ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಾರತೀ ಪ್ರಾರ್ಥನೆ) ಭಕ್ತ ಚಿಂತಾಮಣಿ ಭರತನರಮಣಿ ಮುಕ್ತಿಸಾಧನ ವೀಣಾಪಾಣಿ ಕಲ್ಯಾಣಿ ಪ. ವಿದ್ಯಾಮಾನಿನಿ ವಿಭವನಿದಾನಿ ಸದ್ಯೋಜಾತಸುಪರ್ಣರ ಜನನಿ ಹೃದ್ಯವರುದ್ಧನಾದ್ಯ ವಿದ್ಯಾವಿದಾರಣಿ ನೀ- ನಿದ್ದುಮನದಿ ಶುದ್ಧ ಬುದ್ಧಿಯ ಕರುಣಿಸು 1 ನಾಲಿಗೆಯೊಳು ನಿನ್ನ ಲೀಲೆಯ ತೋರೆ ಪಾಲಕರನು ಕಾಣೆ ಪವನನೊಲಿವ ಜಾಣೆ ನೀಲ ಮೇಘ ನಿಭಾನನೆ ನವ ಪ್ರವೀಣೆ 2 ಅಸು ಗಣವೆಲ್ಲ ನಿನ್ನೊಶದೊಳಗಿಹವು ಅಸಮಸಾಹಸ ವಾಯು ವಶದಿ ನೀನಿರವು ಅಸುರಾರಿ ಶೇಷಾದ್ರಿವಶೀಯ ಮೋಹದ ಚಿಕ್ಕ ಸೊಸೆಯೆ ಸಕಲಜನ ವಶಕರಿ ವರದೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1 ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2 ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3 ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4 ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5 ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6 ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7 ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8 ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9 ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10 ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11
--------------
ಕನಕದಾಸ
ಮನ ಒಲಿದೆನ್ನನು | ಪಾಲಿಸು ಜನನಿ ಪ. ಘನ ವಿದ್ಯಾದಾಯಿನಿ | ಜಲಜಾಂಬಕಿ ನೀ ಅ.ಪ ವಿದ್ಯಾವಿದಾತೆ ಬುದ್ಧಿಪ್ರದಾತೆ || ಶ್ರದ್ಧೆಯ ಬೇಡುವೆ | ಸದ್ಗುಣಭರಿತೆ 1 ಗಾನವಿಲೋಲೆ | ವಿನಮಿತಪಾಲೆ || ಜ್ಞಾನಪ್ರದಾಯಿನಿ | ಘನಗುಣಶೀಲೆ 2 ಆಡುವ ನುಡಿ ಕೈ | ಗೂಡುವ ತೆರದಲಿ || ಮಾಡೌ ಬೇಡುವೆ | ನಡಿಗಳಿಗೆರಗಿ 3 ಮನ್ಮನದಿಷ್ಟವ | ನಿತ್ತೆನ್ನ ಪೊರೆ ನೀ || ಬೊಮ್ಮನ ರಾಣಿ | ನಿತ್ಯಕಲ್ಯಾಣಿ4
--------------
ವೆಂಕಟ್‍ರಾವ್
ವಿದ್ಯಾವಿದ್ಯಕಮೀರಿದಾಗುಣತ್ರಯಾ ದಾವನು ಹೊಂದಾದಿಯಾ ನಿಚಯಾಸರ್ವಕ್ಕುದಾವಾಶ್ರಯಾ ಶುದ್ಧಾತ್ಮಾ ಸುಖದಾಲಯಾ ಸತುಚಿದಾನಂದೈಕರಸನಿಶ್ಚಯಾ ಸಿದ್ಧಾಂತ ಪ್ರತಿಪಾದ್ಯದಾವನುದಯಾ ಶ್ರೀ ದೇವ ದತ್ತಾತ್ರಯಾ 1 ಜಗದೋಳಾವನಸದುಗುಣಾ ನಿರಗುಣಾ ಸ್ವಾರೂಪದಾ ಲಕ್ಷಣಾ ಬಗೆ ಬಗೆಯಲಿ ಮಾಡಲು ವಿವರಣಾ ನೇತಿನೇತಿ ಶೃತಿ ವಚನಾ ಮುನಿಜನಾ ನಿಶ್ಚೈಸದಿಹ ರಾವನಾ ಪ್ರಗಟೀಸಿಹನು ನೋಡಿದೇ ನಿಜಘನಾ ಶ್ರೀದತ್ತ ನಿರಂಜನಾ 2 ನಿಶ್ಚಯಿಸದಿಹದಾವನಲಿ ತಾಂಪೌರಾಣಿತಿಹಾಸ ಭೇದಿಸುತಲೀ ನೆಲೆ ಗಾಣದೇ ನಿಲ್ಲಲೀ ಅಪದಿಂದ ಮೀಮಾಂಸತರ್ಕವರಲೀ ಬೆಂಡಾದವು ನೋಡಲೀ ಅಪರ ಘನ ಬಂದಿದೇಧರಿಯಲೀ ಬೆಂಡಾದವು ನೋಡಲೀ 3 ಪಾತಾಳಾದಿಯ ಲೋಕವೇಳುಸರಳು ದಾವನ ಪದ ಕಟಗಳು ಖ್ಯಾತಿಂದೇಭುವನೇಳು ಊಧ್ರ್ವಕಿರಲು ನಾಭಿಂದ ಸಿರವಾಗಲು ಸೀತಾಂಶು ರವಿದಾವನಂಬಕಗಳು ಅಶಾವೆ ಶ್ರೀತಂಗಳು ದತ್ತೆನಿಸಲು4 ಅಮರಂಗಣಾ ದಾವನುದರ ವಿಶ್ವಕಾಗಿ ಭುವನಾ ಶ್ರೀಮದ್ರಮಾರಮಣಾ ನಖದಾಧೀನಾ ಶ್ರೀದತ್ತ ಮನ ಮೋಹನಾ 5 ಸರ್ವೆಶ ಸರ್ವೋತ್ತಮಾ ಸರ್ವಾಧಾರನುದಾವ ದೇವಗರಿಮಾ ಪೂಜ್ಯನು ಸಕಲಾಗಮಾ ಸರ್ವಾತೀತನು ದಾವನಂಘ್ರಿ ಕಮಲಾ ಸೇವಿಸುವಳು ಶ್ರೀರಮಾ ಶ್ರೀದತ್ತ ಗುರುವೇನಮಃ 6 ಅನಸೂಯಾ ಕರರತ್ನನಾಗಿಜನಿಸೀ ಇಷ್ಟಾರ್ಥವನು ಪೂರಿಸೀ ಯೋಗಾಂಗವನು ಪ್ರಕಟಿಸಿ ಸ್ಮರಿಸೀದವರಲ್ಲಿ ಬಹುಕರುಣಿಸೀ ಶ್ರೀ ದತ್ತಪದ ಧ್ಯಾಯಿಸೀ 7 ಮೆರೆವಾ ಮುಪ್ಪುರದಿಂದೇರುವಾ ಸಾರೀ ಸಾವಿರದಳ ಪದ್ಮದಿರುವಾ ಸ್ವಾನಂದ ಭೋಗಿಸುವಾ ಮುದ್ರಾಂಕುರವ ಬೀರುವಾ ಶ್ರೀದತ್ತ ಗುರು ಎನಿಸುವಾ8 ಕಾತ್ರ್ಯವೀರ್ಯವರವಾಯದುರಾಯನುದ್ಧರಿ ಸಿದಾ ಗುರುಮಹೀಪತಿ ನುಡಿಸಿದಾ ಸ್ವಾನಂದ ಸುಖ ಬೀರಿದಾ ಸದಾ ಪಡೆವನು ಗತಿಸಂಪದಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಾಲಿಪಂಪಾಂಬಿಕೆಲಾಲಿಭ್ರಮರಾಂಬಿಕೆಲಾಲಿಬಗಳಾಂಬಿಕೆಲಾಲಿಲಾಲಿಎಂದು ಪಾಡಿರಿ ಸಾಧು ಸಜ್ಜನರೆಲ್ಲದೇವಿ ತಾನೇ ಎಂದುಲಾಲಿಪಅದ್ವಯಾಗಮ ದ್ಯುತಿಗೋಚರ ಅನಾದಿಅಚಲಾನಂದವೇಲಾಲಿಶುದ್ಧ ಸಮ್ಯಕ್ ಜ್ಯೋತಿರ್ಮಯ ಸ್ವರೂಪಸುಚರಿತ್ರ ನಿಶ್ಚಲಲಾಲಿಚಿದ್ಬಯಲಿನೊಳು ಹೃದಯ ತೊಟ್ಟಿಲೊಳುಭಾವಹಾಸಿಗೆಯಲ್ಲಿ ಪವಡಿಸಿಹೆಲಾಲಿಸಿದ್ಧರಿ ಮಲಗಿನ್ನು ಜೋಗುಳ ಪಾಡುವೆಶ್ರೀ ಮಹಾಲಕ್ಷ್ಮಿಯೇಲಾಲಿ1ನಿತ್ಯನಿರ್ಗುಣ ನಿಷ್ಕಲಂಕ ನಿರ್ವಿಕಲ್ಪನಿಜನಿತ್ಯ ನಿರ್ಮಳೆಲಾಲಿಸತ್ಯ ವಸ್ತುವೆ ಸನಾಥ ವಿಶೋತ್ಪತ್ತಿಸರ್ವಪರಬ್ರಹ್ಮರೂಪಲಾಲಿಪ್ರತ್ಯಗಾತ್ಮಳೆ ಪೂರ್ಣಪರಮ ಪರತರವಂದ್ಯೆಪಾವನ ಚಾರಿತ್ರೆಲಾಲಿಕರ್ತೃನೀ ಅನಂತ ಬ್ರಹ್ಮಾಂಡಾದಿಗಳಿಗೆಕರುಣಾ ಸಮುದ್ರವೇಲಾಲಿ2ಪೃಥ್ವಿಅಪ್ಪುತೇಜವಾಯುರಾಕಾಶಕ್ಕೆಪೃಥಕಾಗಿ ಹೊಳೆದಿಹಳೆಲಾಲಿಸತ್ವರಜತಮಸು ಮೂರರೊಳಗೆ ನೀಸಾಕ್ಷಿರೂಪದಲಿರುವೆಲಾಲಿವೇದ ವೇದಾಂಗಗಳ ವಾಗ್ರೂಪಿನಲ್ಲಿನೆಲೆಸಿ ರಂಜಿಪಳೆಲಾಲಿತತ್ವವಿಂಶತಿ ಪಂಚಶರೀರಗಳೊಳಗೆ ನೀತೊಳ ತೊಳಗಿ ಬೆಳಗುತಿಹೆಲಾಲಿ3ಜಾಗೃತ ಸ್ವಪ್ನ ಸುಷುಪ್ತಿ ಮೂರವಸ್ಥೆಜನಿತದಿ ಕಾಣಿಸಿಲಾಲಿಪ್ರಾಜÕತೈಜಸವಿಶ್ವಮೂರು ಮೂರುತಿಯಾಗಿಪರಿಣಮಿಸಿ ತೋರುವೆಲಾಲಿಶೀಘ್ರದಲಿ ಸದ್ಭಾವ ಸಚ್ಛಿಷ್ಯರಾದರ್ಗೆಸ್ವಾನಂದ ಸುಖವೀವೆಲಾಲಿರೌದ್ರದಲಿ ಭುಗುಭುಗು ಭುಗಿಲೆಂಬ ಕಳೆಗಳುಅತ್ಯುಗ್ರದಿ ಝಂಗಿಸುವೆಲಾಲಿ4ವಿದ್ಯಾವಿದ್ಯವ ತೋರಿ ದೃಶ್ಯಾದೃಶ್ಯಕೆ ಮೀರಿಅದೃಶ್ಯರೂಪ ಶ್ರೀ ಲಕ್ಷ್ಮೀಲಾಲಿಸಿದ್ಧಿಗಳೆಂಬುವ ಛೇದಿಪ ಹರಿಹರಸರಸಿಜೋದ್ಭವ ಮಾತೆಲಾಲಿಸಿದ್ಧ ಪರ್ವತವಾಸ ಸಾಹಸ್ರದಳ ಮಧ್ಯೆಶ್ರೀ ಬಗಳಾಮುಖಿಲಾಲಿಸದ್ಗುರು ಚಿದಾನಂದಅವಧೂತಬಗಳಾಂಬ ಸಗುಣನಿರ್ಗುಣಮೂರ್ತಿಲಾಲಿ5
--------------
ಚಿದಾನಂದ ಅವಧೂತರು