ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಗುರುವು ಬಂದ ನಮ್ಮ ಸಿರಿಯು ಬಂದಹರಿ ಹರ ಬ್ರಹ್ಮರ ದೊರೆರಾಯ ಬಂದ ಪ ಸರ್ವರೂಪಕ ಬಂದಸರ್ವಾಂತರ್ಯಾಮಿ ಬಂದಸರ್ವ ಚೇತನ ಬಂದಸರ್ವಸಾಕ್ಷಿ ಬಂದ 1 ಶರಧಿ ಬಂದಸುಖರೂಪ ಬಂದ 2 ಅಂತರಾತ್ಮಕ ಬಂದಅವ್ಯಕ್ತಾಚಲ ಬಂದಚಿಂತಾಮಣಿಯೆ ಬಂದಚಿದಾನಂದ ಬಂದ 3
--------------
ಚಿದಾನಂದ ಅವಧೂತರು
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
--------------
ಗೋವಿಂದದಾಸ