲಿಯಾದ ಸೇಲ್ಯಾವಲಿ ಜವಳಿವೀರ ರಾಮೇಶನ ಮನಮೆಚ್ಚಿವೀರ ರಾಮೇಶನ ಮನಮೆಚ್ಚಿ(ದ) ಹದಿನಾರು ಸಾವಿರ ನಾರಿಯರಿಗೆ ಉಡುಗೊರೆ7
--------------
ಗಲಗಲಿಅವ್ವನವರು
ಕಾಣಿ ನಿನ್ನಂಥವಳ ಪ. ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1 ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2 ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3 ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4 ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5 ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6 ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7 ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8 ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9
--------------
ಗಲಗಲಿಅವ್ವನವರು
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ಪಚ್ಚ ಪವಳದ ಕೋಲಅಚ್ಚ ಮುತ್ತಿನ ಕೋಲ ತುಚ್ಚಗೊಯ್ಸಿದ್ರೌಪತಿಗೆ ಹುಚ್ಚು ಹಿಡಿಸುವ ಕೋಲ ಪ. ಧಿಟ್ಟೆರಿಬ್ಬರು ನಮಗೆ ಇಟ್ಟರು ಅಣೆಯ ಕೃಷ್ಣಯ್ಯ ಇದಕೆ ನಗಬಹುದು ಕೋಲಕೃಷ್ಣಯ್ಯ ಇದಕೆ ನಗಬಹುದು ಮುಯ್ಯವ ಕೊಟ್ಟುಬಾಹುದಕೆ ತಡವ್ಯಾಕೆ ಕೋಲ 1 ಜಾಣಿಯರಿಬ್ಬರು ನಮಗೆ ಆಣಿಯನಿಟ್ಟರು ವೇಣುಗೋಪಾಲ ನಗಬಹುದು ಕೋಲವೇಣುಗೋಪಾಲ ನಗಬಹುದು ಮುಯ್ಯವ ಕ್ಷಣದೊಳು ನಾವು ತಿರುಗಿಸುವೆವು ಕೋಲ2 ಹರಿಯ ತಂಗಿಯರ ಗರುವಿನ ಮುಯ್ಯವತಿರುಗಿಸಿ ಬಂದು ಉಣಬೇಕು ಕೋಲ ತಿರುಗಿಸಿ ಬಂದು ಉಣಬೇಕು ಎನುತಲೆ ಹರಿಣಾಕ್ಷಿ ಭಾಮೆ ನುಡಿದಳು ಕೋಲ3 ರಂಗರಾಯರ ಮುದ್ದು ತಂಗಿಯರ ಹಂಗಿನ ಮುಯ್ಯ ತಿರುಗಿಸುವೆ ಕೋಲ ಹಂಗಿನ ಮುಯ್ಯ ತಿರುಗಿಸುವೆ ಮುಖವ ಭಂಗಿಸಿ ಬಾಹೊ ಸಭೆಯೊಳು ಕೋಲ4 ಇಂತು ರಾಮೇಶನ ಕಾಂತೆಯರೆಂಬುವರ ಪಂಥವ ಬಿಡಿಸಿ ಬರಬೇಕು ಕೋಲಪಂಥವ ಬಿಡಿಸಿ ಬರಬೇಕು ಮುಯ್ಯದ ಭ್ರಾಂತಿಯ ಹಿಡಿಸಿ ಕೊಡಬೇಕು ಕೋಲ 5
--------------
ಗಲಗಲಿಅವ್ವನವರು
ಮಲ್ಲೆ ಮಲ್ಲಿಗೆ ಕೋಲ ಝಲ್ಲಿ ಮುತ್ತಿನ ಕೋಲನಲ್ಲೆಯರು ನಲಿ ನಲಿದು ಚಲುವ ರಂಗನ ಪಾಡಿಉಲ್ಲಾಸ ಬಡುವ ಕೋಲ ಅಮ್ಮಯ್ಯಪ. ಚಾರು ವÀದನಳೆ ದಿವ್ಯಥೋರ ಕುಚಗಳ ಆ ಭಾರಕೆ ಬಳಕುವಳೆ ವಿಸ್ತಾರ ಜಘನಳೆ ಚಲ್ವಳೆ ಅಮ್ಮಯ್ಯ 1 ನಾರಿಕೇಲದಂತೆ ಕರಗಳೆ ಉರಗಳೆ ವರಜಾನು ಜಂಗಿಗಳ ಚರಣಗಳ ನಖಗಳಬೆರಳುಗಳಿಗೆ ಎರಗುವೆನು ಅಮ್ಮಯ್ಯ 2 ಕಟಿ ಕಂಬು ನಮ್ಮಯ್ಯ 3 ಅಂಬುಜಾಂಬಳ ಪಾದವೆಂಬೊ ಕಮಲಗಳಬೆರಳೆಂಬೊ ಹವಳಗಳ ನಖವೆಂಬೊ ಚಂದ್ರಗಳ ಸಂಭ್ರಮದಿ ಎರಗುವೆ ನಮ್ಮಯ್ಯ4 ಸಿಂಧು ಸಪ್ತದಿಗಂಧರ್ವ ಲೋಕದಲಿಲ್ಲ ಹಿಂದಿಲ್ಲ ಮುಂದಿಲ್ಲವೆಂದೆ ನಮ್ಮಯ್ಯ 5 ಮಂದಾರ ಗಿರಿಮೇರು ಮಂದಾರದÀಲೆ ಮೇಲೆಂಬೊ ಮಾರ್ಜನ ತಪ ಒಂದು ಲೋಕದಲಿಲ್ಲವೆಂದು ದ್ರೌಪತಿಗ್ಹೇಳಿ ಬಂದೆನಮ್ಮಯ್ಯ 6 ಮಿತ್ರೆಯರ ಮುಯ್ಯಕ್ಕೆ ಮತ್ತೆಲ್ಲಿ ಸರಿಯಿಲ್ಲ ಸತ್ಯಲೋಕದಲಿಲ್ಲಮೃತ್ಯು ಲೋಕದಲಿಲ್ಲ ಅತ್ಯಂತ ತೆಳಗಿಹೊ ರತ್ನ ಲೋಕದಲಿಲ್ಲಹತ್ತು ದೆಸೆಗಿಲ್ಲವೆಂದೇ ನಮ್ಮಯ್ಯ 7 ಭಕ್ತವತ್ಸಲ ಸ್ವಾಮಿ ಅತ್ಯಂತ ಪ್ರೇಮದಲೆ ಸತ್ಯಭಾಂವೆರ ಅರಸು ಅರ್ಥಿಲೆ ಬಂದದ್ದುಚಿತ್ತಕ್ಕೆ ತಾ ಎಂದೆ ನಮ್ಮಯ್ಯ 8 ವೈಭವದ ಮುಯ್ಯವು ವೈಕುಂಠದಲಿಲ್ಲ ಕೈವಲ್ಯವೆನಿಪ ಸೇತುದ್ವೀಪದೊಳಗಿಲ್ಲಭಯವಿಲ್ಲವೆನಿಪ ಅನಂತಾಸನದಲಿಲ್ಲಐವರ ಅರಸಿಗೆ ಹೇಳಿಬಂದೆನಮ್ಮಯ್ಯ 9 ಕೈವಲ್ಯಪತಿ ತಾನು ದಯಮಾಡಿ ಬಂದದ್ದುದಯವ ಬಹಳಮ್ಮ ಐವರದು ಎನುತಲೆ ಕೈಮುಗಿದು ಹೇಳಿ ಬಂದೆ ನಮ್ಮಯ್ಯ10 ನಲ್ಲೆಯರ ಮುಯ್ಯಕ್ಕೆ ಎಲ್ಲೆಲ್ಲೂ ಸರಿಯಿಲ್ಲ ಸಪ್ತದ್ವೀಪದಲಿಲ್ಲಮೇರುವಿನಲಿಲ್ಲ ಈ ಭಾಗ್ಯವೆಲ್ಲ ಸ್ವರ್ಗದಲಿಲ್ಲಚಲ್ವಿ ದ್ರೌಪತಿಗೆ ಹೇಳಿ ಬಂದೆ ನಮ್ಮಯ್ಯ 11 ಬಲ್ಲಿದ ಅತಳ ವಿತಳ ಸುತಳ ಮಹಾತಳ ತಳಾತಳ ರಸಾತಳದಲಿಲ್ಲಈ ಮುಯ್ಯಕ್ಕೆಲ್ಲಿ ಸರಿ ಹೇಳಿ ಬಂದೆನಮ್ಮಯ್ಯ12 ಬೊಮ್ಮ ಲೋಕದಲಿಲ್ಲಸುಮನ ಸಾರಿರುವೋ ಸ್ವರ್ಗಲೋಕದಲಿಲ್ಲ ಅಮ್ಮಿಳ್ಳ ಪಾತಾಳವೆಂದೆ ನಮ್ಮಯ್ಯ13 ರಮಿಯರಸನು ತಂದ ಜಮ್ಮನೇ ನಿಮ್ಮ ಭಾಗ್ಯವು ಬಹಳ ಅಮ್ಮ ದ್ರೌಪತಿ ಎಂದು ಜುಮ್ಮನೆ ಹೇಳಿ ಬಂದೆನಮ್ಮಯ್ಯ 14
--------------
ಗಲಗಲಿಅವ್ವನವರು
ರಾಯ ಕಳುಹಿದ ರಂಗ ರಾಯ ಕಳುಹಿದ ಪ್ರಿಯಭಾವೆ ರುಕ್ಮಿಣಿಯರಪ್ರೇಮಭಾಳೆ ನಿಮ್ಮ ಮ್ಯಾಲೆ ಪ. ಕೇಳೋರಾಯ ನಿಮ್ಮ ಮ್ಯಾಲಿ ಬಹಳ ಪ್ರೇಮಕೃಷ್ಣರಾಯ ಹೇಳಲ್ಪಶವೆಮುಯ್ಯ ತಂದು ಏಳು ದ್ವಾರ ದಾಟಿ ಬಂದು1 ಚಂಚಲಾಕ್ಷಿ ಅರಸಿಯರು ನಿಮಗೆ ಪಂಚಪ್ರಾಣ ಕೃಷ್ಣರಾಯ ಕೆಂಚಿ ರುಕ್ಮಿಣಿಮುಯ್ಯ ತಂದುಮುಂಚಿ ಬಾಗಿಲಮನೆಯೊಳು ಇಳಿದರು 2 ಕುಂತಿದೇವಿಯರ ಅರಮನೆಗೆ ಚಿಂತಾಮಣಿಯ ತಾನೆ ಬಂದ ಎಂಥ ಸುಕೃತರಾಯ ನಿಮ್ಮಇಂಥ ಭಾಗ್ಯ ಎಲ್ಲಿ ಕಾಣೆ 3 ಸುದ್ದಿ ಕೇಳಿ ಧರ್ಮರಾಯ ಗದ್ಗದಿ ನುಡಿಯನೆ ನುಡಿದಾನಮುದ್ದು ಮುಖವ ನೋಡಿಪಾದಕೆ ಬಿದ್ದು ಧನ್ಯರಾದೆವಮ್ಮ 4 ಅಂದ ಮಾತು ಕೇಳಿರಾಯ ನಂದ ಬಟ್ಟು ನಂದ ಭಾಷ್ಪಬಿಂದು ಉದುರಿ ಬಿಗಿದು ಕಂಠಛಂದದಿ ರೋಮಗಳು ಉಬ್ಬಿ 5 ಇಂದು ಭದ್ರೆ ದ್ರೌಪತಿಗೆ ತಂದರಮ್ಮ ರುಕ್ಮಿಣಿ ಮುಯ್ಯಆನಂದದಿಂದ ಭಾವೆ ಕೃಷ್ಣಇಂದು ನಿಮ್ಮ ಅರಮನೆಗೆ 6 ಎಷ್ಟು ಸುಕೃತರಾಯ ನಿಮ್ಮ ಧಿಟ್ಟ ರಾಮೇಶತಾನೆ ಬಂದ ಅಷ್ಟ ಸೌಭಾಗ್ಯದ ಮುಯ್ಯ ಶ್ರೇಷ್ಠ ತೋರೋದಮ್ಮ ಸಭೆಯು 7
--------------
ಗಲಗಲಿಅವ್ವನವರು
ಅರ್ಥಿವಿನೋದವ ಮಾಡುತಸ್ವಸ್ಥದಲೆ ಕುಳಿತರು ಎಲ್ಲಚಿತ್ತ ಜನೈಯನ ಸಹಿತಾಗಿಸಹಿತಾಗಿ ಶಚಿವಾಣಿಮುತ್ತಿನಾರತಿಯ ಬೆಳಗಿರೆ 1ರಂಗ ರುಕ್ಮಿಣಿ ಭಾಮೆಯರಿಗೆಶೃಂಗಾರದ ಲೈವರಿಗೆಅಂಗನೆÉಸುಭದ್ರೆ ದ್ರೌಪತಿದ್ರೌಪತಿಗೆ ವಾಣಿಯರುಮಂಗಳಾರತಿಯ ಬೆಳಗಿರೆÉ 2ಉಲ್ಹಾಸದಲಿಅಮರರುಚಲ್ವ ರಮಿ ಅರಸಗೆಮಲ್ಲಿಗೆಸೂರ್ಯಾಡಿಐವರುಐವರು ಎನುತಲಿಎಲ್ಲರೂ ಹರುಷ ಬಡುವರು 3
--------------
ಗಲಗಲಿಅವ್ವನವರು
ಕಾಳಿ ಮೊದಲಾದವರು ಭಾಳೆ ವಸ್ತಗಳಿಟ್ಟುವ್ಯಾಳಾಶಯನÀನ ಮಡದಿಯರು ಪ.ಬಂದು ಶ್ರೀ ಪ್ರದ್ಯುಮ್ನ ಗಂಧಹಚ್ಚಿ ಐವರಿಗೆಅಂದದಲಿಬುಕ್ಕಿಟ್ಟುಸೂರಾಡಿಮಂದಾರಮಲ್ಲಿಗೆ ತಂದು ಕೊರಳಿಗೆ ಹಾಕಿಆನಂದ ಬಟ್ಟನು ನೋಡಕೆಲದಿ1ಅಚ್ಯುತನ ಮಡದಿಯರುಹಚ್ಚಿಅರಿಷಿಣ ಕುಂಕುಮಮಚ್ಚನೇತ್ರಿಯರು ದ್ರೌಪತಿಗೆಅಚ್ಛಾದ ಸುಭದ್ರೆಗೆಹಚ್ಚಿಅರಿಷಿಣ ಕುಂಕುಮಅಚ್ಚ ಮಲ್ಲಿಗೆಯನ್ನೆ ಮುಡಿಸಿ 2ಶಂಬರಾರಿಪಿತನ ಗಂಭೀರ ತಂಗಿಯರಿಗೆತಾಂಬೂಲ ಅಡಿಕೆಯನೆ ಕೊಟ್ಟುಸಂಭ್ರಮದಿ ರಮಿ ಅರಸು ಅಂಬರಗಳ ಉಡಿಸಿಮೈತುಂಬ ವಸ್ತಗಳ ಇಡಿಸಿ 3
--------------
ಗಲಗಲಿಅವ್ವನವರು
ಮಚ್ಛನೇತ್ರಿಯರಿಗೆ ಉಚಿತವನೆಅಚ್ಯುತಕೊಟ್ಟನೆಂದುಉಚ್ಛವದಿಕೋಲಹೊಯ್ದೇವಕೋಲಪ.ಮುತ್ತು ಮಾಣಿಕದ ವಸ್ತ ಮತ್ತೆ ಕುದುರೆಯ ಸಾಲುಛsÀತ್ರ ಚಾಮರ ರಥಗಳುಕೋಲಛsÀತ್ರ ಚಾಮರ ರಥ ಉಚಿತವಅರ್ಥಿಲೆ ದ್ರೌಪತಿಗೆ ಹರಿಕೊಟ್ಟಕೋಲ1ಸಾರಾವಳಿಯ ಸೀರೆ ಥೋರ ಮುತ್ತಿನ ಸರಹಾರಭಾರಗಳು ಹಿಡಿದೇಜಿಹಾರಭಾರಗಳು ಹಿಡಿದೇಜಿ ಉಚಿತವನಾರಿ ಕುಂತೆಮ್ಮಗೆಹರಿಕೊಟ್ಟಕೋಲ2ದುಂಡು ಮುತ್ತಿನ ವಸ್ತ ತಂಡ ತಂಡದ ಜವಳಿಪಂಡಿತರಿಗೆಲ್ಲ ಉಚಿತವಪಂಡಿತರಿಗೆಲ್ಲ ಉಚಿತವ ಸಭೆಯೊಳುಪುಂಡರಿಕಾಕ್ಷ ಇವು ಕೊಟ್ಟಕೋಲ3ಲೆಕ್ಕ ವಿಲ್ಲದೆ ವಸ್ತ ಅಚ್ಚ ಬೆಳಕಿನ ಸೀರೆಸಂಖ್ಯವಿಲ್ಲದಲೆ ರಥಗಳುಸಂಖ್ಯ ವಿಲ್ಲದಲೆ ರಥಗಳ ಪಾಂಡವರಮಿಕ್ಕ ಮಡದಿಯರಿಗೆ ಇವು ಕೊಟ್ಟಕೋಲ4ಅರ್ಥಿನೋಡಬಂದ ಜನಕೆ ಮುತ್ತು ರತ್ನದ ವಸ್ತಚಿತ್ತಜನೈಯ ಇವುಕೊಟ್ಟಕೋಲಚಿತ್ತಜನೈಯ್ಯ ಇವುಕೊಟ್ಟ ರಮಿ ಅರಸುವಿಸ್ತರಿಸಿ ಹೇಳಲೊಶವಲ್ಲ 5
--------------
ಗಲಗಲಿಅವ್ವನವರು