ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಟ್ಟಿ ಮನವ ಕೊಡೊ ಹರಿ ಹರಿ ಗಟ್ಟಿ ಮನವ ಕೊಡೊ ಪ ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ ದುರಿತದೋಷಗಳು ಕಡಿದು ಬರುವ ಕಂಟಕವನ್ನು ಪರಹರಿಸೆನಗೆ ಅರಿವು ನಿಲಿಸಾತ್ಮನ ಕುರಹು ತಿಳಿಸುಸಿರಿವರನೆ ಕರುಣದಿ 1 ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು ಹೊಲೆಯ ದೇಹದ ನೆಲೆಯ ತಿಳಿಸಿ ಎನ ಗಳುಕಿಸು ಭವದಾಸೆ ಘಳಿಲನೆ ಒಲಿದು 2 ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು ಲೋಪಮಾಡಿ ಇಹದ್ವ್ಯಾಪರದೊಳಗಿಂದ ನೀ ಪೊರೆ ಭವನಿರ್ಲೇಪನೆ ದಯದಿ 3 ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ 4 ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು ದೀನದಯಾಳು ಶ್ರೀ ಜಾನಕಿರಾಮ 5
--------------
ರಾಮದಾಸರು
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಪ ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ ಕೋಪ ಕಾಮಾದಿಗಳು ವೆಗ್ಗಳಿಸಲಿ ಪಾಪದ ರಾಶಿಗಳು ಬಂದು ಬೆನ್ನಟ್ಟಲಿ ಶ್ರೀಪತಿ ನಿನ ಪಾದವನು ಬಿಡಬಲ್ಲನೆ 1 ಬಟ್ಟೆ ಅತಿ ಕಠಿಣವಾಗಲಿ ಯಮನಾಳು ಬಲು ಭಯಂಕರರಾಗಲಿ ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ2 ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು ಏಕವಾಗಿ ಎನಗೆ ಬರಲಿ ಇಂದೆ ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ3
--------------
ವಿಜಯದಾಸ
ನೀನಲ್ಲದನ್ಯವೆನಗಿಲ್ಲ ನಾರದ ವರದಏನೆಂಬೆ ಸರ್ವರಿಗು ನೀನೆಯಹುದಾದಡೆಯು ಪಧನದ ಬಲವುಳ್ಳವರು ಧರ್ಮಗಳ ಮಾಡುವರುಮನದ ಮೇಧಾವಿಗಳು ಮಂತ್ರಿಸುವರು ತನುವಿನಲಿ ತ್ರಾಣಿಗಳು ತೀರ್ಥಗಳ ಪಡೆಯುವರುಅನುವದಿಸಿ ವೇದಗಳನವರಾಢ್ಯರಹರು 1ತನುವ ದಂಡಿಸಿ ಪೂಜ್ಯ ತನುವಾದರವರ್ಗುಂಟುಧನದ ತ್ಯಾಗದಿ ಮುಂದೆ ದೈನ್ಯ ಹರವುಮನವ ನಿಗ್ರಹಿಸಿದರೆ ಮುಖ್ಯ ಜ್ಞಾನವುಬಹುದುಇನಿತಾದರವರ್ಗಿರುವದೇನುಂಟು ನನಗೆ 2ಇತರ ಮಾತುಗಳಾಡದೀ ವಾಕನೊಳಗಿರಿಸಿಮಿತವಾಗಿ ಸತ್ಯಯುತಮಾಗಿ ನುಡಿಸಿಅತಿದೋಷಗಳು ಹೋಗಿಯವರ್ಗೆ ಮುಂದಣ ಭವದಿವಿತತವಾಹದವಿದ್ಯೆ ವಿವರಿಸಲಿದುಂಟೆ 3ಸತತವೂ ಧನವಿಲ್ಲ ಸಾಧು ಸಮ ತನುವಿಲ್ಲವ್ರತತೀರ್ಥಗಳಲಾಡಿದೊಡಲಿದಲ್ಲಮತಿಯಲ್ಲಿ ನೋಡಿದರೆ ಮಂತ್ರ ಮನನಗಳಿಲ್ಲಸ್ತುತಿ ಮಾಳ್ಪ ಸೂಕ್ತಗಳ ಸೊಲ್ಲು ತಾನಿಲ್ಲ 4ಹಿಂದಾದ ಮುಂದೆ ಬಹ ಹೊಂದಿದೀ ಭವ ಸಹಿತತಂದೆ ಕಣ್ದೆರಪಾಗಿ ತಾ ತೋರಿತುಬಿಂದು ಸಾಧನವಿಲ್ಲದೊಡಲೊಂದು ಲಭಿಸಿರಲುಬಂಧವನು ಬಿಡಿಸುವರೆ ಬಂದೆ ಗುರುವಾಗಿ 5ಪರಮ ಕರುಣಾಸಿಂಧು ಪತಿತ ಪಾವನ ಶೀಲದುರಿತಾಂಧಕಾರಕ್ಕೆ ದಿವಸಕರನುಹರಿ ದೀನವತ್ಸಲನು ಹಾಗನಾಥರ ತಾನುಹೊರೆವನೆಂಬೀ ಮಾತು ಹುಸಿಯಾಗಲಿಲ್ಲ 6ನನ್ನನೀಪರಿಯಲ್ಲಿ ನೋಡಿ ಸಲಹಿದ ಮೇಲೆುನ್ನೇಕೆ ಸಂದೇಹವಿದೆ ಚೋದ್ಯವುಸನ್ನುತನೆ ತಿರುಪತಿಯ ಸ್ವಾಮಿ ವೆಂಕಟರಮಣನಿನ್ನಡಿಯ ಸ್ಮರಣೆಯನು ನನಗಿತ್ತೆಯಾಗಿ 7ಕಂ|| ಭೃಗುವಾರದರ್ಚನೆಯನಿದಭೃಗುಸುತೆ ಸಹ ನೀನು ಕೊಳುತೆ ರಕ್ಷಿಸುಯೆನ್ನಂಹೊಗಲಾರೆನು ಭವಸಿಂಧುವನಿಗಮಾರಾಧಿತನೆ ದೇವ ವೆಂಕಟರಮಣಾಓಂ ಯಜ್ಞ ಭೋಕ್ತ್ರೇ ನಮಃ
--------------
ತಿಮ್ಮಪ್ಪದಾಸರು
ಭವ ನಿಂದುದಗಣಿತ ಕರ್ಮವೆಂದು ನಿನ್ನವನೆನಿಪುದೊ ಹರಿಯೇ ಅ.ಪಸೂಸುತಿದೆಯಜ್ಞಾನ ಮಾಸುತಿದೆ ಸುಜ್ಞಾನದೋಷಗಳು ಬಹುವಾಗಿವೆ ಹರಿಯೇಆಶೆಯೆಂಬುದಕಂತವಿಲ್ಲ ಬಹುಬಗೆ ತರದಪಾಶದಲಿ ಬಿಗಿವಡೆದೆನೋ ಹರಿಯೇಈಶ ನಿನ್ನಯ ಮಾಯೆಯೆಂಬ ಬಲು ಹುರಿ ಬಲೆಯುಬೀಸಿ ಸೋವುತ್ತಲಿದೆಕೋ ಹರಿಯೇಕ್ಲೇಶಸಾಗರದಲ್ಲಿ ಮುಳುಗಿ ತಡಿಯನು ಕಾಣೆವಾಸುದೇವ ಕಡೆಹಾುಸೋ ಹರಿಯೇ 1ಆವರಣ ವಿಕ್ಷೇಪವೆಂದೊಂದು ಶಕ್ತಿ ತಾನಾವರಿಸಿ ಬ್ರಹ್ಮಾಂಡವ ಹರಿಯೇತೀವಿಕೊಂಡೊಳಹೊರಗೆ ವಿಕ್ಷೇಪ ಶಕ್ತಿ ತಾಜೀವಕೋಟಿಗಳ ಸೃಜಿಸಿ ಹರಿಯೇಠಾವುಗಾಣದ ತೆರದಿ ಬಹುವಿಧದ ಕರ್ಮದಲಿಜೀವರನು ಬಂಧಿಸಿಹುದು ಹರಿಯೇಈ ವಿಧದ ಮಾಯೆ ತಾ ಯೋಗಿಗಳಿಗಸದಳವುದೇವ ಕೃಪೆಮಾಡಿ ಸಲಹೋ ಹರಿಯೇ 2ಮೂರು ಗುಣ ಮೂಲದಲಿ ಮೂರು ಕರ್ಮಗಳುದಿಸಿಮೂರಾರು ಕವಲಾದುದೋ ಹರಿಯೇಸಾರಿ ವೃಕ್ಷವ ಬಳ್ಳಿ ಮೀರಿ ಮುಸುಕಿದ ತೆರದಿತೋರದಿದೆ ನಿನ್ನ ನಿಜವ ಹರಿಯೇಬೇರುವರಿದಿಹ ಕರ್ಮಲತೆಯ ಜಾರಿಸಿ ಗುಣವಮೀರುವ ಉಪಾಯವೆಂತೋ ಹರಿಯೇಸೇರಿದೆನು ನಿನ್ನ ಚರಣವನು ವೆಂಕಟರಮಣದಾರಿಯನು ತೋರಿ ಸಲಹೋ ಹರಿಯೇ 3ಕಂ||ಗುರುವಾರದರ್ಚನೆಯನಿದಗುರುವಾಗಿಯೆ ಪೇಳ್ದೆ ನೀನೆ ಮೂಢನ ಸಲಹಲ್‍ಗುರುಸೇವೆಯೆಂತೊ ತಿಳಿಯದುಗುರುವರ ಸಂಗತಿಯನರಿಯೆ ನೀನೇ ಗತಿಯೈಓಂ ದಾಮೋದರಾಯ ನಮಃ
--------------
ತಿಮ್ಮಪ್ಪದಾಸರು
ಶುಕ್ರವಾರ ಕೇಶವನ ಭಜನೆ ಮಾಡಬೇಕೊ ನಮ್ಮ ಚಕ್ರಧಾರಿಯನ್ನು ಬಿಡದೆ ನೋಡಬೇಕೊ ಪ ಚಕ್ರಧಾರಿಯಾಗಿ ಸಕಲ ಚಕ್ರವರ್ತಿಗಳನು ಗೆದ್ದ ಆ ಕ್ರುರಗೆ ತಾ ವರನಿತ್ತು ನಿತ್ಯಾನಂದ ತ್ರಿವಿಕ್ರಮನನ್ನು ಅ.ಪ ಅಪ್ರಾಕೃತಮಾದ ವೈಕುಂಠನಾಥ ರಂಗಾ ಜಯ ಜಯ ಕ್ಷಿಪ್ರದಿಂದಾ ಭಕ್ತರಿಗೊಲಿಯುವಡೋಪಪತ್ರಂಗಾ ಅಪ್ರಮೇಯ ಅಚಲನಾನು ಆರೂಢರಿಗಾಧೀನವಿದಹುದೊ ನಿತ್ಯಾನಂದನೆ ಮುರಳೀಧರ ಗೋಪಾಲ ಜನಾರ್ದನ ಸತ್ಯಬ್ರಹ್ಮವೋ 1 ದಾಸದಾಸರಿಗೆ ದಾಸನಾಗಬೇಕೊ ಕೆಟ್ಟ ವೇಷ ಭಾಷೆ ದುರ್ದೋಷಗಳು ವೋಗಬೇಕೊ ಬ್ಯಾಸರಾಂತಕಮಾದ ಶ್ರೀಮದ್ದೇಶಿಕಾ ಶ್ರೀತುಲಸಿರಾಮಾ ನಾಸಿಕಾಗ್ರನಿವಾಸನೆಂದು ನಂಬಿ ನಾರಾಯಣನಂ ಬಿಡದೆ 2
--------------
ಚನ್ನಪಟ್ಟಣದ ಅಹೋಬಲದಾಸರು
ಸನ್ನುತ ಸತತ ಸದ್ಗುಣಪೂರ್ಣ ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ. ಕೋರಿದರೆ ಮನಕರಗಿ ಹಾರಿ ಬರುವಿಯೆಂದು ನಾರದರೆ ಮೊದಲಾದ ನಿಜಭಕ್ತರೆಲ್ಲ ಸಾರಿಹರು ಸರ್ವೇಶ ಸಾರತಮ ಸರ್ವರೊಳು ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ 1 ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು ಲುಪ್ತವಾಗುವುದಯ್ಯ ಒಂದೆ ಕ್ಷಣದಿ ನಿಪುಣನಾಗುವನವನು ಇಹಪರ ನಿಧಿ ಒದಗಿ ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು 2 ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ ಜಯೇಶವಿಠಲ ಕೀರ್ತಿಪೂರ್ಣಾ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು 3
--------------
ಜಯೇಶವಿಠಲ
(ಅ) ಶ್ರೀಹರಿಸ್ತುತಿ87ಎಷ್ಟು ಆನಂದವೊ ಶ್ರೀಹರಿಯ ಭಜನೆ ಪದುಷ್ಟತರ ದೋಷಗಳು ಬಳಲುವಕಷ್ಟಗಳ ಪರಿಹರಿಸಿ ಸರ್ವೋತ್ಕøಷ್ಟ ಪದವಿಯ ಕೊಡುವ ಲಕ್ಷ್ಮೀಇಷ್ಟನಾರಾಯಣನ ಭಜನೆ 1ಪದ್ಮದಳನಯನ ಪ್ರತಿಷ್ಠೆಯಪದ್ಮಶಾಲಿಯ ಭಕ್ತರೆಲ್ಲರುಪದ್ಮನಾಭನ ಪ್ರೀತಿಮಾಡಿ ಸುಭದ್ರಸಂಪದ್ಯುಕ್ತರಾದರು 2ಮಂದಿರವು ಕಟ್ಟಿಸಿಯು ಪರಮಾನಂದದಿಂ ಉತ್ಸವವು ನಡಿಸಿದರೆಂದು ಕೇಳಿದ ಭಾಗ್ಯಶಾಲಿಗಳುಇಂದಿರೇಶನ ಕೃಪೆಯ ಪಡೆದರು 3ಅಂಬುಜೋದರದಾಸರೆಲ್ಲರುತಂಬುರೆಯು ಕರತಾಳವಾದ್ಯವಿಜೃಂಭಿಸಿ ಹರಿಸ್ಮರಣೆಯ ಮಾಡುತಸಂಭ್ರಮದಿ ಬಂದವರು ನೋಡಲು 4ವಾಸುಕೀನಗರೇಶ ದಾಸರದಾಸರಾಗಿಯು ತುಲಸಿರಾಮದಾಸ ಪರಮೋಲ್ಲಾಸದಿಂ ಶ್ರೀವಾಸುದೇವನ ಚರಣನಂಬಿದೆ 5
--------------
ತುಳಸೀರಾಮದಾಸರು