ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಜಯೇಶವಿಠಲ ವರ ಅಂಕಿತವಿದನು ಇತ್ತೆ ಪ ತರಳ ನಿನ್ನವನೆಂದು ಗುರುವಾತ ಸ್ಥಿತನಾಗಿ ಭರದಿ ಪಾಲಿಸಿದೆ ಇವನ ಹರಿ ನೀನಿದ್ದೆಡೆಗೆ ಕರೆಸಿ ಅ.ಪ ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲಿ ಮರೆಸಿ ಕಾಮ್ಯಕರ್ಮಗಳೆಲ್ಲವನು ಸ್ಮರಿಸದಂತೆ ಮಾಡು ಪರಸತಿಯರೊಲುಮೆ ಮರೆಯದಂತಿರಲಿ ಪರತತ್ವವನು 1 ಸತಿ ಸುತ ಪರಿವಾರದಿ ಕೃತಕೃತ್ಯನಾಗಿ ಮಾಡಿಸಿ ಪತಿತರ ಸಹವಾಸ ಹಿತವೆಂದರುಪದೆ ಸ- ದ್ಗತಿಯೀವ ಮಾರ್ಗ ತಿಳಿಸಿ 2 ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ ಗುರುಹಿರಿಯರಲ್ಲಿ ಭಕ್ತಿ ದುರ್ವಿಷಯದಲಿ ವಿರಕ್ತಿನಿತ್ತು ವರ ವಿಜಯ ರಾಮಚಂದ್ರವಿಠಲ ಸುರರೊಡೆಯ ಬರೆದು ನಾಮಾಮೃತವ ನುಡಿಸಿ 3 (ಜಯೇಶವಿಠಲರಿಗೆ ಅಂಕಿತ ನೀಡಿದ ಸಂದರ್ಭ) ದುರಿತ ವಿ ದೂರ ಕರುಣಾಕರ ಸುಂದರ ಗಂಭೀರ 1 ದೀನೋದ್ಧಾರ ವಿರ್ಪಿವಿಹಾರ ದಾನವಹರ ಸುರಕಾವ್ಯ ವಿಚಾರ 2 ಸೀತಾನಾಥ ವಾನರಯೂಥ ವಾರಾತ್ಮಜ ನುತ ಶ್ರೀ ಲಕ್ಷ್ಮೀಕಾಂತ 3
--------------
ವಿಜಯ ರಾಮಚಂದ್ರವಿಠಲ
ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ 1 ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ 2 ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ 3 ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ 4 ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ 5
--------------
ಶ್ರೀಪಾದರಾಜರು