ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನಿತೆಂದು ಶಾಸ್ತ್ರ ಪೇಳುವವು ಪ ಪುನಹ ಪುನಹ ಭಗವತ್ಪ್ರಾಪ್ತಿ ಬೇಕೆಂಬುವರಿಗೆ ಅ.ಪ. ಅನುಬಂಧಿಗಳಲಿ ಮಮತೆಯನೆ ಬಿಡು ವಿಷಯ ವಾ ಸನೆಯನೀಡಾಡು ಸುಜ್ಞಾನ ಭಕ್ತಿಯ ಬೇಡು ಮನದಲ್ಲಿ ಹರಿಯ ಮೂರ್ತಿಯನೆ ನೆರೆ ನೋಡು ಸುಜ್ಞ ರನು ಕೊಂಡಾಡು ಅಜ್ಞಾನಿಗಳ ಸಹವಾಸ ಸುಡು ವನಜನಾಭನ ಪೂಜೆ ಮಾಡು ಪ್ರತಿ ಕ್ಷಣ ಬಿಡದೆ ಭಗವದ್ಗುಣಗಳ ಕೊಂಡಾಡು 1 ಪರಮಾಣು ಮೊದಲ್ಗೊಂಡು ವ್ಯಕ್ತ ತತ್ತ್ವದೊಳ ಹೊರಗೆ ವ್ಯಾಪಕನಾಗಿ ತದ್ರೂಪ ನಾಮದಿಂ ಕರೆಸುತಲಿ ತದ್ವಿಕಾರಗಳಿಲ್ಲದಲೆ ಸೃಷ್ಟಿ ಪರಿಪಾಲನೆ ಲಯಗಳನೆ ಮಾಡಿ ಮೋದಿಸುತಾ ಪರಮಾತ್ಮನೊಬ್ಬನಿಹನೆಂದು ಹರಿಗೆ ಮರೆಯದಲೆ ಮಹಿಮೆಗಳ ಪೊಗುಳುತಿರು ಮನುಜಾ 2 ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು ತಿರಿಯ ಕ್ಪುಂಡ್ರಗಳ ನಿಂದಿಸಬೇಕು ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು ಗುರು ಹಿರಿಯರ ವಗುಣಗಳೆಣಿಸದಿರ ಬೇಕು ಮ ತ್ಸರವ ಬಿಡಬೇಕು ಭಕ್ತರಲಿ ಹೀಗೆ ಒರೆದೊರೆದು ಪೇಳುವರು ಬುಧರು ನಿತ್ಯದಲಿ 3 ನಿತ್ಯ ನೈಮಿತ್ತಿಕ ಸುಕರ್ಮ ಮಾಡಲು ಬೇಕು ಕೃತ್ಯವಲ್ಲದೆ ಲೋಕವಾರ್ತೆಗಳ ಬಿಡಬೇಕು ಚಿತ್ತದಲಿ ಹರಿಪಾದ ಚಿಂತಿಸುತಲಿರಬೇಕು ವಿತ್ತದೇಹಾಗಾರ ಭಗವಂತನದೆಂದು ದೇ ಪರಿಯಂತ ಮಾಳ್ಪ ಕರ್ಮ ಸತ್ಯಸಂಕಲ್ಪಕಿವು ಪೂಜೆ ಎನಬೇಕು 4 ಸೀತೋಷ್ಣ ಸುಖ ದುಃಖ ಮಾನಾಪಮಾನ ಜಯ ಭೀತಿ ನಿರ್ಭೀತಿ ಅಪಜಯ ಜ್ವರಾಪಸ್ಮಾರ ಭೂತ ಬಾಲ ಗ್ರಹ ಮೃಗಸರ್ಪ ನೃಪ ಚೋರ ಯಾತನೆಗೆ ಭಯಪಡದೆ ಸರ್ವತ್ರದಲಿ ಜಗ ನ್ನಾಥವಿಠ್ಠಲನ ಸ್ಮರಿಸುತಿರು ಮಹಾ ಪಾತಕವ ಪರಿಹರಿಸಿ ಪೊರೆವ ದಯದಿಂದಾ 5
--------------
ಜಗನ್ನಾಥದಾಸರು
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ. ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1 ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2 ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3 ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4 ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5 ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6 ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7 ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8 ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9
--------------
ವಾದಿರಾಜ
ನೋಡು ಎನ್ನೊಳು ಮಾಡು ದಯವನು ಬೇಡಿಕೊಂಬುವೆ ಮುರಹರ ಪ ರೂಢಿಯೊಳು ಎನ್ನ ಖೋಡಿಮಾಡದೆ ಕಾ ಪಾಡು ಬೇಗ ಭಕ್ತಹಿತಕರ ಅ.ಪ ಪಂಕಜಾಕ್ಷನೆ ಕಿಂಕರನ ಈ ಮಂಕುಗುಣಗಳ ಬಿಡಿಸಯ್ಯ ಶಂಖಸುರಹರ ಶಂಕೆಯಾತಕೆ ಕಿಂಕರನು ನಾಂ ಪಿಡಿ ಕೈಯ 1 ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ ತಂದೆ ನಿನ್ಹೊರತ್ಯಾರ್ಯಾರು ಮಂದಮತಿಯನು ಛಿಂದಿಸಿ ಬೇಗ ಕಂದನನು ಪೊರೆ ದಯಾಕರ 2 ತಂದೆ ನೀನೆ ತಾಯಿ ನೀನೆ ಬಂಧು ನೀನೆ ಶ್ರೀಕರ ಬಂದ ದುರಿತದಿಂದ ಕಾಯೊ ಸಿಂಧು ನೀನೆ ದೇವರೊ 3 ಉರಗನ ಬಾಯಲಿರುವ ಮಂಡೂಕ ಸ್ಮರಿಸಿ ನೋಣಕ್ಹವಣಿಸುವ ತೆರದಿ ಶರಧಿಸಂಸಾರ ಸ್ಥಿರವೆಂದರಿಯದೆ ಮರವಿನಿಂ ಬಿದ್ದೆ ದುರಿತದಿ 4 ಕಾಯಜೆಂಬುವ ಮಾಯಕೋರನು ಪಾಯಕೆ ಒಳಪಟ್ಟೆನು ತೋಯಜಾಕ್ಷೇರ ಮಾಯಮೋಹದಿ ಕಾಯದಂದಿಸಿ ಕೆಟ್ಟೆನು 5 ಕುಂಭಿನಿಯೊಳೆನಗಿಂಬುಗೊಟ್ಟು ಬಲು ನಂಬಿದವರಾಸ್ತ್ಯಳಿದೆನೊ ಜಂಬಬಡಿಯುತ ಶುಂಭಗುಣಗಳಿ ಗಿಂಬುಗೊಟ್ಟು ದಿನಗಳೆದೆನೊ 6 ಪ್ರಾಣತಗ್ಗಿಸಿ ದೀನತನದಲಿ ದೈನ್ಯಬಡುವರಿಗ್ಹಾನಿಮಾಡಿದೆ ದಾನಕೊಡುವರ ದಾನಕಡ್ಡಾಗಿ ನಾನಾ ದುರ್ಬೋಧವುಸುರಿದೆ 7 ಜಾನಕೀಶನ ಧ್ಯಾನಯುತರಿಗೆ ಹೀನ ಹಾಸ್ಯವ ಗೈದೆನೊ ಏನು ತಿಳಿಯದೆ ಗಾಣಕೆ ಬಿದ್ದ ಮೀನಿನಂತೆ ನಾನಾದೆನೊ 8 ಶ್ವಾನನಂದದಿ ಖೂನವಿಲ್ಲದೆ ನಾನಾಪಾಪವ ಗೈದೆನೊ ಮಾನವಜನುಮೇನು ಶ್ರೇಷ್ಠಿದ ಜ್ಞಾನದೋಳ್ಹೊತ್ತುಗಳೆದೆನೊ9 ಮಂಗನಂದದಿ ಹಂಗದೊರೆದು ಅಂಗಲಾಚಿ ಪರರನ್ನು ಬೇಡಿದೆ ಅಂಗಜಪಿತ ಮಂಗಳಾಂಗ ಶ್ರೀ ರಂಗ ನಿಮ್ಮ ಮಹಿಮ್ಯರಿಯದೆ 10 ದಾಸ ಮಾಡಿದ ದೋಷ ಮನ್ನಿಸಿ ಪೋಷಿಸು ಶ್ರೀರಾಮನೆ ಶ್ರೀಶ ಶ್ರೀನಿವಾಸ ಎನ್ನಂತ ರಾಸೆ ಪೂರೈಸು ಬೇಗನೆ 11
--------------
ರಾಮದಾಸರು
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆಪರಮಾನಿನಿಯ ಸಂಗ ನರಕದೊಳು ಬಲುಭಂಗಪ.ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮತ್ತೊಬ್ಬಳ ಕುಚಕೆ ಕಮಲವ ಹೋಲಿಸಿಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕತಬ್ಬಿಬ್ಬುಗೊಳುತ ನಿರಯಂಗಳುಂಬೆ 1ಇಂದುಮುಖಿಯಳ ಸಂಗ ಎನಗಿಂದು ಕೈಗೂಡಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನಸಂದುಗಳ ಕಡಿದು ವೈತರಣಿ ಸಲಿಲದಿ ದೇಹಹೊಂದಿಸುವರುಂಟು ಕಾಲನ ಕುಂಟಣಿಗರು 2ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರವಕ್ರನೋಟದಿ ಹಲವು ಸನ್ನೆಯಿಂದತರ್ಕೈಸಬೇಕೆಂಬ ಲಂಪಟದಿ ತಪ್ತಾದಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ 3ಹರಿದಾಸರಾಚಾರ ಕೇಳಲಸಿ ಪಳಿದೊರೆದುಒರಟು ಮಾತಿನ ಸರಕಲಾಯುಗಳಿದೆವಿರತಿಜ್ಞಾನಾನ್ವಿತರ ವೆರಸದಂಧಕನಾದೆತರಣಿಯೊಳು ಹೊಂಬುಳವು ಗರುವಿಸಿದ ತೆರದಿ 4ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊಳಂಬುಜಾಕ್ಷನ ದಾಸನಿಂದೆ ಮಾಡಸಲ್ಲಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತುನಂಬು ಪ್ರಸನ್ವೆಂಕಟೇಶನಂಘ್ರಿಯ 5
--------------
ಪ್ರಸನ್ನವೆಂಕಟದಾಸರು
ಪೇಳಲಳವೆ ನಿನ್ನ ಮಹಿಮೆಯ-ಶ್ರೀರಂಗಧಾಮ|ಪೇಳಲಳವೆ ನಿನ್ನ ಮಹಿಮೆಯ ಪನೀಲಮೇಘಶ್ಯಾಮ ನಿನ್ನ |ಬಾಲಲೀಲೆಯಾಟವ ಅ.ಪವಿಷದ ಮೊಲೆಯ ಪೂತನಿಯ |ಅಸುವ ಹೀರಿದ ಶೂರನಾದೆ |||ಉಸಿರಲಳವೆ ನಿನ್ನ ಮಹಿಮೆ |ಅಮ್ಮಮ್ಮಮ್ಮಮ್ಮಮ್ಮ ||ಕೆಸರ ತಿನಬೇಡೆನುತ ತಾಯಿ |ಶಿಶುವಿನ ವದನವ ನೋಡಿದಳಾಗ |ದಶಚತುರ್ಭುವನವ ತೋರಿದ ಬಾಯೊಳ |ಗಲ್ಲಲ್ಲಲಲ್ಲಲ್ಲಲ್ಲೇ 1ಬಾಲಲೀಲೆಯ ಬಂಡಿ |ಕಾಲಿಲೊದ್ದು ಶಕಟಾಸುರನ ||ಮೂಲನಾಶ ಮಾಡಿದೆ ನೀ |ನಬ್ಬಬ್ಬಬ್ಬಬ್ಬಬ್ಬಬ್ಬ ||ತಾಳಮರದ ನಡುವೆಒರಳ|ಕಾಲಿಗೆ ಕಟ್ಟೆಳೆಯುತಿರಲು |ಬಾಲ ಸತ್ತನೆಂದುಗೋಪಿಅತ್ತ-|ಳಯ್ಯಯ್ಯಯ್ಯಯ್ಯಯ್ಯಯ್ಯೊ 2ಸಣ್ಣವನಿವನಲ್ಲ ನಮ್ಮ |ಬೆಣ್ಣೆ ಕದ್ದು ಗೊಲ್ಲರ ಮನೆಯ |ಹೆಣ್ಣು ಮಕ್ಕಳನು ಹಿಡಿದ ಕಳ್ಳ |ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||ನಿನ್ನಾಣೆಯಿಲ್ಲೆಂಬ ರಂಗನ |ಬಿನ್ನಾಣಕೆ ನಕ್ಕವರನು ಬಯ್ಯುತ |ಎನ್ನ ಕಂದ ಹುಸಿಯನಾಡ |ನೆಂದೆಂದೆಂದೆಂದೆಂದು 3ನಾರಿಯರೆಲ್ಲ ಬತ್ತಲೆಯಾಗಿ |ನೀರಾಟವನಾಡುತಿರಲು |ಸೀರೆಗಳೊಯ್ದು ಮರವನೇರಿದ |ನತ್ತತ್ತತ್ತತ್ತತ್ತತ್ತ ||ವಾರಿಜಮುಖಿಯರು ಲಜ್ಜೆಯ ದೊರೆದು |ಸೀರೆಗಳನು ಬೇಡಲವರಮೋರೆ ನೋಡಿ ರಂಗ ನಕ್ಕ |ಅಬ್ಬಬ್ಬಬ್ಬಬ್ಬಬ್ಬಬ್ಬ 4ಕಾಡು ಕಿಚ್ಚು ಮುಸುಕಿ ಗೋವ-|ವಾಡಿಯು ಬೆಂದದ್ದು ನೋಡಿ |ಈಡಿಲ್ಲದ ಉರಿಯ ತೀಡಿದ |ಅತ್ತತ್ತತ್ತತ್ತತ್ತತ್ತ ||ಬೇಡಿದ ವರಗಳನೀವ |ಪುರಂದರವಿಠಲನ ಲೀಲೆಯ |ರೂಢಿಯೊಳೀಡನ ಸಮರು ಯಾರುಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ 5
--------------
ಪುರಂದರದಾಸರು
ಹರಿಯೆ ಅಚ್ಯುತಾನಂತ ಗೋವಿಂದದುರುಳಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಪಡೆದು ಅವನ ಸತಿಯ ಸುರಪತಿಯು ಎಳೆತರಲುಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವದುಷ್ಟಮರ್ದನ ದೂರಾತಿದೂರ ಜಗ-ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿಅನ್ಯರಲ್ಲವು ನಾವು ಹಿತವರೆ ನಿನಗಿನ್ನುಭಿನ್ನ ದೇಹ್ಯವುನೋಡುಮುನ್ನಿಂದಲಿ ಇನ್ನುಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆಹರಿಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಆವ ವಿಪರೀತವನೆ ಅಲ್ಲದ್ದು ನುಡಿದನುಏಸುಬಗೆಯಿಂದ ಉಪಾಯದಲಿ ಕೇಳಿದರುಈಸು ದಿನ ಇವ ಎನ್ನ ಸುತನು ಎಂದರಿದಿದ್ದೆನಾನಾ ಬಗೆಯಿಂದ ವಧೆಗೇನೇನು ಉಪಾಯಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಕೆಡಿಸದೆ ತಾನಿತ್ತವರಸತ್ಯವೆಂದೆನಿಸಿಪರಿಪರಿಯಿಂದ ಸಿರಿದೇವಿಗೆಇದೆ ಸಮಯವೆಂದುಸಿರಿಅಜಭವಾದಿಗಳೆಲ್ಲಪರಿಪರಿಯಿಂದಸುರ ಋಷಿಪಿತೃ ಗಂಧರ್ವಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಆಗ ಪ್ರಹಲ್ಲಾದಗೆ ಕರಕಮಲಗಳಿಂದಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಜಯ ಜಯತು ಪ್ರಹ್ಲಾದವರದ ಜಗದಾಧಾರ
--------------
ಗೋಪಾಲದಾಸರು