ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ ಒಂದು ಮಾತಿನಲಿ ಬೆಂಡಾದೆನೇ ಅರಸುತ ನಾನಾದಾರಿಗಳಲ್ಲಿ ಪುಂಡರೀಕಾಕ್ಷನು ದೋರನು ಎಲ್ಲಿ ಮಣಿ ಕುಂಡಲ ಮಂಡಿತ ಗಂಡ ಕಪೊಲ ಪ್ರಚಂಡನ ಲೀಲೆ 1 ಒಮ್ಮೆ ಭಾವಿಕ ಗೋವಳರಾ ಆಟ ಪಾಟದಲಿರುವಾ ಒಮ್ಮೇ ಕಾಮುಖ ಗೊಲ್ಲತೇರಾ ಚಿತ್ತಕಾನಂದ ನೀವಾ ಒಮ್ಮೆ ಯಜ್ಞ ಪತ್ನಿಯರಾ ಸವಿಯಾಟ ಕವಲಿವಾ ಅಮ್ಮ ಒಂದೇ ಠಾರ್ವೆನೇ ಹೇಳುವಾ ಅವ ನಿಮ್ಮವನೇ ತಮ್ಮನೇ ಸುಮ್ಮನೇ ತಿರುಗುತ ಘಮ್ಮನೇ ಝುಮ್ಮನೇ ಹೊಳೆವಾ 2 ಪುಲ್ಲ ನಾಭನ ಕಾಣದಿರೇ ಕಣ್ಣು ಕುರುಡವು ನಮ್ಮ ಸೊಲ್ಲ ವಾಲಿಸದಿಹ ಹರಿಯಾ ಕಿವಿಬಧಿರವು ನಮ್ಮ ಅಲ್ಲಿ ಮನುಜ ಮಹಿಪತಿಸುತ ಪ್ರಭು ಪರಬೊಮ್ಮ ನಿಲದಪ್ಪಿ ಕೊಳಲು ಸಂಭ್ರಮಾ ಅವನೆಲ್ಲೆಲ್ಲ ನೋಡಲು ಅಲ್ಲಲ್ಲಿ ನಿಂದಿಹ ಇಲ್ಲದ ಸ್ಥಳವಿಲ್ಲವಮ್ಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೋರನು ಬ್ರಹ್ಮಾದಿಕರಿಗೆ ಪ ದುಷ್ಟತನವ ಮಾಡಲು ಮನಿಮನಿ ಪೊಕ್ಕು| ಸಿಟ್ಟಿಲೆ ಕಣ್ಣಿಲೆ ಚರಣವನು| ಕಟ್ಟಲು ಒರಳನೆಳೆದುಕೊಂಡು ಹೋಗಿ| ನೆಟ್ಟನೆರಡಮರಕೆಡಹಿದ ಕೃಷ್ಣಾ 1 ಮಣ್ಣವನುಂಗಲು ಮುಳಿಯಲು ಗೋಪಿ| ಚಿಣ್ಣರ ಕೇಳೆ ನಾನಿಲ್ಲೆನುತ| ಸಣ್ಣ ಚೆಲುವಾ ಬಾಯಾ ನೋಡೆಂದು ತೆರೆದು ತಾ| ಉನ್ನಂತ ಬ್ರಹ್ಮಾಂಡ ದೋರಿದಾ ಕೃಷ್ಣಾ2 ನೋಡು ಬಾಲಕ ರೂಪ ತಾನಾಗಿಹಾ| ಪ್ರೌಢತನದಿ ಕೊಳಲನೂದಿ| ರೂಢಿಲಿ ಗೋಪಿಕ ಮನಸೆಳೆದು ನಲಿ| ದಾಡುವ ಮಹಿಪತಿ ಸುತಪ್ರಿಯ ಕೃಷ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಜಿಸಿ ನೋಡಿರೋ ಭಾವಭೋಕ್ತನ ಅಜಸುರೊಂದ್ಯ ಸುಜನಪಾಲ ತ್ರಿಜಗದಾತ್ಮನ ಧ್ರುವ ಭಾವಕ ಸುಲಭ ಜೀವದ ನೆಲೆನಿಭ ಕಾವಕರುಣ ದೇವನೀತ ಪ್ರಾಣವಲ್ಲಭ 1 ರಾಜಿಸುತಿಹ್ಯನು ತೇಜೋಮಯದಲಿ ಭಜಕ ಪ್ರಿಯನಾಗಿ ಒಲಿವ ನಿಜಸುಮನದಲಿ 2 ಡಂಭಭಕುತಿಗೆ ಇಂಬದೋರನು ನಂಬಿನಡೆವ ಭಕ್ತಜನರ ಮನೆಯೊಳಿಹ್ಯನು 3 ಭಕುತಿ ಭಾವಕ ನೆಲಿಯುಗೊಂಬನು ಮಕುಟಮಣಿ ಸುಭಾನುಕೋಟಿ ಪ್ರಕಟ ಹೊಳೆವನು 4 ಒಂದು ಮನದಲಿ ಹೊಂದಿ ಸುಖಿಸಿರ್ಯೊ ಎಂದೆಂದು ಬಿಡದೆ ಸಲಹುತಿಹ್ಯ ಮಹಿಪತಿ ಸ್ವಾಮಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಡಿ ಮನವೇ ಸಂತರ ಸಂಗ ಪ ಹಿಡಿಮನವೇ ಸಂತರ ಸಂಗಾ | ಭವ ಭಯ ಭಂಗಾ | ಅಡಿಗಳಗೆರಗುತ ಸಾಷ್ಟಾಂಗಾ | ಪಡಕೋ ಚಿತ್ಸುಖದಂಗಾ 1 ಸಿಕ್ಕಿದು ಭಾಗವತರಣ | ಶರಣಾ | ಸಿಕ್ಕಲು ದಕ್ಕಿಸಿಕೋ ಕರುಣಾ | ಉಕ್ಕಲು ಜ್ಞಾನದಾ ನಿಜ ಸ್ಪರಣಾ | 2 ಗುಕ್ಕದವನೇ ತಾ ಹರಿಶರಣಾ | ಶರಣೆಂಬುದು ಸು¯ಭವಲ್ಲಾ | ಹರಿಮಯ ಕಾಂಬನು ಜಗವೆಲ್ಲಾ | ನೆರೆ ಹಮ್ಮ ಮಾತುಗಳುಳದಿಲ್ಳಾ | ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ 3 ಎಲ್ಲರ ಮನದಂತಾನಾಗಿ | ನಿಲ್ಲುವ ಜನದೊಳು ನಿಜಯೋಗಿ | ಫುಲ್ಲನಾಭನ ಭಕುತಿಲಿ ಮುಣುಗಿ | ಬಲ್ಲವಿಕೆಯ ದೋರನು ಬಾಗೇ 4 ಏನೋ ಜ್ಞಾನಿಗಳಾನಂದಾ | ತಾನೇ ಬಲ್ಲನು ಶ್ರೀ ಗೋವಿಂದಾ | ಖೂನಕ ಸಾರಿದ ನುಡಿವಂದಾ | ಸ್ವಾನುಭವದೀ ಮಹಿಪತಿ ಕಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು