ನಾರಾಯಣ ನರಸಿಂಹ ಲ-
ಕ್ಷ್ಮೀರಮಣನೆ ಪರಬ್ರಹ್ಮ ಪ.
ಸಾರಭೋಕ್ತನೆ ಸ್ವತಂತ್ರನೆ ದೋಷವಿ-
ದೂರ ಪರಿಪೂರ್ಣಕಾಮ ಅ.ಪ.
ಸತ್ವಾದಿಗುಣಾತೀತ ವಿತತ ಸ-
ರ್ವೋತ್ತಮ ನಿರುಪಮ ಮಹಿಮ
ಪ್ರತ್ಯಗಾತ್ಮ ನಿಗಮಾಗಮವೇದ್ಯ ಸು-
ಹೃತ್ತಮ ಮಂಗಲಧಾಮ 1
ವಿಧಿಭವೇಂದ್ರಾದಿ ವಿಬುಧಾಶ್ರಿತಪದ-
ಪದುಮ ನೀಲಾಂಬುದಶ್ಯಾಮ
ಹೃದಯಾಬ್ಜಮಧ್ಯಸದನ ಸಾಮಜವ-
ರದ ಯದುವಂಶಲಲಾಮ 2
ಮಾಯಾತೀತ ಮಹೋನ್ನತ ಸುರಜನ-
ಪ್ರಿಯ ದ್ಯೆತ್ಯೇಯನಿರ್ನಾಮ
ವಾಯುವಾಹನ ಜನಾರ್ದನ ಲಕ್ಷ್ಮೀನಾ-
ರಾಯಣ ತೇ ನಮೋ ನಮಃ 3