ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ದೂಷಿಪರೊ ಕುಜನರು ಹರಿ- ದಾಸರ ನಿಂದಿಪರೊ ಪ ಏಸೇಸು ಜನುಮದ ದೋಷರಾಶಿಗಳೆಲ್ಲ ನಾಶವಗೈÀವ ಶ್ರೀಕೇಶವನಣುಗರ ಅ.ಪ ಮಂದಮತಿಗಳೆಲ್ಲರೂ ಸಜ್ಜನರ ನಿಂದನೆಯೊಳಗಿಹರೊ ಮುಂದಿನ ಬವಣೆಗಳೊಂದೆಣಿಸದಲೆ ಮು- ಕುಂದನ ಭಕುತರ ಸಂದಣಿ ಸೇವಿಪ 1 ಇಂದಿರೇಶನ ಗುಣವ ಪಾಡುತಲಿ ಆ- ನಂದದೊಳೋಲ್ಯಾಡುವ ನಂದಕಂದನ ಲೀಲೆಯಿಂದ ಹಗಲಿರುಳು ಮು- ಕುಂದನ ಕುಣಿಸುವರೊ ದಣಿಯುವರೊ 2 ಆರು ಮಂದಿಗಳ ಗೆದ್ದು ಹೃದಯದಲ್ಲಿ ಶ್ರೀ- ಮಾಧವನನು ಕಾಂಬರ ಶ್ರೀಧರನಂಘ್ರಿಗಳಾದರದಿಂ ಭಜಿಸಲು ಸಾಧು ಗುರುಗಳು ಇವರು ಸುಂದರರು 3 ಸುರಮುನಿವರ ಪ್ರಿಯನ ಭಕ್ತರಿಗೆಲ್ಲ ವರಗಳ ಕೊಡುತಿಹನ ಪರಮಪಾವನ ಮೂರುತಿಯನೆ ಕೊಂಡಾಡುತ ದುರಿತಗಳಳಿಯುವರ ಪಾವನರ 4 ಕರೆದು ಭಕ್ತರ ಸಲಹುವ ಕರುಣದೊಳು ಮೂ- ಪರಮ ಗುರುಗಳ ಮುಖ್ಯ ಕಾರಣವು ಪಡೆದವರು ಶ್ರೀ-ಕಮಲನಾಭ ವಿಠ್ಠಲನೆನ್ನುವರು5
--------------
ನಿಡಗುರುಕಿ ಜೀವೂಬಾಯಿ
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು
ಮರೆವರೇನೊ ರಾಮ ನಿನ್ನ ಚರಣ ಸೇವಕನÀನ್ನು ಪರರಿಗೊಪ್ಪಿಸಿ ಹೀಗೆ ಪ ಪರಮ ದಯಾನಿಧಿ ಅಲ್ಲವೆ ಮುನ್ನ ಶರಣರ ಪಾಲಿಸಲಿಲ್ಲವೆ ಇದು ಸರಿಯೇನೊ ಜನ ನಗರೇನೊ ಇನ್ನು ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ. ಗತಿಹೀನರಿಗೆ ನೀ ಗತಿಯೆಂದು | ನೀನೆ ಪತಿತರ ಪತಿಕರಿಸುವನೆಂದು ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1 ದೋಷರಾಶಿಗಳೆಲ್ಲ ಅಳಿಸಯ್ಯ ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ ದಾಸಾನುದಾಸ ದಾಸನು ಎನಿಸಿ | ಪರಿ- ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2 ಏನು ಸಾಧನವನ್ನು ನಾ ಕಾಣೆ | ನಿನ್ನಾ- ಧೀನದವನು ನಾ ನಿನ್ನಾಣೆ ದೀನ ಬಂಧುವೆ ದಯಾಸಿಂಧುವೆ ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3
--------------
ಲಕ್ಷ್ಮೀನಾರಯಣರಾಯರು