ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೂಢನಾದ ಯೋಗಿಯ ಬಗೆಯಿದು | ಈ | ರೂಢಿಯೊಳು ಜನಕಿನ್ನು ಕಾಣಿಸದು ಪ ಮಾತುಗಳ ಆಡನು | ಮೌನಗಳ ಮಾಡನು | ನೀತಿ ಅನೀತಿಗಳೆಂಬುದ ನೋಡನು | ಯಾತರೊಳು ತನಗೆ ಸಂಪ್ರೀತಿಯೆಂಬುವದಿಲ್ಲ | ದಾತನಾಗಿನ್ನಾತ ಚರಿಸುತಿಹನು 1 ವೇದಗಳ ನೋಡನು ಶಾಸ್ತ್ರಗಳ ಕೇಳನು | ನಾದ ಬಿಂದು ಕಳಾತೀತ ತಾನು | ಸಾಧು ಸಂತರ ಸಂಗದೊಳು ಬೋಧದಲಿ ನಲಿವುತಲಿ | ಆದ್ಯನಾದಿ ತಾನೆಂದು ತಿಳಿದಿಹನು 2 ವಂದಿಸಲು ಹಿಗ್ಗನು | ನಿಂದಿಸಲು ತಗ್ಗನು | ಬಂದದಕೆ ತಾ ಹಿಂದು ಮುಂದಾಗನು | ತಂದೆ ಭವತಾರಕನ ಚರಣಾರವಿಂದವನು | ಹೊಂದಿ ಪೂರ್ಣಾನಂದದೊಳಗಿಹನು 3
--------------
ಭಾವತರಕರು
ಏನೆಂದ್ಹೇಳಲಿ ನಾನು | ಸಾಧುರಾ ಮಹಿಮೆಯನು | ಮನವ ವುನ್ಮನಮಾಡೀ | ಘನಸುಖದೊಳುಕೂಡಿ | ಆನಂದದೊಳಗಿಹನು ಪ ಬಹುಮಾತವನಾಡಾ | ಮೌನವಹಿಡಿದುಕೂಡಾ | ಸಹಜದಿ ನುಡಿವಂದಾ | ನಾಡಿದ ರದರಿಂದಾ | ಸ್ವಹಿತದ ಸುಖನೋಡಾ 1 ಅರಿಯಾನಂತಿಹನಲ್ಲಾ | ಅರಿವನು ಉಳಿದಿಲ್ಲಾ | ಅರಹು ಮರಹು ಮೀರಿ | ಕುರ್ಹುವಿನ ಮನೆಸೇರಿ | ಅರಿಸುಖ ಸಮವೆಲ್ಲಾ 2 ಸಾಧುರ ನಿಜವೆಲ್ಲಾ | ಸಾಧು ಆದವ ಬಲ್ಲಾ ಸಾಧುರ ವೇಷದಿ | ಉದರವ ಹೊರೆಯುತಾ | ಬೋಧಿಸುವದಲ್ಲಾ 3 ಆಶೆಯಂಬುದು ಬಿಟ್ಟು ವೇಷವ ಕಳೆದಿಟ್ಟು | ಲೇಸಾಗಿ ಗುರುವರ | ಮಹಿಪತಿಸ್ವಾಮಿಯಾ | ಧ್ಯಾಸದಿ ಬೆರೆತಿಹನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೆ ಪಾಲಿಸೊ ಎನ್ನ ಮಾರುತಿರಾಯ ಪ ನೀನೆ ಪಾಲಿಸೊ ಮಹಾನುಭಾವನೆ ಸದಾ ಙÁ್ಞನ ಭಕುತಿನಿತ್ತು ಮಾನಾದಿ ನೀ ವೇಗ ಅ.ಪ ನಿನ್ನ ಆಧಾರ ಲೋಕಾ ಜನರು ಸದಾ ನಿನ್ನ ಭಜಿಸುವೊರೇಕಾ ಪ್ರಕಾರದಿ ನಿನ್ನ ಸೇವಿಪರನೀಕಾ ಸಂಗಾವಿತ್ತು ನಿನ್ನ ಧ್ಯಾನಿಪ ವಿವೇಕಾ ಮತಿಯನಿತ್ತು ಮನ್ನಿಸೊ ಮಜ್ಜನಕಾ ನಿನ್ನಾ ಭಜಿಪರಿಗೆ ಅನ್ಯಾಲೋಕಗಳುಂಟೆ ಘನ್ನಾ ಹರಿಯ ಲೋಕವನ್ನೆ ಸೇರುವರಯ್ಯಾ 1 ರಂತರ ದೊಳಗಿಹನು ಎಂದು ನಿನ್ನಾ ನಂತ ರೂಪಗಳನ್ನು ಭಜಿಸುವ ಗಂತು ಜ್ಞಾನವನ್ನು ನೀಡುತ ಜನ ರಂತರದಲಿ ನೀನು ನಿಂತು ಪಾಲಿಸಿ ಜೀವರಂತೆ ಗತಿಯನಿತ್ತು ಕಂತುºರಾದ್ಯರ ಸಂತತಿ ವಂದ್ಯನೆ 2 ಸೀತಾರಾಮನ ಪಾದವಾ ಸೇವಿಸಿ ನಿತ್ಯ ಪಾತಕಾಂಬುಧಿಗೆ ದಾವಾನಂತೆ ಜಗದಿ ಈ ತೆರದಲಿ ಮೆರೆವಾನೆಂದು ಈಗ ಸೋತು ನಾ ಬಂದೆ ದೇವಾ ನೀನೇ ಎನ್ನ ಮಾತು ಲಾಲಿಸೊ ದ್ಯುಧವಾ ಮಾತರಿಶ್ವ ನಿಜ ದೂತಾನು ನಾನಯ್ಯ ನೀತ ಗುರು ಜಗನ್ನಾಥವಿಠಲಪ್ರಿಯ 3
--------------
ಗುರುಜಗನ್ನಾಥದಾಸರು