ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಧವಾಹನ ಮತವ ಪೊಂದವರು ಹಂದಿನಾಯಿಗಳಾಗಿ ಬಹುಕಾಲ ಕಳೆದಂತೆ ಪ ಇಳೆಯಾಣ್ಮನಿಲ್ಲದಾ ನಾಡು ಶೋಭಿಸದಂತೆ ಜಲವಿಲ್ಲದಾ ವಾಪಿ ಕೂಪದಂತೆ ನಳಿನ ಬಾಂಧವ ಮಿತ್ರನುದಯಿಸದ ದಿನದಂತೆ ಕುಲಹೀನನಾದವರ ಸಂಗಮಾಡಿದಂತೆ 1 ಕೋಣನಾ ಸಮ್ಮುಖದಿ ವೀಣೆ ಬಾರಿಸಿದಂತೆ ಜಾಣತನವಿಲ್ಲದಾಮಾತ್ಯನಂತೆ ವಾನರನ ಕೈಯಲ್ಲಿ ಮಾಣಿಕವ ಕೊಟ್ಟಂತೆ 2 ಶಾಮಸುಂದರನಾಮ ವರ್ಣಿಸದÀ ಕವಿಯಂತೆ ಪಾಮರಗೆ ಪೌರಾಣ ಪೇಳಿದಂತೆ ಕಾಮಾದಿಗುಣ ಬಿಡದೆ ಸನ್ಯಾಸಿಯಾದಂತೆ ಕೋಮಲಾಂಗದ ಸತಿಗೆ ಕ್ಲೀಬ ದೊರಕಿದಂತೆ 3
--------------
ಶಾಮಸುಂದರ ವಿಠಲ
ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಪ ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು1 ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು 2 ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು3 ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು ಜಪ ನಿಜಾಸನ ಧ್ಯಾನ ಜ್ಞಾನದಿಂದ ಸಪುತೆರಡು ಲೋಕದ ಒಡೆಯನ್ನ ಪಾದವ ಸಫಲವಾಗುವಂತೆ ಸಾಧನವ ಪೇಳಿದರು 4 ದಾರಿದ್ರ ದೋಷವ ಸೇರಿದ ಮಾನವನಿಗೆ ಆರು ಕೊಡದಲೆ ಧೇನು ದೊರಕಿದಂತೆ ಕಾರುಣ್ಯದಲಿ ಗುರು ಪುರಂದರದಾಸರು ಮೂರುತಿ ವಿಜಯವಿಠ್ಠಲನ್ನ ತೋರಿಸಿದರು 5
--------------
ವಿಜಯದಾಸ