ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಭಕುತಿ ಮತಿಗೆ ಮುಕುತಿ | ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ಪ ರತುನ ಗರ್ಭದೊಳಗೆ ತಿಳಿ | ರತುನ ಸಮಕ್ಷೇತ್ರಗಳಿಗೆ | ರತುನವೆನ್ನಿ ಯತಿವಂಶ | ರÀತುನ ಮಧ್ವಮುನಿಮಾಡಿದಾ 1 ಪದ ಜೀವಸ್ತರಿಗದೆ ಪಾ | ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ | ಸಾಧನಿ ಮನ ಮಾಡಿರಯ್ಯಾ 2 ಏಳು ಒಂದು ಮಠದ ಲೋಕರಂಸೆ ಸದನವೆನ್ನಿ | ಪೇಳಲೇನು ಅವರೇ ಯಿಲ್ಲಿ ಊಳಿಗವ ಮಾಡುತ್ತಿಪ್ಪರು 3 ಮೇರೊ ಪರ್ವತ ತುಲ್ಯವಿದೆ | ವಾರಿಜನೆ ಮಧ್ವರಾಯ | ಈ ರಜತ ಪೀಠವೆ ಮಂದಿರ ಶತಕೋಟಿ ಎನ್ನೀ4 ಮೆರೆವ ಮಧ್ವತೀರ್ಥ ಬಾಹಿರ | ವರಣ ಉದಕವೆನ್ನಿ ಇಲ್ಲಿ | ಚರಿಸುವಂಥ ಸುಗುಣ ತೃಣಾ ದ್ಯರು ಮುಕುತಿ ಯೋಗ್ಯರಹುದು5 ಉಡಪಿ ಯಾತ್ರೆ ಮಾಡಿದವನು | ಪೊಡವಿ ತುಂಬ ಯಾತ್ರೆ | ಬಿಡದೆ ಚರಿಸಿದವನೆ ಎಂದು | ಮೃಡನು ಇಲ್ಲಿ ಸಾರುತಿಪ್ಪಾ 6 ಉಬ್ಬಿ ಸರ್ವ ಇಂದ್ರಿಯಂಗಳಾ | ಹಬ್ಬವಾಗಿ ಸುಖಿಪದಕೆ | ಊರ್ಬಿಯೊಳಗೆ ಉಡುಪಿ ಯಾತ್ರೆ | ಅಬ್ಬದಲೆ ದೊರಕದಯ್ಯಾ 7 ಹಿಂಗಿ ಪೋಗದಕೆ ಇದೇ | ಅಂಗವಲ್ಲದೆ ಬೇರೆ ಇಲ್ಲ | ರಂಗ ಸುಲಭಸಾಧ್ಯಾವಾಹಾ 8 ನೂರು ಕಲ್ಪಧರ್ಮ ಮಾರನಯ್ಯ ವಿಜಯವಿಠ್ಠಲನ | ಸಾರಿ ತಂದು ಕೊಡುವಾ9
--------------
ವಿಜಯದಾಸ
ರಾಮ ರಾಮ ರಾಮ ರಾಮ ರಾಮವೆನ್ನಿರೊ |ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |ಸಿಂಧುಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು1ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5
--------------
ಪುರಂದರದಾಸರು