ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಂತಾಮಣಿ ಶ್ರೀ ರುಕ್ಮಿಣಿ ಪ ವದನ ಸುಶೀಲೆ ಮೃಗಮದ ಫಾಲೆ ಸದಯೆ ನೀ ಭಕ್ತರ ಮುದದಿ ಪಾಲಿಸು ಇನ್ನು 1 ----------------------- ----------------------- 2 ಜಗದ ಜನನಿಯೆ ನೀ ಬಗೆ ಬಗೆಯಿಂದಲಿ ನಗೆ ಮುಖ ಪ್ರಾಣನಾಥ ವಿಠಲನ ಬದಿಯೊಳಿಪ್ಪೆ 3 (ಸೂಚನೆ:ಈ ಪದದ ಎರಡನೇ ನುಡಿ ದೊರೆತಿಲ್ಲ _ಸಂ.)
--------------
ಬಾಗೇಪಲ್ಲಿ ಶೇಷದಾಸರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಮಂಗಲಾ ಸ್ವಸಿದ್ದ ಸಿದ್ಧಗೆ ಮಂಗಲಾ ಸ್ವಶುದ್ಧ ಶುದ್ಧಗೆ |ಮಂಗಲಾ ಸ್ವಬುದ್ಧ ಬುದ್ಧಗೆ ಸದ್ಗುರೇಂದ್ರನಿಗೆಜಯ ಮಂಗಲಾಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆದಿಮಧ್ಯಾವಸಾನವಿಲ್ಲದೆ ನಾದ ಬಿಂದು ಕಳಾ ವಿಹೀನಗೆ |ವೇದ ವೇದಾಂತದ ವಿಚಾರವ ತಿಳಿದ ನಿಶ್ಚಲಗೆ |ಸಾಧು ಸಂತ ಮಹಾನುಭವಿಗಳು ಸಾಧಿಸುವವರಬೋಧ ಬೋಧಗೆ | ವಾದ ಮನಬುದ್ಧ್ಯಾದಿ ಉದಯಾದಿಕವ ಲಕ್ಷಿಪಗೆ1ವಿಶ್ವತೋ ಮುಖ ವಿಶ್ವನೇತ್ರನು ವಿಶ್ವಪಾಣಿಪಾದಶೀರಿಷ | ವಿಶ್ವದೊಳಹೊರಗೇಕ |ಮಯನಾ ಸೂತ್ರನು ಮಣಿಯಂತೆ | ವಿಶ್ವವನ್ನುದ್ಧರಿಸ-ಲೋಸುಗ ವಿಶ್ವದೊಳಗವತರಿಸಿ ಸಾಕ್ಷಾದೀಶ್ವರನುಕಲಿಯುಗದಿ ವಿಶ್ವಾಮಿತ್ರ ಗೋತ್ರದೊಳು2ಪರಮಪುರುಷನು ಸ್ವಪ್ರಕಾಶನು ನರಾಕೃತಿಗೆತಾ ಬಂದು ಶಿಂಧಾಪುರದಿ ಗುರುನಾಥನು-ದರದಿ ಕರಣಿಕನ್ವಯದಿ | ಸರಸ ಲೀಲಾ ನಟನೆನಟಿಸುತ ತೆರಳಿ ಭ್ರಮರಾಪುರಕೆ ಸದ್ಗುರುವರಕೃಪೆಯತಾ ಪಡೆದು ಜಗದೊಳು ಖ್ಯಾತಿ ಪಡೆದಂಗೆ3ಅಂತು ಇಂತೆನಬಾರದಾ ನಿಶ್ಚಿಂತ ರೂಪನು ಬಳಿಕ | ಸಂತಮಹಾಂತನು ಸ್ತುತಿಸಲಾತ್ಮ ಸುಬೋಧ ಬೋಧಿಯಲಿ ||ಅಂತರಂಗದ ಭ್ರಮೆಯನಳಿದೇಕಾಂತ ಭಾವಿಕ ಭಕ್ತರಿಗೆ ವಿ-ಶ್ರಾಂತವಾದ ಸ್ವ-ಪದದೊಳುದ್ಧರಿಸಿದಾತಂಗೆ4ಸ್ಪರ್ಶ ದರ್ಶನದಿಂದೆ ಝಗ ಝಗ ಧರಿಸುತಲಿ ನಾನಾ ವಿ-ಚಿತ್ರಾಚರಣವನು ಚರಿಸುತ್ತ ಸದ್ಗುರು ರಾಯ ಕಡೆಯಲ್ಲಿ,ಪರಮಹಂಸಾಶ್ರಮವ ಕೈಕೊಂಡಿನಿತುಕೆಲಕಾಲದಲಿ ಶಿಂಧಾಪುರದಿಸ್ವ-ಸ್ಥಾನ ದೊಳು ಸಹಜಸಮಾಧಿಸ್ಥಳದಲ್ಲಿ5ಶಾಲಿವಾಹನ ಶಕೆಯ ಶತಕತಿ ಮೇಲೆ ಐವತ್ತಾಗೆ ಮೂರನು |ಕಾಲು ದಕ್ಷಿಣ ಅಯನ ಸಂವತ್ಸರ ವಿರೋಧಿಕೃತು |ಕಾಳ ದ್ವಿತಿಯಾಮಾಸ ಆಶ್ವೀನ ಮೇಲೆ ಶಿವ ಬುಧವಾರಕರ್ಣವಿಶಾಲಿ ಗರ್ಜಾ ಭರಣೆ ಪ್ರಥಮಪ್ರಹರಸಮಯದೊಳು6ಆ ಸುದಿನದೊಳಗಾ ಮಹಾ ಸಂತೋಷ ಕಾಲದಿಸುರರುಪೂಮಳೆ ಸೂಸುತಿರೆ ಬ್ರಹ್ಮಾದಿಕರು ಸ್ವಸುಖದಿನಲಿದಾಡಿ |ಏಸುಕಾಲದಸುಕೃತಫಲವಿದು ವಸ್ತುಕಣ್ಣಲಿ ಕಂಡೆವೈ ಉಲ್ಲಾಸವೆನುತ ಸಮಸ್ತ ಸುರಜಯ ಘೋಷ ಮಾಡುತಲಿ7ನಿಜ ಪರಂಧಾಮಕ್ಕೆ ಸದ್ಗುರು ಬಿಜಯಮಾಡಿದನೆಂಬ ಮಹಾಶಯ | ಸುಜನರೆಲ್ಲರುಬಲ್ಲರಿದನು ಲೋಕಕಿದು ಸತ್ಯ || ತ್ರಿಜಗವೇಪುಸಿಯೆಂಬ ಮಹಾತ್ಮಗೆ ತ್ಯಜನವೆಲ್ಲಿ ಉದಾರ ಮಹಿಮಗೆ |ನಿಜವು ಜಲ ದೊರೆತಿಲ್ಲ ತೋರಲು ಕರಗಲೆರಡಹುದೇ8ನಿರಾಕಾರಾಕಾರ ವ್ಯಕ್ತಿಗೆಚರಣಒಂದೆ ಭೇದ ಮಿಥ್ಯೆಯು |ಚರಣಯುಗಕೆರಡುಂಟೆ ಈಪರಿಶರೀರ ಶರಣಂಗೆ ||ಹಿರಿದ ಕಿರಿದ ದರದರ ಹಂಗನು ಹರಿದು ಬಿಸುಟುವಶ್ರೀ ಮಹಾಶಂಕರಾನಂದ ಸರಸ್ವತೀ ಯತಿವರ್ಯ ಗುರುವರಗೆಜಯ ಜಯ ಮಂಗಲಾ ಜಯ ಜಯ ಮಂಗಲಾ9
--------------
ಜಕ್ಕಪ್ಪಯ್ಯನವರು