ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಸದ್ಗುರು ಆರೆಂದು ನೋಡೊ ಗುರುತಿಟ್ಟು ಮನವೆ ಸೇವೆ ಮಾಡೊ ಧ್ರುವ ಗುರುಗಳುಂಟು ಮನೆಮನೆ ಬಹಳ ಬ್ಯಾರೆ ಬ್ಯಾರೆ ಮಾಡುತ ತಮ್ಮ ಮ್ಯಾಳ ದೋರುತಿಹರು ಮೋಹಿಸುವ ವಾಗ್ಜಾಲ ಸರಿ ತಮಗಾರಿಲ್ಲೆಂದೆನ್ನು ತಲಾ ತೋಳ 1 ಎಲ್ಲ ಬಲ್ಲತನದಭಿಮಾನ ಅಲ್ಲೆ ಕೊಂಬುದೇನುಪದೇಶ ಜ್ಞಾನ ಸೊಲ್ಲಿಲ್ಹೇಳಿ ಕೇಳಿದರಾಹುದೇನ ಸಲ್ಲದರಲಿಹುದೆನೊಡೆತನ 2 ಸರ್ವಸಮ್ಮ ತಾಗುವ ಸುಜ್ಞಾನ ಗರ್ವಾಭಿಮಾನಗೆಲ್ಲಿಹುದು ಖೂನ ಪೂರ್ವಾಪರ ಸದ್ಗುರು ನಿಜಧ್ಯಾನ ದೋರ್ವದು ತಾಂ ಪಡೆದವಗ ಪೂರ್ಣ3 ವಿರಳಾಗತ ಎಲ್ಲಿಗೊಬ್ಬ ಮಹಿಮ ಶರಣ ಹೊಕ್ಕವಗೆ ಪೂಜ್ಯಪರಮ ಕರತಳಾಮಲಕವಾಗುವ ನಿಜವರ್ಮ ಗುರುಮಾರ್ಗದಾಗೆನಬೇಕು ನೇಮ 4 ಗುರುವರ ಶಿರೋಮಣಿ ಭಾನುಕೋಟಿ ಗುರುತಾದ್ಯೆನ್ನ ಮನದೊಳು ನಾಟಿ ಪರಬ್ರಹ್ಮನಹುದೊ ಜಗಜೇಟಿ ತರಳ ಮಹಿಪತಿ ಮನವಸೋಘಟಿ(?) 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯೊ ಮನವೆ ನಿಜವಸ್ತು ಖೂನ ಅಳಿಯೊ ದೇಹ ನಾನೆಂಬುವಭಿಮಾನ ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ 1 ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ 2 ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ ಮರೆತು ಮೈಮರೆವದೇನು ತಾ ಮೇಲೆ ಅರ್ತು ನಡೆವದು ನಿನಗೇನು ಸೋಲು ಕರ್ತು ಸದ್ಗುರು ಸ್ಮರಿಸೋ ಆವಾಗಲೂ 3 ಎಲ್ಲಾರಂಥ ತಾನಲ್ಲೊ ಗುರುನಾಥ ಸುಲ್ಲಭದಿಂದ ದೋರುವ ಸುಪಥ ಅಲ್ಲೆ ದೋರ್ವದು ಸಕಲ ಹಿತಾರ್ಥ ಬಲ್ಲ ಮಹಿಮರೆ ತಿಳಿವರೀ ಮಾತ 4 ಭಾಸುತದೆ ಭಾಸ್ಕರ ಕೋಟಿ ಕಿರಣ ಲೇಸಾಗಿ ಹೋಗೊ ಗುರುವಿಗೆ ಶರಣ ದಾಸಮಹಿಪತಿ ಸ್ವಾಮಿ ದೀನೋದ್ಧಾರಣ ಭಾಸಿ ಪಾಲಿಸುವ ತಾ ಸುಕರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮ ಪಾವನ ಮೂರುತಿಯೇ | ಶರಣ ರಕ್ಷಕ ಮಹೀಪತಿಯೇ ಪ ಸರ್ವಾಗಮ ಸನ್ಮತಾ ದೋರ್ವದು ನಿನ್ನ ಚರಿತಾ | ಉರ್ವಿಯೊಳಗೆ ಸುಖದಾತಾ | ಮೂರ್ವೀ ಜಗವಂದಿತಾ | ಸರ್ವಗುಣ ನಿಧಿಯೇ ನೀ | ಸರ್ವರೊಳು ವ್ಯಾಪ್ತನಾಗಿ | ಕಾಲ ಕೊಂಬೆ1 ಕಾಮನೆ ಪೂರೈಸುವಾ | ಕಾಮಧೇನುವೆ ಜಗಜೀವಾ | ಸುರತರು ದೇವಾ | ಸ್ವಾಮಿ ನೀ ಗತಿಯೆಂದು | ನಿಮ್ಮೊರೆ ಹೊಕ್ಕರೆ | ಪ್ರೇಮದಿ ಸಲಹುವೆ | ಈ ಮನುಜರನು2 ನಿನ್ನ ಮಹಿಮೆ ತಿಳಿಯಲು | ಎನ್ನಳವೇ ಧರಿಯೊಳು | ಚಿನ್ನ ಕೃಷ್ಣೊಡಿಯಾ ದಯಾಳು | ಉನ್ನತೋನ್ನತ ಕೃಪಾಳು | ಮುನ್ನ ಮಾಡಿದ ಘನ್ನಪರಾಧವ | ಇನ್ನು ಕ್ಷಮಿಸಿ ನೀ | ಚನ್ನಾಗಿ ಕಾಯೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು