ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಸಮಯ ಜಗದೀಶ ಯಾಕೆ ಸಾವಕಾಶ ಮದಮುಖರ ಮುರಿದೊತ್ತು ಮಾಕಮಲಜೇಶ ಪ. ಕ್ಷೀರಾಬ್ಧಿ ಸುಧೆ ಸುರರ ಸೇರಿತೆಂದಸುರೇಶ ರಾರುಭಟಿಗೊಳೆ ಶಂಬರಾರಿ ಕೆಂಗೆಡಲು ಕಾರುಣ್ಯವಾರ್ಧಿ ಖಗವೇರಿ ಬಂದ ಭಯಕರ ದೋರಿದವನೆಂದರಿದು ಚೀರುವೆನು ನಿನ್ನಿದಿರು 1 ಎಷ್ಟೋ ಪರಿಯಿಂದ ಪರಮೇಷ್ಠಿವಂದ್ಯನೆ ಕೃಪಾ- ದೃಷ್ಟಿಯೆನ್ನಲಿ ನೀನಿಟ್ಟು ಸಲಹುವುದು ಅಷ್ಟಮದಮೋಹದಿಂದೆಷ್ಟಾದರೂ ಬೇಸರದೆ ನಿಷ್ಠೂರ ನುಡಿವ ಮತಿಭ್ರಷ್ಟರ ಮನದಪ್ಪದಕೆ2 ನಿನ್ನ ದಾಸರ ನಿಂದೆ ನೀ ಸಹಿಸದವನೆಂದು ಮುನ್ನ ಮುನಿಗಳು ಪೇಳ್ದ ಮುಖ್ಯ ತತ್ವವನು ಪನ್ನಗಾಚಲನಾಥ ಪಾಲಿಸುವುದುಚಿತ ಸುರ ಮಾನ್ಯ ಮಾನವಕಾವರನ್ಯರನು ನಾ ಕಾಣೆ 3
--------------
ತುಪಾಕಿ ವೆಂಕಟರಮಣಾಚಾರ್ಯ