ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾನಧರ್ಮವ ಮಾಡಿ ಸುಖಯಾಗು ಮನವೆ ಪ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1 ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2 ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3 ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4 ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5
--------------
ಕನಕದಾಸ
ನಿಮ್ಮ ನುಡಿಗಳ ಕೇಳಲೆನಗೆ ಹೊತ್ತೆಲ್ಲಿಯದುನಮ್ಮ ಗೃಹಕೃತ್ಯಗಳು ಬಹಳವಾಗಿಹವೊ ಪನಮ್ಮಯ್ಯನೊಂದು ಗ್ರಾಮವನೇಕಸ್ವಾಮ್ಯದಲಿತಮ್ಮ ದಂಪತಿಗಳುಪಭೋಗಕೆಂದುತಮ್ಮಲ್ಲಿ ತಾವೆ ಸಂವಾದಿಸಿದರವರಲ್ಲಿಹಮ್ಮು ಕಡೆಯಾದ ಹದಿಮೂವರುದಿಸಿದರೂ 1 ಕ್ಲೇಶ ಬಡಿಸುವರು 2ಸ್ತ್ರೀ ಕಾಮನೆ ರಾಗ ಪ್ರತಿಕೂಲದಿಂ ದ್ವೇಷ ಬೇಕೆಂಬದನೆಕಾದುನುಳಿಯೆ ಕ್ರೋಧಾಆಕ್ರಮಿಸಿ ಸಕಲವನು ಬಚ್ಚಿಡುವನವ ಲೋಭಸಾಕು ಗುರುಹಿರಿಯರೆಂಬವರರಿಯೆ ಮೋಹಾ 3ನಿತ್ಯವಲ್ಲದ ಸಿರಿಯ ನಂಬಿ ಬೆರೆತಿಹಮದನುಉತ್ತಮರ ಕೂಡೆ ಸೆಣೆಸುವನು ಮತ್ಸರನುಮತ್ತೆ ಈಷ್ರ್ಯನು ದುಃಖನನ್ಯರಿಗೆ ಬಗೆಯುತಿಹವ್ಯರ್ಥದಿಂ ಬಸವಳಿಯುತಿಹನಸೂಯಕನು 4ದಂಭವನೆಂಬವನಲ್ಲಿ ಪುರುಷಾರ್ಥವಿಸಿಕಿಲ್ಲಹಂಬಲಿಸುತಿಹ ದರ್ಪಕೊಬ್ಬಿ ಬರಿದೆಉಂಬರೊಬ್ಬರಿಗಿಲ್ಲ ಸಕಲವೂ ನನಗೆಂದುದೊಂಬಿಯಲಿ ನಾ ಸಿಕ್ಕಿ ಬಳಲುತಿಹೆನಾಗಿ 5ವೃತ್ತಿಯೆರಡದರಲ್ಲಿ ಫಲವೆರಡು ಜನ್ಮಕ್ಕೆಬಿತ್ತಿ ಬೆಳೆವರೆ ಚೌಳು ಜಲವ ಕಾಣೆಒತ್ತರಿಸಿ ಬರುತಿರುವ ಜ್ಞಾತಿಗಳ ಬೆಂಕಿಯಲಿಹೊತ್ತು ಹೊತ್ತಿಗೆ ಬರಿದೆ ದಹಿಸುತಿಹೆನಾಗೀ 6ಬರಿಯ ಭ್ರಾಂತಿನ ಬಲೆಯ ಬೀಸಿ ನೋಡುತ್ತಿರುವತಿರುಪತಿಯ ವೆಂಕಟನ ಚರಣಗಳನುಕರಗಳಲಿ ಬಿಗಿಯಪ್ಪಿ ಶಿರವೆರಗಿ ಗುರುಮುಖದಿಅರುಪಿದುದ ನಿಲಿಸೆಂದು ಬೇಡಿಕೊಳುತಿಹೆನು 7ಕಂ||ತನುವಿನೊಳಭಿಮಾನವಿರಲೀಘನತರ ಸಂಸಾರ ದುಃಖ ತೊಲಗದು ಸತ್ಯತನು ನಿತ್ಯತೆದೋರ್ದಕಾರಣಮನದೊಡನಿಂತೆಂದು ಜೀವನನು ವಾದಿಸಿದಂ
--------------
ತಿಮ್ಮಪ್ಪದಾಸರು
ಶ್ರೀಹರಿ ಕೀರ್ತನೆ ಅಗಲದಿರೋ ಮನ ಮಂದೀರದಿಂದ ಲೆನ್ನ ಎಂದೆಂದಿಗೂ ಕೃಷ್ಣ ಪ ಅಗಲದಿರೋ ಬ್ರಹ್ಮಾದಿ ವಂದಿತ ಪರಿ ಪೂರ್ಣ ಏಕನೆ ವಿಶ್ವ ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ. ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ- ಗೆಟ್ಟು ಬಳಲಿದೆ ಭಕ್ತಬಾಂಧವ ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ- ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1 ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ ವಾಸುದೇವನು ಜೀವ ಜಗದಿಂ ವಿಲಕ್ಷಣನು ಈಸುಜ್ಞಾನವನೀಯೋ ಜನ್ಮಜನ್ಮಾಂತರಕು ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ- ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ ಹೃದಯಗುಹೆಯಲಿ 2 ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ ಧಾಮ ವಿಶ್ವೋ ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3 ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು ಎನಿಸೈ ನೀಡಿ ವಿಜ್ಞಾನ 4 ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ ನಾಡಿ ಮೆರೆಯುವ ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
--------------
ಕೃಷ್ಣವಿಠಲದಾಸರು