ಒಟ್ಟು 6 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನ ಕಾಣದೆ ಪರಗತಿ ದೊರೆಯದು ಪ ವೇದ ಶಾಸ್ತ್ರಗಳ ನೋದಿ ಭೇದಿಸದೆ | ವಾದದಿಂದ ಜನಗೆದ್ದನು | ಕೊಂಡ ಗಾದಿಯಂತೆ ನಿಜ | ಸಾಧುರ್ಹಾದಿಯನೆ ಮರೆತನು 1 ಕರ್ಮ ಧರ್ಮ ಸಾರಯಜ್ಞದಿ | ಭೂರಿಯಶವನೆ ಪಡೆದನು | ಏರಿ ಸ್ವರ್ಗದಿ ಜಾರಿ ಬಿದ್ದ ಸಂ | ಸಾರ ವಾರಿಧಿಯ ಸೇರಿದನು 2 ರಂಜನಿಂದ ವಣಭಂಜನ್ಯಾತರೆದು | ಕಂಜನಾಭನ ನೆರೆ ನಿಲುಕನು | ಅಂಜಲೆತ್ತಿದರ ಗುರು ಮಹಿಪತಿ | ಪ್ರಾಂಜಳಾಗಿ ಘನದೋರುವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಾತಿ ಕುಲಗೋತ್ರಗಳ ಖ್ಯಾತಿ ಹಿರಿದಲ್ಲಯ್ಯ ಪ ನೀತಿ ನಯ ಭಕುತಿಗಳು ಹಿರಿಯವಯ್ಯ ಅ.ಪ ಸ್ನಾನ ಸಂಧ್ಯಾ ಹೋಮ ಧ್ಯಾನ ದಿನಚರ್ಯೆಗಳ ತಾನಲಕ್ಷ್ಯವ ಗೈವ ಮಾನವನು ದ್ವಿಜನೇ ಶ್ರೀನಿವಾಸಾ ರಂಗ ದಾನವಾರಿ ಎಂದು ಜಾನಿಸುವ ಹರಿಜನರು ಹೀನರಹರೇ1 ಬೂದಿ ನಾಮವ ಬಳಿದು ವೇದಾಂತಿ ತಾನೆಂದು ಮೇದಿನಿಯ ಜನರಲ್ಲಿ ಕ್ರೋಧ ತೋರಿ ಮಾಧವನ ಭಕುತರಲ್ಲಿ ಭೇದ ವೈರವ ತಾಳಿ ವಾದ ಮಾಡುವ ನರಗೆ ಹರಿಯ ಕೃಪೆಯುಂಟೆ 2 ವನಜನಾಭನ ನೆನೆದು ತನುಮನವನರ್ಪಿಸದೆ ಧನದಾಸೆದೋರುವನು ಹರಿಭಕುತನೆ ಕನಸುಮನಸಿನೊಳೆಲ್ಲ ಮಾಂಗಿರೀಶನ ಭಜಿಸಿ ದಿನಪೂಜೆಗೈವವನು ಕುಲಹೀನನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತೋರುವನೂ | ದಯ ದೋರುವನೂ|| ಭಕ್ತರಿಗೆ | ದಯ| ದೋರುವನು ಪ ತೋರುತಲವರನು | ಪರಿಪರಿವಿಧದೊಳು ಪೊರೆಯುವನೂ | ಹರಿ | ಮೆರೆಯುವನೂಅ. ಪ ಆದಿಯೊಳಾ| ತಮನೆಂಬಾಸುರನನು || ಭೇದಿಸಿ ವೇದವ ತಂದವನು || ಮೋದದಿ ಗಿರಿಯನು | ಕೂರ್ಮವತಾರದಿ | ಸಾಧಿಸಿ ಬೆನ್ನೊಳು ಪೊತ್ತವನು 1 ಧರಣಿಯ ಕದ್ದೊಯ್ದಸುರನ ಬಗಿಯಲು | ವರಾಹವತಾರವ ತಳೆದವನು|| ನರಮೃಗರೂಪದೊ| ಳುದಿಸುತ ಕಂಬದಿ| ವರ ಪ್ರಹ್ಲಾದನ ಪೊರೆದವನು 2 ಬಲಿಯೊಳು ದಾನವ |ಬೇಡುತ ಮೂರಡಿ| ಯೊಳಗಿಳೆಯನು ತಾನಳೆದವನು|| ಭಾರ್ಗವನೂ ಭೃಗು ಮೊಮ್ಮಗನು| 3 ಶರಣಗೆ ಲಂಕಾ| ಪುರದೊಡೆತನವನು| ಸ್ಥಿರವಾಗಿತ್ತಿಹ ರಾಘವನು|| ತುರುಗಳ ನಿಕರವ ಪೊರೆದವನು 4 ಬೌದ್ದವತಾರವ | ಧರಿಸಿದ ಮಹಿಮನು| ಕಲ್ಕಿಸ್ವರೂಪದಿ ಮೆರೆಯುವನು|| ಶ್ರಧ್ದೆಯೋಳವನನು | ಭಜಿಸಲು ಮುದದಲಿ | ಅಬ್ಧಿವಾಸ ಮೈದೋರುವನು 5 ಮಧುವನದಲಿ ಧ್ರುವ | ತಪವಾಚರಿಸಲು | ಮುದದೊಳು ಧ್ರುವಪದವಿತ್ತವನು | ಸುದತಿಯು ಮೊರೆಯಿಡ | ಲಕ್ಷಯ ಸೀರೆಯ | ಇತ್ತವನೂ ದಯವಿತ್ತವನು6 ಶೇಷಗಿರೀಶನು | ದಾಸರಿಗೊಲಿದವ | ರಾಸೆಯ ಸಲಿಸಿದ | ಶ್ರೀವರನು || ಶೇಷಶಯನ ಹರಿ | ದಾಸದಾಸನೆ | ನ್ನಾಸೆಯನೂ ತಾನೀಯುವನು 7 ಪಂಕಜನಾಭನು | ಪರಮಪವಿತ್ರನು | ಕಿಂಕರಜನಪರಿಪಾಲಕನು || ಶಂಕಚಕ್ರಂಗಳ ಧರಿಸಿದ ಶ್ರೀಪತಿ | ವೆಂಕಟೇಶ ದಯದೋರುವನು 8
--------------
ವೆಂಕಟ್‍ರಾವ್
ಮುಂದೋರುವನು ಮುರಾರಿಎಂದೆಂದು ಕುಜನಕೆ ದೂರನುಶೌರಿಪ.ಘನಭಾಗವತಶ್ರವಣವ ಮಾಳ್ಪರಿಗೆವನಜನಾಭನ ಸಂಕೀರ್ತನೆ ಕಾಮೇಷ್ಟರಿಗೆಮುನಿವಂದ್ಯ ಕೃಷ್ಣನ ಮನಸಲಿ ಮರಿಯದೆಗುಣಕರ್ಮನಾಮ ಸ್ಮರಣೆಯಲಿಹರಿಗೆ1ಶ್ರೀ ವಾಸುದೇವಾಂಘ್ರಿ ಸೇವಾಸಕ್ತರಿಗೆಶ್ರೀವರನರ್ಚನೆ ಸದ್ಭಾವಯುಕ್ತರಿಗೆಸಾವಿರಭಿದಾನದ ದೇವದೇವಗೆ ಸರ್ವದಾ ವಂದಿಸುವ ವ್ಯಾಸಂಗವಿಡಿದರಿಗೆ 2ಶೇಷಶಯನನ ಸದ್ದಾಸರಾದರಿಗೆದೋಷದೂರನ ಸಖರಹ ಸಜ್ಜೀವರಿಗೆಪ್ರಸನ್ವೆಂಕಟವಾಸಗೆ ತನ್ನನರ್ಪಿಸಿ ಮುಕುತಿ ಮನೆಯಾಸೆವಂತರಿಗೆ 3
--------------
ಪ್ರಸನ್ನವೆಂಕಟದಾಸರು