ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಪೇಳಲಿ ಹರಿಯ ವ್ಯಾಪಾರ ಮಹಿಮೆ ಪ ಆನಂದ ಆಶ್ಚರ್ಯ ಆಗುವುದು ಎನಗೆ ಅ.ಪ. ಮರಳಿಗೋಸುಗ ಪೋಗೆ ಮಾಣಿಕ್ಯ ದೊರೆಯಿತು ಅಮೃತ ಕಳಶವಾಯ್ತು ಇರುಳು ಕತ್ತಲೆಯೊಳಗೆ ಮಣಿದೀಪ ಮಿರುಗಿತು ಕಮಲ ಮಾಲಿಕೆಯಾಯ್ತು 1 ಪಾಪ ಕಾರ್ಯವ ಕೊಳಲು ಪುಣ್ಯ ಸಾಧನವೀವ ಪಾಪ ಸಾಧನವೀವ ಪುಣ್ಯ ಕಾರ್ಯದಲಿ ಪಾಪ ಬೀಜದ ಪುಣ್ಯ ಪುಣ್ಯ ಬೀಜದ ಪಾಪ ಶ್ರೀಪತಿಯ ವ್ಯಾಪಾರ ಈ ಪರಿಯಲಿಹುದು2 ಮೃಗಯಾ ವಿಹಾರದಲಿ ಮನವಿಟ್ಟು ನಾ ಬರಲು ಮೃಗಲಾಂಛನವನ ಕಳೆಯ ಮೀರುವಂಥ ಮಿಗೆ ತೇಜದೀ ಮಗುವು ಎನಗೆ ದೊರೆತುದು ನರ ಮೃಗರೂಪಿ ಕರಿಗಿರೀಶನ ಕರುಣವಿಲ್ಲದಲೆ 3
--------------
ವರಾವಾಣಿರಾಮರಾಯದಾಸರು
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಸುಗುಣಗಣಾನ್ವಿತೆಯೇ ಪ. ಸಖಿಯೇ ಸರೋಜಮುಖಿಯೇ ಅ.ಪ. ಶಶಿಮುಖಿ ನೀ ಬಾ ಸುಮಕೋಮಲೆ ನೀ ಬಾ ಬಾ ದಶರಥ ಸುತನ ಮ ಹಿಮೆಯಿದೆಂದು ಪೊಗಳುವ ಬಳಿಸಂದು 1 ಚಿನ್ನದ ಕೋಲಂ ರನ್ನದ ಕೋಲಂ ನನ್ನಿಯಿಂದಲಿ ಪಿಡಿದು ಚೆನ್ನಿಗನೋವಿಂದು ಚೆನ್ನಿಗ ನೊಲವಿಂ[ನ್ನೊ]ಳಗಾಯ್ತೆಂದೆನ್ನುವ ನಲಿನಲಿದು2 ಮೆರೆವಳು ಮೋಹಿನಿಯೋಲ್ ದೊರೆತುದು ನಮಗೀ ಶರದಾಗಮ ಮಿಂದರರೇ ಸುಗ್ಗಿಯ ಸಮಯಂ3
--------------
ನಂಜನಗೂಡು ತಿರುಮಲಾಂಬಾ