ಒಟ್ಟು 4 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ ಧ್ರುವ ದೇಹದಂಡನೆ ಮಾಡಿದರೇನು ಬಾಹ್ಯಾರಂಜನೆ ದೋರಿದರೇನು 1 ಶಬ್ದ ಜ್ಞಾನ ಸೂರಾಡಿದರೇನು ಲಭ್ದಾ ಲಬ್ಧೇಲಾಡಿದರೇನು 2 ರಿದ್ದಿ ಸಿದ್ದಿಯ ದೋರಿದರೇನು ಗೆದ್ದು ಮಂತ್ರಾಂತ್ರಸೋಲಿಪರೇನು 3 ಗೀರ್ವಾಣ ಆಡಿದರೇನು ಭೂತ ಭವಿಷ್ಯ ಹೇಳಾಡಿದರೇನು 4 ವ್ರತ ತಪ ತೀರ್ಥಾಶ್ರೈಸಿದರೇನು ಕೃತ ಕೋಟ್ಯಜ್ಞಾವ ಮಾಡಿದರೇನು 5 ಯೋಗಾಯೋಗಾಚರಿಸಿದರೇನು ಭೋಗ ತ್ಯಾಗ ಮಾಡಿದರೇನು6 ಏನು ಸಾಧನೆ ಮಾಡಿದಫಲವೇನು ಖೂನ ದೋರದೆ ಮಹಿಪತಿಗುರುತಾನು7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಙÁ್ಞನ ಧ್ರುವ ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಧ್ರುವ ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1 ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2 ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3 ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4 ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು