ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ದಯವಂತ ನೀತನೊ | ಭಾರತಿ ಕಾಂತಅಂತರ್ಬಹಿ ವ್ಯಾಪ್ತನೋ ಪ ಸಂತತ ಶ್ವಾಸೋಚ್ಛ್ವಾಸ | ಮಂತ್ರ ತಾ ಜಪಿಸುತ ಶಾಂತೀಶ ಪಾದದಲ್ಲಿ | ಕ್ರಾಂತನಾಗಿಹ ನೀತ ಅ.ಪ. ಸೂರ್ಯ ಕೋಟಿ ಸಂಕಾಶದಿ ಪರಿಕಿಪ 1 ಪ್ರಾಣಾ - ಅಪಾನ - ಸಮಾನ | ಮತ್ತೆರಡು | ವ್ಯಾನಾ ಉದಾನರಲ್ಲಿರುತಾ ||ಪ್ರಾಣಿಗಳೊಳಗಿದ್ದು | ಜಾಣ ತನದಿ ತಾನುನಾನಾ ಕರ್ಮವ ಮುಖ್ಯ | ಪ್ರಾಣಾ ತಾನೇವೆ ಮಾಳ್ಪ ||ಪ್ರಾಣನ ಮಹಿಮಾನಂತವೆ | ವಾಣಿ ಮುಖಾದ್ಯರು ಎಣಿಸಲಸು ಅಳವೇ ನಾನಾ ರೂಪದಿ ಶ್ರೀನಿವಾಸ ಪದಧ್ಯಾನಾರಾಧಕ ನೆನಿಸುತ ಮೆರೆವಾ 2 ಸುರರಾ ಮೊರೆಯ ಕೇಳುತ | ಪರಿಸರ | ಹರಿಯ ಮತವ ಸಾರಿದ ||ಗುರು ಗೋವಿಂದ ವಿಠಲ | ಸರ್ವಾಧಿಕನು ಎಂದುಸರ್ವ ಶಾಸ್ತ್ರವ ನಿರ್ಣ | ಯವ ಮಾಡಿದ ನೀತ ||ಸರ್ವನಾಮಾಭಿಧ | ಸರ್ವ ನಿಯಾಮಕ | ಸರ್ವ ವ್ಯಾಪ್ತಹರಿ | ಕರುಣವಿಲ್ಲದಲೆಹರಿ ಚರಣಾಂಬುಜ | ದೊರಕದೆಂದನುತಲಿಸರ್ವಾಗಮಗಳ | ಸಾರವ ನ್ವೊರೆದ 3
--------------
ಗುರುಗೋವಿಂದವಿಠಲರು
ಕಂ||ಇಂದುವಿನ ವಾರದರ್ಚನೆಸಂದುದು ನಿನ್ನಡಿಗಳಿಂಗೆ ಗ್ರಹಗತಿ ಸೂಚಿಸೆಹಿಂದಣ ಕರ್ಮದ ಫಲವನುಸಂದೇಹವು ಬಿಡದು ಬಿಡಿಸು ವೆಂಕಟರಮಣನೆದುರಿತವನು ಪರಿಹರಿಸು ಸ್ಥಿರಭಕ್ತಿುರಿಸುತಿರುಪತಿಯ ಸ್ಥಿರವಾಸ ಶ್ರೀ ವೆಂಕಟೇಶ ಪಭಯವಾಗುತಿದೆ ದೇವ ಭಯಬಡಿಸುತಿರೆ ಕರ್ಮಭಯವಿಲ್ಲದಿರುವದೆಂತುಭಯನಿವಾರಕನಾಮ ಭಯತಿಮಿರ ರವಿಯಹುದುಭಯ ಹೋಗಿ ಸ್ಥಿರವಾಗಿ ಮನ ನಿಲ್ಲದಿಹುದು 1ಪರಮ ಯೋಗ್ಯನಿಗೊಂದು ಪಿರಿದಾದ ದುಃಖವಿದೆಪರಿಹರಿಸದಾವ ವಿಧದಿಕರಗಿ ಕಂದುತಲಿರಲು ಬಿರಿಸು ಕರ್ಮದ ಗತಿಯುನರಹರಿಯೆ ಮಹಿಮೆಯನು ನೆರೆ ತೋರಿಸೀಗ 2ಭಜನೆಯನು ಮಾಡಿದರೆ ಭಜನೆ ಕಾಮನೆಯಾಗಿನಿಜ ದೊರಕದೆಂಬ ಭಯವುಭಜಿಸಿ ಪಾಪವ ಕಳೆಯೆ ಭಜನೆಯದಕಾಗುವುದುಭಜನೆ ದೇಹದಿ ನಿಂದು ಭವ ತಾನು ನಿಲ್ಲುವುದು 3ಕರ್ಮಕೀ ಪರಿ ಬಲವು ಧರ್ಮವಾಗಿರೆ ಬಲಿತುಕರ್ಮವೇ ಬೆಳೆಯುತಿಹುದುಮರ್ಮವರಿತರು ಬಿಡದು ಹೆಮ್ಮೆಯದು ಬಲ್ಲವಿಕೆಧರ್ಮ ಬರುವದು ನಿನಗೆ ಕರ್ಮವಿದ ಕಡೆಗೊಳಿಸು 4ಇಚ್ಛೆುಂದಿದ ಸೃಜಿಪೆ ುಚ್ಛೆುಂ ಪರಿಹರಿಪೆಇಚ್ಛೆಯೇ ತೋರುತಿಹುದುಇಚ್ಛೈಸಿ ನಿನ್ನಡಿಯನಚ್ಯುತನೆ ಭಜಿಪರಿಗೆ 5ತುಚ್ಛವಾದೀ ಕರ್ಮ ಬಿಚ್ಚದಿಹುದೇನುಗರ್ವ ಬರುವದು ಜನಕೆ ಸರ್ವಗತನೆನಿಸಿದರೆನಿರ್ವಹಿಪೆನೆನಲು ಹೀಗೆಸರ್ವೇಶ ನೀನೊಲಿದು ಸರ್ವದೋಷವ ಕಳೆಯೆಗರ್ವವೆಡೆಗೊಳ್ಳದೈ ಪೂರ್ವದವನೆನಿಸು 6ಸೂತ್ರವನು ನಿರ್ಮಿಸಿದೆ ಸೂತ್ರ ನಿನ್ನಾಧೀನಸೂತ್ರಕ್ಕೆ ಶಕ್ತಿಯೆಂತುಯಾತಕೀ ಕರ್ಮಗತರನು ಮಾಡಿ ಜನರುಗಳ ಪಾತಕರು ಹೊರಗೆಂದು ಯಾತನೆಯ ಮಾಳ್ಪೆ 7ಮೃಷೆಯೆಂದ ಮಾತ್ರದಲಿ ಮೃಷೆಯಾಗದೀ ದುಃಖವಿಷಮವೇ ಬಳಲಿಸುವದುವಿಷವು ಮೊದಲಾಗಿ ತದ್ವಿಷಮ ಕರ್ಮದಿ ಹರವುವಿಷಮವಿದು ನಿನ್ನ ನಿಜದಲಿ ತೊಲಗದೆಂತು 8ಕರುಣಾಕರನೆ ನೀನು ಗುರುಮುಖದಿ ಕರ್ಮಗಳಬರಸೆಳೆದು ಬಯಲಮಾಡೆಮರೆವೆಯಾವರಣವಿರಬೇಕೆ ತಿರುಪತಿವಾಸವರದ ಶ್ರೀ ವಾಸುದೇವಾರ್ಯ ವೆಂಕಟರಮಣ 9ಓಂ ಪಾರ್ಥಸಾರಥಯೇ ನಮಃ
--------------
ತಿಮ್ಮಪ್ಪದಾಸರು
ಬರಿದೆ ಬಯಸಲು ಬರುವುದೇನೆಲೆ ಮರುಳು ಯೋಚನೆ ಬಿಡೆಲೆ ಮನಸೆ ಪ ಹರಿಯ ಬಳಿಯಲಿ ಪಡೆದಷ್ಟಲ್ಲದೆ ದೊರಕದೆಂದಿಗೆ ಬೇರೆ ತಾನು ಅ.ಪ ಶಾಂತಿತಾಳತಿಭ್ರಾಂತಿ ನೀಗಿ ಸಂತಜನ ಕೃಪಾಪಾತ್ರನಾಗಿ ಕರು ಣಾಂತರಂಗ ಸಿರಿಕಾಂತನಂಘ್ರಿಯ ಅಂತರಂಗದಿ ಭಜಿಸದೆ 1 ಶಮೆಯಗೂಡಿಹ್ಯ ಭ್ರಮೆಯನಳಿದು ಸುಮನದೋಳಿರ್ದು ಕ್ರಮದಿ ಅನುದಿನ ವಿಮಲ ಹರಿಕಥೆ ಶ್ರವಣದಿಂ ರಮಾರಮಣನಂಘ್ರಿಗೆ ನಮಿಸದೆ 2 ದಮೆಯ ಪಡೆದು ದಾಸನಾಗಿ ವಿಮಲನಾಮದ ಬಲವಗಳಿಸಿ ಅಮಿತಮಹಿಮ ಶ್ರೀರಾಮನಂಘ್ರಿ ಕಮಲವೊಲಿಸಿ ಭವತುಳಿಯದೆ 3
--------------
ರಾಮದಾಸರು
ರುದ್ರದೇವರು ಗಂಗಾಧರ ಮಹಾದೇವ ಶಂಭೊಶಂಕರ ಪ. ಗಂಗಾಧರಾ ನಿನ್ನ ನಂಬಿದ ಭಕ್ತರಘ ದ್ಹಂಬ ಕಡಿದು ಹರಿ ಇಂಬ ತೋರೆ ಜಗ ಕಂಬಾರಮಣ ನಿನ್ನ ಸಂಭ್ರಮದಿ ಸ್ತುತಿಪೆ ಅ.ಪ. ಚಾರು ಚರ್ಮಾಂಬರ ಧೀರ ಧರಿಶಿ ಮೆರೆವ ಚಾರು ಭೂತಗಣ ಸಂಚಾರ ಭಸ್ಮಧರಾ ಹಾರ ಕೇಯೂರ ಮಧ್ಯ ಥೋರ ಸರ್ಪ ಭೂಷ ನಿನ್ನ ಚಾರು ರೂಪ ವರ್ಣಿಸಲಳವೆ ಸಾರಸಾಕ್ಷ ಪಾರ್ವತಿಪ್ರಿಯ ಕರುಣಾಕರಸ ದೊರಕದೆ ಶ್ರೀರಮಣನು ಸಿಗ ಕೋರೆ ಹರಿಯ ನಿನ್ನ ಪಾದಪಂಕಜ ಹಾರೈಸುವೆ ಸಂಸಾರ ಶರಧಿಂ 1 ಪರಮಪುರುಷ ಶ್ರೀ ರಾಮನ ತಾರಕ ವರಮಂತ್ರ ಜಪಿಸುವ ವರ ಪಾರ್ವತಿಗರುಹಿ ಧರೆಯೊಳು ಮನುಜರ ವರಮನ ಪರಿಪರಿ ಬೇಡುವೆ ಹರಿಸ್ಮರಣೇಯ ಎನಗೀಯೋ ಕರುಣದಿ ಮಾರ್ಕಂಡೇಯಗೆ ವರವಿತ್ತು ಚಿರಂಜೀವತ್ವವ ಪರಿಪಾಲಿಸಿದಂತೆ ಪರಿಪರಿ ಭಕ್ತರ ಪೊರೆದಂತೆ ಪೊರೆಯೆನ್ನ ಪರಿ ಇತ್ತು 2 ಪಾಶಾಂಕುರಧರ ಪರಮಪವಿತ್ರನೆ ಈಶ ಭಕ್ತರ ಭವಪಾಶದಿಂದುದ್ಧರಿಪೆ ಶ್ರೀಶ ಶ್ರೀ ಶ್ರೀನಿವಾಸನಾಸಕ್ತಿಯಲಿ ಭಜಿಪ ದೋಷರಹಿತ ಮನ ಭಾಸಿ ಪಂಥದಿ ಈವೆ ಕಾಶೀಶ್ವರ ನಿನ್ನ ಲೇಸು ಭಕ್ತಿಲಿ ಸ್ತುತಿಪಾ ದಾಸ ಸಂಗದೊಳಿರಲು ಲೇಸು ಮನವ ಕೊಡು ವಾಸುಕಿಶಯನ ಸುತನ ಸುತನೆ ನಿನ್ನ ಏಸು ದಿನದಿ ಸ್ತುತಿಸುತ ಹಾರೈಸುವೆ 3
--------------
ಸರಸ್ವತಿ ಬಾಯಿ
ಶೇಷಮೂರುತಿ ಪೋಷಿಸೆನ್ನ ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ಪ ಶ್ವೇತದ್ವೀಪದ ಮಧ್ಯದಲ್ಲಿ ದೇವನರಸಿಯ ಕೂಡುತ್ತಲಿರಲು ಭಕ್ತಿಯಿಂದಲಿ ಕಂಗಳಿಂದ ಬಿಡದೆ ನೋಡುತಲಿಪ್ಪ ಸಮಯ1 ಮಗಳ ಲಜ್ಜೆಯ ಕಂಡು ಪಿತನು ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು ಮಗಳ ಮೇಲಿನ ಪ್ರೀತಿ ಪಿತಗೆ ಯೆಣಿಸಲಾಗದು ಲೋಕದೊಳಗೆ 2 ರಾಜೇಶ ಹಯಮುಖ ಹರಿಗೆ ಮಂಚವೆಂದರೆ ನೀನೆ ಖರೆಯು ರಾಜರಾಜರಿಗಿಂಥ ಮಂಚ ದೊರಕದೆಂದೆಂದಿಗೂ ದೇವ 3
--------------
ವಿಶ್ವೇಂದ್ರತೀರ್ಥ
ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ಪ ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ ತಿಳಿದ್ಹಾಗೆ ನಡೆವಳ ಅ.ಪ. ಉದಯದಲೆದ್ದತಿ ಸಜಮಲಳಾಗಿ ತಾ ಮುದದಿ ಪತಿಗೆ ನಮಿಸದವಳಿಗೆ ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ ಮಾಧವನ ಭಕ್ತಿಲಿ ಸ್ತುತಿಸದವಳಿಗೆ ಪದುಮನಾಭನೇ ಸರ್ವಪರನೆಂದು ಅರಿಯದೆ ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1 ಹರಿದಿನದಲಿ ಉಂಡು ಹರಿಯನ್ನದಲೇ ಊರ ತಿರುಗಿ ಹೊತ್ತು ಕಳೆವಳಿಗೆ ಸರಸದಿ ನರಹರಿ ನಾಮ ಸಂಕೀರ್ತನೇ ಇರುಳು ಜ್ಯಾಗರ ಮಾಡದವಳಿಗೆ ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ ಪತಿ ಹೊರಗ್ಹಾಕ್ವಳ 3 ಗುರು ಹಿರಿಯರ ಅತ್ತೆಮಾವರ ಜರಿದು ತಾ ಹಿರಿಯಳು ಮನಿಗೆ ನಾನೆನುತಿರ್ಪಳು ಪರರ ನಿಂದಿಸಿ ಭೂಸುರರು ಬಂದರೆ ಅನ್ನ ದೊರಕದೆನುತ ಹೇಳಿ ಕಳಹುವಳ ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3 ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ ಪತಿಯ ಸೇವೆ ಮಾಡದಿರುವಳಿಗೆ ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ ಪತಿ ನೋಡ್ವಳಿಗೆ ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4 ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ ಐವರ ಕೂಡ ಧಾರೆಯರೆಸಿಕೊಂಡಾ ಪರಮ ಪಾವನಳಾದ ಭಾರತೀ ದೇವೇರ ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5 ವನವಾಸದಲಿ ಪಾಂಡು ತನಯರ ಕೂಡ ತಾ ಧನ ಸುಖ ಬೇಡದೆÀ ಪೋದವಳು ಘನ ಹಸಿವುತೃಷೆಯಿಂದ ಅನ್ನ ಬೇಡಿದ ದುರ್ವಾಸಾದಿಗಳನು ಆದರಿಸಿದವಳಾ ಆಜನನಿ ದೃಪವ ನಂದನಿಯ ಕೃತ್ಯಗಳನ್ನು ನೆನೆದು ತನ್ನಯ ಮನವನ್ನು ತೊಳೆಯದವಳು 6 ಮರುತಂತರ್ಗತ ಸ್ವಾಮಿ ಸಲಹೆನ್ನದೇ ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ ಕರ್ಮ ಮಾಡ್ವಳಿಗೆ ಪರಮ ಪಾವನನಾದ ಹನುಮೇಶವಿಠಲನ ನೆರೆ ನಂಬದಲೇ ದೇಹ ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7
--------------
ಹನುಮೇಶವಿಠಲ
ಜಲದನೀಲಗಾತ್ರ ಏತರ ಚೆಲುವ ರುಕ್ಮಿಣಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.ಉದಕದೊಳಗೆ ವಾಸವೇಕೆ ಸದನವಿಲ್ಲವೆ |ಸುದತಿಸುಡುವ ಕಾಡಿಗಿಂತ ಲೇಸು ಅಲ್ಲವೆ1ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ 2ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ 3ಕರುಳ ಕೊರಳ ಸರವು ಏಕೆ ಸರವು ದೊರಕದೆ |ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ 4ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ 5ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ 6ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |ಭೂತಗಣಗಳಾಳುವುದಕೆ ಭೀತಿ ಇಲ್ಲವೆ 7ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ 8ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |............... ಶಾಪ ಹತ್ತಲಿಲ್ಲವೆ 9ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ 10
--------------
ಪುರಂದರದಾಸರು