ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭವಿಸುವುದೆನ್ನದೇ [ಜೀವ] ನೀನಿತ್ತುದ ಪ ಅನುಭವಿಸುವುದೆನ್ನ ದಿನಚರಿ ಕರ್ಮವೋ ನೆನೆವುದ ಪಡೆವುದು ಕನಸೋ ರಂಗಯ್ಯ ಅ.ಪ ಮನದ ವೇಗವ ನಿಲಿಸಲಾರೆನು ಮನದ ಬಯಕೆಯ ಪಡೆಯಲಾರೆನು ಮನವ ನಿನ್ನಲಿ ನಿಲಿಸಲಾರೆನು ಮನದಿ ನೀನಿರೆ ಸಕಲ ಸೌಖ್ಯವು 1 ಕಷ್ಟನಷ್ಟ ವಿಶಿಷ್ಟವು ನಿ ನ್ನಿಷ್ಟವೆಂಬುದ ಬಲ್ಲೆನಾದರು ಕಷ್ಟಕಳುವೆನು ಭ್ರಷ್ಟದೋರುವೆ ದೃಷ್ಟಿ ನಿನ್ನದು ದೊರಕುವವರೆಗೂ2 ನಿನ್ನ ಮೂರ್ತಿಯು ಮನದಿ ನೆಲೆಸಲಿ ನಿನ್ನ ಭಜನೆಯು ರಸನೆಗಾಗಲಿ ನಿನ್ನ ಕೃಪೆಯವಲೋಕಗೊಲಿಯಲಿ ಚೆನ್ನ ಮಾಂಗಿರಿರಂಗನೊಲಿಯಲಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಘನ ಶ್ರೀ ಗುರು ಅವಧೂತನೇ ಪ ಅನಂತ ರೂಪವ ದೋರುವೆ ದತ್ತಾತ್ರೇಯ ಸುರ ಮುನಿ ಸುತನೇಅ.ಪ ನೀನೇ ಸ್ವಾಮಿ ಕೂರ್ಮನು ನೀನೇ ವರಹನು ನೀನೇ ನರಸಿಂಹನು ನೀನೇ 1 ಬಲಿಚಕ್ರನ ಮನಿ ಮುಂದಲಿ ಸುಳಿದು ನಿಂದ ವಾಮನ ನೀನೇ ಕಲಿತನದಲಿ ಕ್ಷತ್ರೇರ ಸಂಹರಿಸಿದ ಪರಶುಧರನು ನೀನೇ ಇಳೆಯ ಭಾರಕರಾದ ರಾವಣಾದಿಕರಾ ತರಿದ ರಾಮನು ನೀನೇ ಫಲಗುಣನಾ ರಥ ಸಾರಥಿಯಾದಾ ಶ್ರೀ ಕೃಷ್ಣನು ನೀನೇ 2 ರೂಪನು ನೀನೇ ಚಪಲತರದ ಹಯವೇರಿ ಮೆರೆದನು ಕಲ್ಕ್ಯಾವತಾರ ನೀನೇ ತಪನ ಶತಕೋಟಿ ಪ್ರಕಾಶವೆನಿಸುತಿಹ ಪರಬೊಮ್ಮನು ನೀನೇ ಕೃಪೆಯಿಂದಲಿ ಸಲಹುವ ಮಹಿಪತಿ ನಂದನ ಪ್ರಭು ನೀನೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಗುರುನಾಥ ದಯ ಗುಣದಲಿ ಅಖಂಡಿತ ಧ್ರುವ ಅನುಗ್ರಹದಲಿ ಸಮರ್ಥ ಜನವನದೋರುವೆ ಪರಮಾರ್ಥ ನೀನೆ ಸಕಲಾರ್ಥ ಅಣು ರೇಣುಕ ಸುಹಿತಾರ್ಥ 1 ಬಡವರಿಗಾಧಾರಿ ನೀಡುವುದರಲಿ ಘನ ಉದಾರಿ ಕುಡುವೆ ನಿಜದೋರಿ ಕಡೆಗಾಣಿಸುವೆ ಸಹಕಾರಿ 2 ಪಿಡಿದವರ ಕೈಯ ಬಿಡ ಎಂದೆಂದಿಗೆ ನಿಶ್ಚಯ ಒಡೆಯನಹುದಯ್ಯ ಮೂಢ ಮಹಿಪತಿ ಮಹದಾಶ್ರಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಂಗಳ ಮುನಿಜನ ಪಾಲ ಜಯ ಜಯ ಸ್ವಾಮಿ ಸದ್ಗುರು ಕೃಪಾಲ ಧ್ರುವ ತೇಜ:ಪುಂಜವು ನಿಮ್ಮ ಘನಸುಖಸಾಂಧ್ರ ರಾಜ ತೇಜೋನಿಧಿ ರಾಜ ರಾಜೇಂದ್ರ ಸುಜನರ ಹೃದಯ ಸುಜ್ಞಾನ ಸಮುದ್ರ ಅಜಸುರವಂದ್ಯ ಶ್ರೀ ದೇವದೇವೇಂದ್ರ 1 ಪತಿತ ಪಾವನ ಪೂರ್ಣ ಅತಿಶಯಾನಂದ ಯತಿ ಮುನಿಗಳಿಗೆ ನೀ ದೋರುವೆ ಚಂದ ಪಿತಾಮಹನ ಪಿತನಹುದೊ ಮುಕುಂದ ಸತತ ಸುಪಥದಾಯಕ ನೀ ಗೋವಿಂದ 2 ದೇಶಿಕರಿಗೆ ದೇವ ನಿಮ್ಮ ಸ್ವಭಾವ ಋಷಿ ಮುನಿಗಳಿಗೆ ನೀ ಜೀವಕೆ ಜೀವ ದಾಸ ಮಹಿಪತಿಗೇನಹುದೊ ಮನದೈವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಸುದೇವನ್ನಾ ಪಾದವ ನಂಬಬಾರದೇ | ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ | ಯನುತ ಬಂದರೆಯುನೊಡದಿರು ಅವರ ಕಡೆಯಾ 1 ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ | ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2 ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು | ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3 ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ | ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4 ಎರಡು ದಿನದಿದು ಸಂಸಾರವೆಂಬುದು ನೋಡಿ | ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5 ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು | ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6 ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ | ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು