ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ
ಸಾಧುಜನ ಹೃದಯ ಸದ್ಗುರು ದಯ ನಿಶ್ಚಯ ಧ್ರುವ
ಸಾರಿಚಲ್ಲೆದ ಪೂರ್ಣ ಹರಿಯ ಸುಖ ನಿಧಾನ
ಸುರಮುನಿಗಳ ಪ್ರಾಣ ಶರಣಜನರಾಭರಣ 1
ಬಣ್ಣಬಣ್ಣಭಾಸುವ ಪುಣ್ಯಶ್ಲೋಕರಾಜೀವ
ಸಣ್ಣ ದೊಡ್ಡದಲ್ಲೀವ್ಹ ಕಣ್ಣಿಗೆ ಕಾಣಿಸುವ 2
ಗುಹ್ಯಕೆ ಗುಹ್ಯವಾದ ಮಹಾಮಹಿಮೆಯ ಬೋಧ
ಮಹಿಪತಿ ಸದ್ಗೈಸಿದ ಮಹಾಗುರು ಸುಪ್ರಸಾದ 3