ಸಕಲ ಕಲ್ಯಾಣ ಗುಣಾಢ್ಯಗೆ ಮಂಗಳಂ
ನಿಖಿಲ ದೋಷದೂರಗೆ ಮಂಗಳಂ
ಭಕುತರ ಸಂತತ ಪೊರೆಯುತಿರುವ ನಮ್ಮ
ರುಕುಮಿಣಿ ಭಾಮಾರಮಣಗೆ ಮಂಗಳಂ 1
ಯಾದವ ಕುಲಭೂಷಣನಿಗೆ ಮಂಗಳಂ
ಸಾಧು ಸುಧಾಮ ಸಖಗೆ ಮಂಗಳಂ
ಪಾದ ಸೇವಕರಿಗೆ ಮೋದವ ನೀಡುವ
ಮಾಧವನಿಗೆ ಸಂತತ ಶುಭಮಂಗಳಂ 2
ವಿವಿಧ ಸೌಭಾಗ್ಯ ಸಂಪನ್ನಗೆ ಮಂಗಳಂ
ರವಿಶತ ಸಮತೇಜಗೆ ಮಂಗಳಂ
ಸುವಿನಯದಲಿ ಬೇಡುವರಿಗೆ ಶುಭಗಳ
ಜವದಲಿ ಕೊಡುವ ಪ್ರಸನ್ನಗೆ ಮಂಗಳಂ 3