ಒಟ್ಟು 8 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನೆ ದೊರೆವುದೇನೋ ಸುಖ ನಾನಾಜನ್ಮದ ಪುಣ್ಯವಿಲ್ಲದೆ ಪ ಮೃಷ್ಟಾನ್ನವುಂಡು ಮೆರೆವುದೀಗ ಕೊಟ್ಟು ಅನ್ನ ಹುಟ್ಟಿದವಗಿಲ್ಲದೆ ಇಟ್ಟುತೊಟ್ಟು ಶೃಂಗಾರದಿಂದ ಸೃಷ್ಟಿಯಿಂದ್ವಸ್ತ್ರ ವಡವೆಗಳು ಕೊಟ್ಟು ಹುಟ್ಟಿದ ಪುಣ್ಯರಿಗಲ್ಲದೆ 1 ಕೋಮಲಯುವತಿ ದೊರೆವುದೀಗ ಭೂಮಿಯೋಳ್ಕನ್ಯಾದಾನಿಗಲ್ಲದೆ ಭೂಮಿಸೀಮೆಗಳಿಸಿ ಬಲು ಕ್ಷೇಮದಿಂದ ಬಾಳ್ವುದೀಗ ಭೂಮಿಸೀಮೆ ದಾನಗೈದ ಆ ಮಹಾಪುಣ್ಯವಂತರಿಗಲ್ಲದೆ 2 ನಿಖಿಲಸುಖದಿ ಮೆರೆವುದೀಗ ಭಕುತಜನರಪ್ಪ ತೃಪ್ತರಿಗಲ್ಲದೆ ಅಖಿಲಪದಕೆ ಅಧಿಕವೆನಿಪ ಮುಕುತಿಪದವಿ ಪಡೆವುದಮಿತ ಮುಕುತಿದಾಯಕ ಶ್ರೀರಾಮಪಾದ ಭಕುತಾನುಭಕುತರಿಗಲ್ಲದೆ 3
--------------
ರಾಮದಾಸರು
ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ ಘನ್ನ ಭೂ ಭಾರನವ ಭವನಮಿತ್ರ ಪ ಬನ್ನಬಟ್ಟೆನೊ ಬಹಳ ಬಲುಹೀನ ವೃತ್ತಿಯಲಿ ಮಾನ್ಯರಲಿ ತಲೆಯೆತ್ತಿ ಇರುವಂತೆ ಎಂದಿಡುವಿ ಅ.ಪ. ಏನು ಕೊಟ್ಟರು ಕೊಡು ದಾನವಂತಕ ಎನ್ನ ಜ್ಞಾನದಲಿ ನೀನಿತ್ಯ ನೆಲಸಿ ನಲಿಯೊ ಧೇನುವತ್ಸದ ತೆರದಿ ನೀನೆನಗೆ ಹಿತತೋರು ನಾನೊಲ್ಲೆ ಸುರಲೋಕ ನಿನ್ನೊಲಿಮೆ ಇಲ್ಲದಿರೆ 1 ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ ಸುರಿ ನಿನ್ನ ಕರುಣರಸ ಪ್ರಾಣನಾಥ ಸರ್ವೇಶ ನೀನೆಂದು ಪರತಂತ್ರ ನಾ ಸತತ ಶರಣನ್ನ ದಣಿಸುವದು ಘನವೇನೊ ಹರಿಯೆ 2 ಕೋಟಿಕಾಲ ನರಕವಾಸಿಯಾದರು ಎನಗೆ ನೀಟುಗತಿ ದೊರೆವುದೇ ನೀನೊಲಿಯದಿರಲು ಸಾಟಿಯಿಲ್ಲದ ದೈವ ಜಯೇಶವಿಠಲ ನಾಟಿ ಹಿರಿಯರ ಕರುಣ ನೀನಾಗಿ ಕೃಪೆಮಾಡು 3
--------------
ಜಯೇಶವಿಠಲ
ಬೇಡಿದವರಿಗೆ ದೊರೆವುದೇನೆಲೊ ಸಜ್ಜನರ ಸಂಗ ಬೇಡಿದವರಿಗೆ ದೊರೆವುದೇನೆಲೊ ಪ ಬೇಡಿದವರಿಗೆ ದೊರೆವುದೇನೆಲೊ ಗಾಢಮಹಿಮನ ಭಕ್ತರಾವಾಸ ಸುಕೃತ ಫಲವು ಕೂಡಿಬಂದ ಕೋವಿದರಿಗಲ್ಲದೆ ಅ.ಪ ದೃಢಕರಡಿಯಿಟ್ಟ ಭುವನವೆ ಕ್ಷೇತ್ರ ದೃಢಕ ಜನರಡಿಯೇ ಸುಯಾತ್ರಾ ಸಿದ್ಧ್ದಾಂತ ಮಾತಿದು ದೃಢಕರಾಡಿದ ಮಾತೆ ನಿಜಮಂತ್ರ ಇದೆ ಮೂಲಶಾಸ್ತ್ರ ದೃಢಕರು ನಿಂತ ಸ್ಥಳವೆ ಬದರಿ ದೃಢಕರು ಕೂತಸ್ಥಾನ ಮಧುರೆ ದೃಢಕರೊಟನಾಟ ಲಭ್ಯವೆಂದರೆ ಪಡೆದ ಪುಣ್ಯ ಮಹಭಾಗ್ಯಗಲ್ಲದೆ 1 ಭಕ್ತ ಜನಮಿಂದದೆ ತೀರ್ಥವು ನಿಖಿಲರರಿವುದೆ ಭಕ್ತ ಜನರುಂಡಸ್ಥಳ ಸಿರಿಯಾವಾಸವು ದೊರೆಯದಾರಿಗೆ ಭಕ್ತ ದರ್ಶನ ಪರಮ ಮಂಗಲವೋ ಶುಭಕೆ ಶುಭಕರವು ಭಕ್ತಜನರಿಹ್ಯ ಸಭೆಯೆ ಹರಿಸಭೆ ಭಕ್ತರೊಪ್ಪಿಗೆ ಹರಿಯ ಒಪ್ಪಿಗೆ ಮೃತ್ಯುದೂರ ಮಾಳ್ಪ ಸರ್ವೋತ್ತಮನ ಭಕ್ತರ ಪ್ರೇಮದೊಲುಮೆ 2 ದಾಸರ್ವಾಸವೆ ಕಾಶಿಕೇಂದ್ರವು ಸತ್ಯ ಸತ್ಯವಿದು ದಾಸರಿರುವುದೆ ಪರಮ ವೈಕುಂಠವು ಮತ್ರ್ಯರರಿವುದೆ ದಾಸಗಿತ್ತದ್ದು ಹರಿಗೆ ಅರ್ಪಣವು ಪರಮ ಸುಖಕರವು ದಾಸರೊರ್ಣವು ತೀರದಾರಿಗೆ ಶ್ರೀಶ ಶ್ರೀರಾಮನಡಿಯಕಮಲ ದಾಸರಿಜನರಡಿ ಪಿಡಿದು ಸುಸಹ ವಾಸದಿರುವುದೆ ಮುಕ್ತಿಸಂಪದ3
--------------
ರಾಮದಾಸರು
ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1 ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ ಮೂರ್ಛೆಗೈದು ಮೃತನಾದನು 2 ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ ಕೊಡುವೆನೆಂದು ನುಡಿದಾನು 3 ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ ಕನ್ನಿಕೆಗೆ ಮಾಂಗಲ್ಯ ಬಂಧನ ಮಾಡಿಹೋದಾರು 4 ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5 ಒಂದು ದಿನ ಸುಂದರಿ ಬಂದವರ ಕೇಳಿದಳು ಇಂದು ದಿವಸಿ ವ್ರತವು ಅಂದರು ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು ಬಂಧು ಬಳಗೆ ಇಲ್ಲದಲೆ ಮಾಡುವುದೇನು 6 ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು ಹರತಾ ಭಂಡಾರ ಒಡೆದು ಹರುಷಗರೆದನು ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು ಸತತ ನಾರಸಿಂಹನ ಸ್ಮರಣೆ ಮಾಡಿದರು 7
--------------
ಓರಬಾಯಿ ಲಕ್ಷ್ಮೀದೇವಮ್ಮ
ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು ಕೊಡದನಕ ದೊರೆವುದೇನು ಪ.ಹರಿಕೊಡದೆ ಅಜಭವರಿಗರಸುತನವೆಲ್ಲಿಯದುಹರಿಕೊಡದೆ ಸಿರಿಸಂಪದೆರವು ತನಗೆಹರಿಕೊಡದೆ ಸಕಳ ಜೀವರಿಗಶನ ದುರ್ಲಭವುಹರಿಕೊಡುವನಿರಲು ಅನ್ಯರಿಗೆ ಸ್ವಾತಂತ್ರ್ಯಿಲ್ಲ 1ಹರಿಯೆ ಜಡಚೇತನರ ಹೊರೆದುದ್ಭವಿಸಿ ಅಳಿವಹರಿಯಾವ ಕಾರ್ಯಕ್ಕೆ ಬೆರೆದು ಬರುವಹರಿಅಂತರ್ಬಹಿರದೊಳು ಭರಿತನಾಗಿಹ ತತ್ವಹರಿಯಿಲ್ಲದಾವ ತಾಣಿಲ್ಲ ನಂಬು ಹರಿಯ 2ಹರಿನುಡಿಯದಾರಿಗುತ್ತರಗುಡಲು ಬಲವಿಲ್ಲಹರಿನುಡಿಯನಾಲಿಪರು ಸಿರಿದಿವಿಜರುಹರಿನುಡಿಯೆ ಗತಿಮತಿಯು ಹರಿಯೆನ್ನ ದಾತಾರಹರಿಪ್ರಸನ್ವೆಂಕಟಪ ನಿರುತ ಬಿಡನೆನ್ನ3
--------------
ಪ್ರಸನ್ನವೆಂಕಟದಾಸರು