ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

6. ತಾತ್ವಿಕ ಪದಗಳು ಇಲ್ಲವಲ್ಲಾ ಏ ಹರಿಯೆ ಪ ಗಂಧಾರದೊಳು ---ಕೊದ ಪಶುವಂತೆ ಹಿಂದೂ ಮುಂದು ತಿರುಗಿ ತಿರುಗಿ ಬಳಲುವದೊಂದೆ ಅ.ಪ ಕೆಲವು ದಿನವು ಮೇಘದೊಳು ಕೂಡಿ ಅಲ್ಲಿ ಜಾರಿಬೀಳುತಾ ಪರಿಪರಿಯಲ್ಲಿ ಇನ್ನೂ ಚಲನೆಯಿಂದ ಮೇಘ ಜಲದಾರಿಗಳಿಂದ ನೆಲದೊಳಗೆ ಹೊಕ್ಕು ನರಳಾಡುತಾ ಒಲಿದು ಔಷಧಿಗಳ ವಶವಾಗಿ ಧಾನ್ಯದೊಳು ಕಲೆತು ಪಚನೆಯಿಂದ ಬಳಲುತ ನೀ ಅಲ್ಲಿ ಪಕ್ವಾನ್ನಗಳಿಂದ ಪುರುಷನುದರ ಸೇರಿ ನಲಿದಾಡುತಲಿ ಹೋಗೆ ಕೆಲವು ಕಾಲಾದಲ್ಲಿ 1 ಸ್ತ್ರೀ ಪುರುಷ ಸಂಯೋಗದಿಂದ ಸ್ತ್ರೀ ಗರ್ಭದಲಿ ವ್ಯಾಪಿಸಿ ಕೊಂಡಿಯ ರೂಪತೋರುತ ನೀ ತಾಪವು ಬಡುತಾಲಿ ತಾಯಿ ಉದರದಲ್ಲಿ ಪರಿ ನವಮಾಸ ಪರಿಯಂತರದಲಿ ಪರಿ ಮಾಡಿದ ಹಿಂದಿನ ದೋಷಗಳಿಂದ ತನ್ನೊಳು ತನು ತಪಿಸುತಲಿ ದೀಪವಿಲ್ಲದೆ ಗುಡಿಯೊಳಗಿನ ದೇವರಂತೆ ಕೂಪದೊಳಗೆ ಬಿದ್ದು ಕಷ್ಟವ ಪಡುತಲಿ 2 ಎಂದೆಂದು ಬಯಲಿಗೆ ಹೊರಡುವೆಯೆನುತಾಲಿ ಸಂದೇಹ ಪಡುತಾಲಿ ಸರ್ವದಲಿ ಸಂಧಿಸಿಕಾಲದಿ ತಂದೆ ತಾಯಿಗಳಿಗೆ ತನಯನಾಗಿ ಹುಟ್ಟಿ ತೋರುತಲಿ ಕಂದನಾಗಿ ಅತಿ ಕಡುಮೋಹ ತೋರುತ ಸಂದುಹೋಯಿತು ಕಾಲಸ----ದಿನವೂ ಮುಂದು ಗಾಣದೆ ಬಾಲಪ್ರಾಯದ ಹಮ್ಮಿಲಿ ಅಂದದಿ ಆಟಪಾಟಗಳಿಂದ -------ದಿನಾ 3 ವಾರಕಾಂತೇರ ಸಂಗವುದ್ಯೋಗ ವ್ಯವ- ಹಾರ ದೈನಂದಿನ ಕೆಲವು ಕಾಲಾಯಿತು ಕ್ರೂರ ಚೋರ ದುಷ್ಟ ವ್ಯಾಪಾರಗಳ ಕೂಡಿ ಮೀರಿ ಗರ್ವದಲಿನ್ನೂ ಮೈಯ ಸ್ಮರಣೆದಪ್ಪಿ ಕಾಲ ಕೆಲವಾಯಿತು ಪಾರಗಾಣದೆ ಪ್ರಪಂಚದೊಳಗೆ ಬಿದ್ದು ಹೊರಟು ಬಿಡುತಾಲಿ ಹೋಯಿತು ಕೆಲವು ಕಾಲ4 ಸತಿಸುತರ ಸಂಪತ್ತು ಅತಿಮೋಹ ವ್ಯಾಸಂಗ ಕಾಲ ಸಂದು ಹೋಯಿತು ಮಂದ ಬುದ್ಧಿಲಿ ವಾರ್ಧಿಕದಿ ಹಿತಗಳು ತಪ್ಪಿ ಮಾನ ಹೀನನಾಗಿ ಗತಿಯು ಕಾಣದೆ ಘೋರ ಕಷ್ಟಕ್ಕೊಳಗಾಗಿ ಮತಿಯಲ್ಲಿ ಹರಿನಾಮ ಮರೆದು ಹೋಗಿ ಪತಿ ಹೆನ್ನೆ ವಿಠ್ಠಲನ ಪ್ರೀತಿಯ ಪಡೆಯದೆ ಅತಿ ಘೋರತಮಸಿ ಗರ್ಹಾನು ಆಗೊ ಕಾಲಾಯಿತು 5
--------------
ಹೆನ್ನೆರಂಗದಾಸರು
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಕಲಾರದಿರೆ ಎನ್ನ ಯಾಕೆ ಪುಟ್ಟಿಸಿದ್ಯೊ ಹರಿಯೆ ಪ ಬೇಕು ಬೇಡದಿದ್ದರೆ ನಿನಗೆ -----ಯುಗ ಜನರೊಳೆನ್ನಾ ಅ.ಪ ಹಿಂದಿನಿಂದ ಬಂದಾ ದೋಷಗಳಿಂದ ನಾನು ಬಹಳ ಬೆಂದು ಬಳಲುತ ನಿನ್ನ ಪಾದವ ಹೊಂದಿ ನಿನ್ನ ಸೇರೆ ಬಂಧು ಬಳಗ ನೀನೆ ಇನ್ನು ಎಂದು ಮೊರೆಯ ಇಡಲೂ ತಂದೆ ತಾಯಿಗಳು ಕಂದನ ಪೊರೆದಂತೆ ಮಂದರಧರ ಶ್ರೀ ಮಾಧವ ಕೃಷ್ಣಾ 1 ವಸುಧೆಯೊಳಗೆ ನಿನ್ನ ಬಿಡದೆ ಮನಸಿನಲಿ ಸ್ತುತಿಸುವಾ ಪಶುಪತಿ ಪಾಲಕನೆ ಎನ್ನ ಪಾಲಿಸೊ ಕೈ ಹಿಡಿದೂ ಶಿಶುವಿನಂದ ನಿನ್ನ ನಿಜ ಸೇವಕ ಜನರಂತೆ ಸೂನುವು ಎನಗೆ ಅಡಗಿಸಿ ರಕ್ಷಿಸಿದರೆ ವಸುಧೆಯೊಳಗೆ ಎನ್ನ 2 ಎಲ್ಲ ಜನಕೆ ಇನ್ನು ಕರ್ತನಲ್ಲವೇನೊ ನೀನು ಎಲ್ಲರಂತೆ ಎನ್ನಾ ಕರುಣಿಸಿ ಯಾಕೆ ನೋಡವಲ್ಲೆ ಹೊಲ್ಲನೊ ನಾ ನಿಮಗೆ ನಿಮ್ಮ ಧ್ಯಾನದಲ್ಲಿರುವನಲ್ಲೊ ಭಲೆ `ಹೆನ್ನೆ ವಿಠ್ಠಲನೆ' ನೀನಿಷ್ಟು ಭಾಗ್ಯವಂತ ನಾಗಿ ಬಡವನ ನೋಡಿ 3
--------------
ಹೆನ್ನೆರಂಗದಾಸರು