ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ದಯೆದೋರಯ್ಯ ನೀರಜನಾಭನೆ ಕರುಣಿಸು ಮಹರಾಯ ಪ ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ 1 ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ2 ಜಡಭವತೊಡರನು ಗಡನೆ ಕಡೆಹಾಯ್ಸಿ ನಿ ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ 3
--------------
ರಾಮದಾಸರು
ಸ್ವಾಮಿ ಸಗುಣ ನಿರ್ಗುಣ ಬಾರಯ್ಯ ಬ್ರಹ್ಮಾನಂದ ಸುಖವು ದೋರಯ್ಯ ಧ್ರುವ ಕಣ್ಣು ಬಡೆಯುತದೆ ನಿಮ್ಮ ನೋಡೇನೆಂದು ಪುಣ್ಯಚರಣ ಸುಪ್ರಭೆದೋರೋ ನೀ ಬಂದು ಧನ್ಯಧನ್ಯಗೈಸುವದೋ ಕೃಪಾಸಿಂಧು ಎನ್ನೊಡೆಯ ನೀನಹುದೋ ದೀನಬಂಧು 1 ಅನುದಿನ ಸುಸೇವೆ ನಿಮ್ಮ ಮಾಡೇನೋ ಕ್ಷಣಕ್ಕೊಮ್ಮೆ ಸ್ವರೂಪ ನಾನೋಡೇನೋ ಘನ ಸುಖದೊಳು ನಾ ಬೆರೆದಾಡೇನೋ ನೆನೆವಂಥ ದಾಸರ ನಿಮ್ಮ ಕೂಡೇನೋ 2 ಹೃದಯದೊಳು ನಿಜವಾಗಬೇಕಿಗ ಸದಾಸರ್ವದಾ ಮಾಡೋ ಏನ್ನೊಳೀವ್ಹಾಂಗ ಪಾದಪದ್ಮಕ್ಯೋಗ್ಯ ಮಾಡೋ ಮಹಿಪತಿಗೆ ಇದೆ ಪುಣ್ಯ ನೋಡಯ್ಯ ಕುಲಕೋಟಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಡಿದ ಕೈಬಿಡಬೇಡವೋ ರಾಮಾ ಪ ಹಿಡಿದ ಕೈ ಬಿಡಬೇಡ ಕಡಲವಾಸವು ಬೇಡ ತಡಿಗೆ ತಳೆಯದಿರಬೇಡ ಕಡೆಗಣ್ಣಿಡ ಬೇಡ ಅ.ಪ ನುಡಿ ಕೇಳದೆನಬೇಡ ಅಡಿದೋರದಿರ ಬೇಡ ಕುಡುಕ ಹೋಗೆನಬೇಡ ನುಡಿಸದಿರ ಬೇಡ ಕೊಡು ಕೊಡೆನ್ನಿಸಬೇಡ | ಪಡೆಯುವಾಸೆಯು ಬೇಡ ದೃಢವಾಗಿ ನಿನ್ನಡಿಯ ಹಿಡಿಸದಿರ ಬೇಡ 1 ಬಿಗುಮಾನ ಬೇಡಯ್ಯ ನಗುಮೊಗವ ತೋರಯ್ಯ ಬಗೆಯರಿತು ನಡೆಸಯ್ಯ ಸುಗತಿದೋರಯ್ಯ ಬಿಗಿಹಿಡಿದ ಕೈಯ ಜಗುಳಿಸಲು ಬೇಡಯ್ಯ ನಿಗಮ ವಂದಿತಜೀಯ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್