ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಮಹಿಮ ಬಲವಂತ ನಮ್ಮ ್ಹನುಮಂತ ನಿಂತು ನೀ ಸಲಹೋ ನಿರಂತರದಲ್ಲೆನ್ನ ಪ ರಾಮನುಂಗುರ ಸೀತೆಗಿಟ್ಟ ಮರವ ಕಿತ್ತಿಸೂ- ರೆ ಮಾಡ್ಯಕ್ಷಕುಮಾರನ್ನ ಮುರಿದು ರಾವಣೇಶನ ಲಂಕಾದ್ವೀಪಕೆ ದೀಪಗಳ್ಹಚ್ಚಿ ಹಾರಿದ್ವಾರಿಧಿ ವಾರ್ತೆ ಹರಿಗೆ ಬಂದರುಹಿದ 1 ಭೀಮಸೇನವತಾರ ಮಾಡಿ ತಾ ಪಾಂಚಾಲಿ ಕೂಡಿ ಕೊಂಡ್ವನವಾಸ ಚರಿಸಿ ಬಂದು ಕ್ರೂರ ಕುರುಪತಿ ಕುಲಕಂತಕನೆಂದರಸನ ಪಟ್ಟ- ರಾಜ್ಞಿ ದ್ರೌಪದಿಧರ್ಮರಾಜಗ್ವಂದಿಸಿದನು 2 ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ- ರಾಯರಾಗಿ ರಜತಪೀಠಪುರದಲ್ಲೆ ಭೀಮೇಶ ಕೃಷ್ಣನ್ನ ನಿಲಿಸಿ ಬಂದೀ ಬೊಮ್ಮ ಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ3
--------------
ಹರಪನಹಳ್ಳಿಭೀಮವ್ವ
ಏನು ಕೊಟ್ಟನೆ ಮಗಳಾ ಉದಾ | ಸೀನದಿ ಭಿಕ್ಷುಕ ಶಿವಗೀಂದು ಗಿರಿಜಾ ಪ ಹೆತ್ತವಳಿಲ್ಲಾ ಸೀ ಹುಟ್ಟತ ಪರದೇಶೀ | ನೆತ್ತಿಗೆ ಎಣ್ಣಿಲ್ಲಾ ನೆರೆಬಿಸಿ ನೀರಿಲ್ಲಾ | ದೊತ್ತಿದ ಕೂದಲು ದುರ್ಜಟಿ ಯಾಗಲು | ಹೊತ್ತಿದ ತಲೆಯಿಂದ ಹಣೆ ಉರಿಗಣ್ಣಾದ | ಇತ್ತಿ ಹೊದಿಯಲಿಲ್ಲಾದೀ ಭಸ್ಮ ಲೇಪನಾ | ಮೆತ್ತಿದ ಗುಣದಿಂದ ಮೈ ಯಲ್ಲ ಬೆಳ್ಚಾದಾ | ಎತ್ತ ನೇವುವನು ಭೂತ ಗಣಾ | ಯೋಗಿ - ಕು | ಲೋತ್ತ ಮನೆನಿಸಿದನು ಇಂಥ | ಹತ್ತು ಭುಜವ ತಾಳಿ ದೈದು ಮೊರೆಯುಗವ 1 ಶರಥಿ ಮಥನದಲ್ಲಿ ಸಲೆ ವಿಷ ಹೊರಡಲಿ | ಸುರರ ಮಾತು ಕೇಳಿ ಶೀಘ್ರದಿ ಸುರಿಯಲಿ | ಉರಿಹೆಚ್ಚಿ- ಮೈಯ್ಯಲಿ ಉಬ್ಬಸ ಗೊಳುತಲಿ | ಸುರಗಂಗಿಯ ಹೊತ್ತ ಸೀತಾಂಶು ಕಳೆವತ್ತ | ಮರುಳವೆ ತಿರುಗುವ ಮತ್ತೆ ಭೋಳಾದೇವ | ತ್ವರಿತವ ಕೋಪದಯ ಮನಿಯೊಳು ಹಿಡಿದಿಹ | ಸುರರಿಗೆ ವಲಿದಿಹನು ಬೇಡಿದ | ವರಗಳನ್ನು ಕೊಡತಿಹನು ಬೆನ್ನಟ್ಟಿ | ಬರೆ ದುಷ್ಟ ಓಡಿದನು ಶ್ರೀ ವಿಷ್ಣು | ಕರುಣದಿ ಶರೆಯ ಬಿಡಿಸೆ ಕೊಂಡವನಿಗೆ 2 ಕರಿಚರ್ಮ ತಾಳಿದಾ ಕಾಡೊಳು ಸೇರಿದಾ | ಉರಗ ಭೂಷಣನಿವ ಊಧ್ರ್ವರೇತಾದವ | ಹೊರೆ ಹುಲಿದೊಗಲಾ ಹಾಸಿಗೆ ಮಾಡಿದಾ | ಕೊರಳಳು ರುಂಡಮಾಲಾ ಕರದೊಳು ಕಪಾಲಾ | ಧರಿಸಿದ ನೀತನು ದೊರೆಯಲ್ಲದಾತನು | ನೆರೆದುಣ - ಲುಡಿಲಿಲ್ಲಾ ನರಸುರ ರೊಳಗಲ್ಲಾ | ಪರಕ ಪರೆನಿಸುವರು ಸ್ಮರಿಸಿದಾ ಆ ಗುರುವರ ಮಹಿಪತಿ ಪ್ರಭು ಸಾಂಬನೆಂಬವನಿಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಮ್ಮಾ ಎಂಥವನಿವಾ ಚಿನ್ನನೆ| ಗೋಪಿಯ ಕಂದಾ ಅಂತವ ದೋರಗುಡನೆ ಪ ಸಗಟನ ಮುರಿದೊತ್ತಿದ|ಮೊಲೆಯ ಕೊಟ್ಟ| ಮುಗುದೆಯ ಪ್ರಾಣ ಹೀರಿದಾ 1 ವಿಷಮಡು ಕಲಕಿದನೆ|ಕಾಳಿಂಗನಾ| ವಸುಧೆಗೆ ಎಳೆತಂದನೆ 2 ಪಶುಪಕ್ಷಿ ಮೃಗಾಂಗನೇರು|ಕೊಳಲಧ್ವನಿಗೆ| ನಿಸಿದಿನಿ ಮರುಳಹರು3 ತಿನಬ್ಯಾಡಮಣ್ಣವೆಂದರೆ|ಬಾಯೊಳು ಜಗವ| ದೋರಿದ ಜನ ಬೆದರೆ 4 ತಂದೆ ಮಹಿಪತಿ ಸ್ವಾಮಿಯ|ಹೇಳಲಿ ನಾನು ಒಂದೆರಡೆಂದು ಲೀಲೆಯ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು
ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ಪ ರುದ್ರರೂಪೆ ದಾರಿದ್ರ್ಯಮರ್ದನಿ ರುದ್ರನರ್ಧಾಂಗಿಗೆ ನಮೋ ನಮೋ ಅ.ಪ ನಿಗಮಾತೀತೆ ಮಹದಾಗಮನುತೆ ತ್ರೈ ಜಗದ ಮಾತೆಗೆ ನಮೋ ನಮೋ ಸುಗುಣಸಂತಜನರಘನಾಶಿನಿ ಸುಖ ಸ್ವರ್ಗಾಧಿಕಾರಿಗೆ ನಮೋ ನಮೋ 1 ಮೃಡಮೃತ್ಯುಂಜನನೆಡದೊಡೆಯೊಳು ಕಡುಸಡಗರವಾಸಿಗೆ ನಮೋ ನಮೋ ದೃಢತರ ಭಕ್ತರ ದೃಢದ್ವಾಸಿನಿ ಜಗ ದೊಡೆಯ ಮೃಡಾಣಿಗೆ ನಮೋ ನಮೋ 2 ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ ಕಮಲನೇತ್ರೆಗೆ ನಮೋ ನಮೋ ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ ವಿಮಲ ಚರಿತ್ರೆಗೆ ನಮೋ ನಮೋ 3 ಭಂಡದನುಜಕುಲ ರುಂಡ ಚೆಂಡಾಡಿದ ಪುಂಡ ಉದ್ದಂಡೆಗೆ ನಮೋ ನಮೋ ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ ಚಂಡಿ ಚಾಮುಂಡಿಗೆ ನಮೋ ನಮೋ 4 ರಕ್ತಬೀಜರೆಂಬ ದೈತ್ಯರ ಮದ ಮುರಿ ದೊತ್ತಿದ ವೀರೆಗೆ ನಮೋ ನಮೋ ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ ಶಕ್ತಿ ಶಾಂಭವಿಗೆ ನಮೋ ನಮೋ 5 ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ ಶಂಕರಿ ಶರ್ವಾಣಿಗೆ ನಮೋ ನಮೋ ಮ ಹಂಕಾಳಿ ನತಸುಖಂಕರಿ ಪಾರ್ವತಿ ಶಂಕರನರಸಿಗೆ ನಮೋ ನಮೋ 6 ಶೌರಿ ಔದರಿಯ ಶಾರದೆ ಶ್ರೀಕರಿ ಶೂರ ಪರಾಂಬೆಗೆ ನಮೋ ನಮೋ ಪಾರಾವಾರ ದಯೆಕಾರಿ ನಿರಾಮಯೆ ಧೀರ ಚಿದ್ರೂಪೆಗೆ ನಮೋ ನಮೋ 7 ಉಗ್ರರೂಪಿ ಭವನಿಗ್ರಹ ದುಷ್ಟ ಸ ಮಗ್ರ ಹರಿಣಿಗೆ ನಮೋ ನಮೋ ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ ದುರ್ಗಾದೇವಿಗೆ ನಮೋ ನಮೋ 8 ಹೈಮಾವತಿಯೆ ನಿರ್ಮಾಯೆ ಮೂರುತಿ ಕೋಮಲ ಹೃದಯೆಗೆ ನಮೋ ನಮೋ ಭೀಮಪರಾಕ್ರಮಿ ರಾಮದಾಸಜನ ಪ್ರೇಮಪೂರ್ಣಿಗೆ ನಮೋ ನಮೋ 9
--------------
ರಾಮದಾಸರು