ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ. ಅಂಗಜಪಿತ ನಿನ್ನ ಅನುಪಮ ರೂಪವ ನಿತ್ಯ ನೋಡಿ ನಲಿಯುತ ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ- ರಂಗದ ಭಕ್ತ ನಾನೆಂದೆನಿಸಿರಲಾಗಿ ಮಂಗಳಾಂಗ ಮನೋಹರ ನಿನ್ನ ಸಂಗ ಬಿಟ್ಟಿರಲಾರೆನೋ ಸ್ವಾಮಿ ರಂಗ ಎನ್ನಂತರಂಗವರಿಯಯಾ ಇಂಗಿತಜ್ಞ ನೀನಲ್ಲವೇ ಕೃಷ್ಣ 1 ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ- ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ ಒಂದರಲಭಿರುಚಿ ತೋರ್ಪುದೆ ಗುಣಗಣ ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು ಸಿಂಧು ಮಂದಿರ ಸುಂದರ ನಿನ್ನ ಪೊಂದಿಕೊಂಡಿಹನಲ್ಲವೇ ಕೃಷ್ಣ ತಂದೆ ಕೈ ಬಿಡಬೇಡವೊ ಎಳ- ಗಂದಿಯೆಂಬುದ ನೆನೆದು ಪಾಲಿಸೊ 2 ದೋಷ ರಹಿತ ಯಾದವೇಶ ಭಕ್ತರ ಪೋಷ ಶ್ರೀಶ ಕರಿಗಿರೀಶ ಸಕಲ ಲೋಕೇಶ ಪಾದ ಭೂಸುರ ಪ್ರಿಯ ಎನ್ನ ದೋಷಗಳೆಣಿಸದೆ ನೀ ಸಲಹಲಿ ಬೇಕೊ ವಾಸುದೇವ ಪರಾತ್ಪರ ಕೃಷ್ಣ ಕ್ಲೇಶ ಪರಿಹರನಲ್ಲವೆ ಸ್ವಾಮಿ ದಾಸ ಜನರಭೀಷ್ಟದಾಯಕ ನಾ ಶರಣು ಹೊಕ್ಕಿಹೆನು ರಕ್ಷಿಸು 3
--------------
ವರಾವಾಣಿರಾಮರಾಯದಾಸರು
ದಾಸವೃಂದ ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ಪ ಭೂಸುರ ಸೇವಿತ | ಭಾಸುರ ಮಹಿಮ ಉ ದಾಶೀನ ಮಾಡದೆ | ದೋಷಗಳೆಣಿಸದೆ ಅ.ಪ ಪದುಮಸಂಭವ ಕುಲದಿ ಜನಿಸುತ ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ ವಿಧ ವಿಧದಿ ಬೋಧಿಸಿ ಮದಡರುದ್ಧರಿಸಿದ | ಸದಮಲ ಹೃದಯ 1 ನತಜನ ಸುರತರುವೆನಿನ್ನನು ತುತಿಸಿಲೆನಗೊಶವೆ | ಸತತದಿ ಸೇವಿಸಿ | ಯತಿ ವರದೇಂದ್ರರ ಹಿತದಲಿ ಪಡೆದ ಪ್ರತಿ ಪ್ರಭಾಕರ 2 ತರತಮ ಭೇದವನು | ಶ್ರೀವರ ಹರಿದಿನ ಮಹಿಮೆಯನು ಸರಳಕನ್ನಡದಿ ವಿರಚಿಸಿ ಕವನವ ನೊರೆದು ಸಜ್ಜನರ ಪೊರೆವ ಮಹಾತ್ಮಾ 3 ವಾತಜಾತ ಸುಮತ ಸಾಗರ ಪೋತನೊಳೀತರ | ಯಾತಕೆ ನಿರ್ದಯ ನೀತವಕದಿ ಸಂಪ್ರೀತಿಯಿಂದೊಲಿದು 4 ಧಾಮರ ಸುವಿಧೇನು ಶಾಮಸುಂದರೆನ | ನಾಮನೆನೆವ ಸುಖ ಯಾಮ ಯಾಮಕೀಪಾಮರಗೀಯುತ 5
--------------
ಶಾಮಸುಂದರ ವಿಠಲ
ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ ಶೇಷನಾಮಕನೆ ವಿಶೇಷ ಜ್ಞಾನವ ನೀಡೋ ದಾಸರಾಯ ಪ ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ ಸಂತೋಷ ತೀರ್ಥರಂತಃ ಕರಣ ಪಾತ್ರ ದಾಸರಾಯ 1 ಚಿಂತಿಪ ಜನರಿಗೆ ಚಿಂತಾಮಣಿತಯ ನೀನೆ ದಾಸರಾಯ ಚಿಂತಿರಹಿತವರ ಚಿಂತಾಮಣಿಯು ನೀನೆ ದಾಸರಾಯ 2 ಚಿಂತ ರಹಿತವರ ಚಿಂತರವೇಲಿವಾಸ ದಾಸರಾಯ ಕದಂಬ ವಿನುತ ದಾಸರಾಯ 3 ಬೆಂಬಿಡದಲೆ ಮನದ್ಹಂಬಲ ಪೂರೈಸು ದಾಸರಾಯ ನಂಬಿದ ದ್ವಿಜರಿಗೆ | ಶಂಭುಗಿರಿಯಲ್ಲಿ ದಾಸರಾಯ 4 ಬಾಂಬೊಳೆ ತೋರಿಸಿ ಸಂಭ್ರಮಗೊಳಿಸಿದ ದಾಸರಾಯ ಹರಿಕೇತು ಹರಿಸುತ ಹರಿಣಾಂಕ ಕುಲಜಾತ ದಾಸರಾಯ 5 ಹರಿಕೇತು ಹರಿಸುತಾದ್ಯರನ ಸಂಹರಿಸಿದ ದಾಸರಾಯ ಹರಿದಾಡುತಿಹ ಮನ | ಹರಿಯಲ್ಲಿ ನಿಲಿಸಯ್ಯದಾಸರಾಯ 6 ಹರಿವೈರಿ ಮತಕರಿ | ಪರಿಪರಿ ಹರಿಸಘು ದಾಸರಾಯ ಪೂರ್ತಿಸುವ ನಿನ್ನ ವಾರ್ತೆಕೇಳಿ ಬಂದೆ ದಾಸರಾಯ 7 ಪಾರ್ಥಸಾರಥಿ ಭವ್ಯದಾಸರಾಯ ಮೂರ್ತಿಯ ಸ್ಥಾಪಿಸಿ ಕೀರ್ತಿಯ ಪಡೆದ ದಾಸರಾಯ 8 ನೇಮನಿಷ್ಟೆಯ ಬಿಟ್ಟು ಪಾಮರನಾದೆನಗೆ ದಾಸರಾಯ ಶ್ರೀಮಧ್ವನಿಗಮಾರ್ಥ | ಪ್ರೇಮದಿ ತಿಳಿಸಯ್ಯ ದಾಸರಾಯ 9 ಕಾಮಾದಿ ಷಡ್ವೈರಿ | ಸ್ತೋಮಾದಿ ಕುಲಿಶನೆ ದಾಸರಾಯ ಕಾಮಿತ ಫಲದಾಯಕ ಶಾಮಸುಂದರ ದೂತ ದಾಸರಾಯ 10
--------------
ಶಾಮಸುಂದರ ವಿಠಲ
ವರದೇಂದ್ರ ವರದೇಂದ್ರ ವರದಾಯಕ ಗುರು | ವರಗುಣಸಾಂದ್ರ ಪ ಪಾವನ ಚರಿತ ವೃಂದಾವನ ಮಂದಿರ ಕೋವಿದ ಜನ ಸುಸೇವಿತ ಸದಯ1 ಕಾಲಾಷಾಯಾಂಬರ | ಭೂಷಿತ ಎನ್ನಯ ದೋಷಗಳೆಣಿಸದೆ ಪೋಷಿಸು ಸತತ 2 ಕಠಿಣ ಭವಾಂಬುಧಿ ಘಟಜ ಕುಟಿಲಮತ ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ 3 ನತ ಸುರಕ್ಷಿತಿರುಹ | ಜಿತ ರತಿಪತಿ ಶರ ಮತಿವರ ದಶಮತಿ ದುರಿತವಾರಿಧಿ ವಿಭು 4 ಹೇಮೋದರ ವಿತ ಶಾಮಸುಂದರನ ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ 5
--------------
ಶಾಮಸುಂದರ ವಿಠಲ
ವಾಸುದೇವ ತವÀ ದಾಸೋಹಂ ಕೇಶವ ಎನ್ನಾ ದೋಷಗಳೆಣಿಸದೆ ಪೋಷಿಸು ಹರಿ ತವ ದಾಸೋಹಂ ಪ ಕರಿ ಸಕಲ ಲೋಕಕರುಹಿದ ವಾರ್ತೆ ಯುಕುತಿಗಳಿಂದಾ ಸ್ತುತಿಸಿ ದ್ರೌಪದಿ ಪ್ರಕಟಿಸಿದಳು ಹರಿ ತವ ಕೀರ್ತಿ 1 ಸಕಲರಲ್ಲಿ ವ್ಯಾಪಕನೆಂಬುದು ಬಾಲಕ ಪ್ರಲ್ಹಾದ ಪ್ರಕಟಿಸಿದಾ ಭಕುತನಾದ ಮಧ್ವಮುನಿ ಹರಿ ಸರ್ವೋತ್ತಮ ಹೌದುಹೌದೆನಿಸಿದಾ 2 ಭಕುತರಿಗಾಗಿ ಜಗವ ಸೃಷ್ಟಿಸಿದಿ ಭಕುತರಿಗಾಗವತರಿಸಿದಿ ಭಕುತರು ನಿನ್ನಾ ಭಜಿಸದಿದ್ದರೆ ಸಕಲರರಿವರೆಂತೊ ಜಗದಿ 3 ಅವರಂದದಿ ನಾನಲ್ಲವೋ ಶ್ರೀಹರಿ ಅವರ ದಾಸರ ದಾಸನೋ ನಾ ಪಾದದಿ ಕೊಡು ಭಕುತಿಯನಾ 4 ಮೆಟ್ಟುವ ಹಾವಿಗೆ ಮಾಡಿ ಎನ್ನನು ಇಟ್ಟುಕೋ ತವ ಪದಗಳಲಿ ಥಟ್ಟನೆ ಮನದಿಷ್ಟ ಪೂದ್ವೆಸೊ ಹನುಮೇಶ ವಿಠಲ ತ್ವರ ಕರುಣದಲಿ 5
--------------
ಹನುಮೇಶವಿಠಲ
ಶ್ರೀಭೂವರಾಹ ಸ್ತೊತ್ರ7ಭೂವರಾಹ ಭುವನವ ತಂದ ಭೂವರಾಹ ಪ.ಆನಮಿಪೆ ನಿನ್ನಂಬುಜ ಚರಣಕೆ ಆನಮಿಪೆ||ಆನಮಿಸುವೆಮ್ಮ ದೋಷಗಳೆಣಿಸದೆ ಕಾಯೋ || ಭೂವರಾಹ ಅ.ಪ.ನಾಶಿಜಾತ ನಾಶರಹಿತ ನಾಶಿಜಾತವಾಸುದೇವನಾಳಿಜಾತ-ಜಲದೊಳು ಪೊಕ್ಕು ಅಸುರನಕೊಂದು-ವಸುಧೆಯ ತಂದು-ಭೂವರಾಹ 1ಅಂಬುಜಾಕ್ಷ| ಶಂಭುವಂದ್ಯಅಂಬುಜಾಕ್ಷಅಂಬುಜೇಶ|ಅಂಬುಜಾಕ್ಷ-ಅಂಬುಧಿ ಪೊಕ್ಕು-ಜಾಂಬುನದಾಕ್ಷಣ-ಕೊಂದಿಧರೋದ್ಧರ - ಭೂವರಾಹ 2ಸಹಸ್ರಶೀರ್ಷ| ಸಹಸ್ರಅಕ್ಷಸಹಸ್ರಪಾದ ಸಹಸ್ರನಾಮ-ಸಹಸ್ರ ಶೀರ್ಷ- ಬ್ರಹ್ಮನಜನಕ ಮಹಿಶಿರಿ ಈಶ-ಪ್ರಸನ್ನ ಶ್ರೀನಿವಾಸ ||ಭೂವರಾಹ 3||ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು||
--------------
ಪ್ರಸನ್ನ ಶ್ರೀನಿವಾಸದಾಸರು