ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರುಣೆಗೈದೆ ನಳಿನಾಕ್ಷ ಪ ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ. ಹಿಂದೆ ಬಲಿಯು ತಾ ಯಜ್ಞವ ಮಾಡಲು ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ ಇಂದು ಆ ಪದವಿಯನತಿಯುಕ್ತಿಯಿಂದಲಿ ಸಂದೇಹವಿಲ್ಲದೆ ಸೂರೆಗೈದವ ನೀನೆ 1 ಪರಮ ವಿದ್ವಾಂಸರನು ಧೈರ್ಯಶೀಲರನು ನೆರೆಮೋಹಗೊಳಿಸುವುದೈಹಿಕ ಭಾಗ್ಯವು ಪರಮ ಕಾರುಣ್ಯದಿಂದೊಲಿದು ನೀನಿವನನು ಸಿರಿಮೋಹದಿಂದಲಿ ಪಾರುಮಾಡಿದೆ ದೇವ 2 ನೀನಿಂದು ಗೈದುದು ಪರಮೋಪಕಾರವು ನಾನದರೊಳು ಲೇಶದೋಷವೆಣಿಸನಯ್ಯಾ ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ ಆನಮಿಸುವೆನಿಂದು ದೀನವತ್ಸಲ ಸ್ವಾಮಿ 3
--------------
ವರಾವಾಣಿರಾಮರಾಯದಾಸರು
ಪಾಹಿ ಪಾಂಡವ ಪರಿಪಾಲ ನೀನೇ ನಿತ್ಯ ಮಹದಾದಿವಂದ್ಯಾ ಸುಶೀಲಾ ಪ ದೈಹಿಕ ಮೊದಲಾದ ಕರ್ಮವ ಮಾಡಿಸಿ ಮೋಹಕ ಪಾಶವ ಓಡಿಸು ಕೇಶವಾಅ.ಪ ಇಂದ್ರತನಯಾ ಮಾನಭಂಗ ಮಾಡಿದೆ ನೀನು ಇಂದು ಉಂಡೆನೋ ಸಿರಿರಂಗಾ ಮಂದರೋದ್ಧರ ಕೋಮಲಾಂಗಾ ಕೇಳೊ ಪೊಂದಿಸು ಸುಜನರ ಸಂಗಾ ಕಂದರ್ಪಜನಕ ಆನಂದ ವಿಗ್ರಹ ಪೂರ್ಣ ಮಾತನು ಸುಂದರ ನಿಜ ಭಕ್ತ ವೃಂದ ಮಹೋದಧೇ 1 ಕಾಲಕರ್ಮ ಗುಣದಿಂದಾ ವೃಥಾಯು ವೇಳೆಯ ಕಳದೆ ಮುಕುಂದಾ ಪೇಳಾ ಲೇಸೊ ಪ್ರತಿ ಬಂಧಾ ಇನ್ನು ನಾನು ತಾಳಲಾರೆ ದು:ಖದಿಂದಾ ಆಲಸ ತಾಳದೆ ಆಲಿಸು ಮಾತನು ಆಳುಗಳೊಳಗಿಹ ಆಳಾನೆಂದು 2 ಅನಾದಿಯಿಂದಲಿ ನಿನ್ನ ಪದಗಳ ಧ್ಯಾನವ ಮಾಡುವೆ ಚನ್ನಾ ನಾನಾ ಬಗೆಯಿಂದ ಯೆನ್ನಾ ಸಾಕುತಲಿಪ್ಪ ನೀನೆ ಮುಖ್ಯನೊ ಪ್ರಸನ್ನ ಅನಂತಶಯನ ಭೋ ವಿಜಯವಿಠ್ಠಲರೇಯ ಮಾನದಲಿ ನಿಂದು ಪ್ರಾಣಪ್ರೇರಕನಾಗೊ 3
--------------
ವಿಜಯದಾಸ
ಯಾಕಿಂತುಪೇಕ್ಷಿಸುವಿ ಪರಮ ಕರು- ಣಾಕರ ಶಿಕ್ಷಿಸುವಿ ಪ. ಹಿಂದಿನಾಪತ್ತುಗಳ ಸಮಯದಿ ನೀ ಬಂದೆನ್ನ ಕಾಯ್ದುದಿಲ್ಲವೆ ತಂದೆ ನೀನೆಂದು ನಂಬಿದ ಮೇಲೆನ್ನ ನೀನು ಇಂದಿಂತುಪೇಕ್ಷಿಪುದೆ 1 ಭವರೋಗಹಾರಿ ನಿನ್ನ ಭಕ್ತನಿಗಿಂಥ ಭವಣೆಯು ನಿಲುವುದುಂಟೆ ಕವಿ ಸನಕಾದ್ಯರಂತೆ ದೈಹಿಕ ದು:ಖ ಸಹಿಸಲು ಶಕ್ತಿಯುಂಟೆ 2 ಸೈರಿಸಲಾರೆ ಇನ್ನು ವೇದನೆಯಾ ಶೌರೀ ನೀ ದಯದೋರಿನ್ನು ಬರಗರಸಮಂಡನ ಕೃಪಾಕಟಾಕ್ಷ ದೋರೊ ಸುರಾರಿಖಂಡನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಕರ ನೀನೆ ಗತಿಯಲ್ಲದೆ ಬ್ಯಾರಾಕರವಿಲ್ಲ ಕೃಪಾಕರನೆ ದುರಿತ ನಿರಾಕರಿಸಯ್ಯ ಪರಾಪರನೆ ಪ. ರಾಜಿಕ ದೈಹಿಕ ದೈವಿಕರೆಲ್ಲ ಮ- ಹೋಜಸ ನಿನ್ನೊಶವಾಗಿಹವು ಪೂಜಿಸದೆನ್ನ ಸಭಾಜಿಸು ಮಂಗಲ ಭಾಜನ ಶತ್ರು ಪರಾಜಯ ಮಾಡಿಸು 1 ಹಲವಂಗದಿ ನಾ ಬಳಲುವ ಚಿಂತೆಯು ತಿಳಿಯದೆ ಚಿನ್ಮಯ ಜಲಜ ಸುಲಭದಿ ಸಂಪತ್ಫಲಗಳ ವರ್ಧಿಸಿ ನೆಲೆದೋರೆನ್ನೊಳು ಸುಕಟಾ 2 ರೋಗಭಯಂಗಳ ನೀಗುತ ಭಕ್ತಮ- ನೋಗತ ಫಲಸಂಯೋಗಗಳ ಬೇಗದಿ ನೀಡು ಕರಾಗತ ಮಾಡು ಸು- ನಾಗ ಗಿರೀಂದ್ರ ಸರಾಗ. . . . . . 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಂತರೆ ಭವದೂರರು ಹಿತಕಾರ್ಯರು ಪ.ಸಂತರ ಸೇವೆ ಶ್ರೀಹರಿ ಸೇವೆಸಂತರ ಮತವೆ ಹರಿಸಮ್ಮತವುಸಂತರ ಮತಿಯೆ ಮುಕುತಿಯ ಗತಿಯುಸಂತರಪಾದಚಿಂತನೆಗಾಹ್ಲಾದ1ಸಂತರಗಾತ್ರಭುವನಪವಿತ್ರಸಂತರ ನೋಟ ಪಾಪಗಳೋಟಸಂತರ ವಚನ ಧರ್ಮವಿರಚನಸಂತರ ಸಂಗ ತೋಷತರಂಗ 2ಸಂತರಿಂದೈಹಿಕಾಮುಷ್ಮಿಕ ಸೌಖ್ಯಸಂತರ ಅಭಯವಿರಲಾವಭವಸಂತರ ಕಂಡವ ನಿಜ ಸುಖ ಕಂಡಸಂತ ವಿಯೋಗ ತಮಸಿನಭೋಗ3ಸಂತರಖೇದವಂಶ ವಿಚ್ಛೇದಸಂತರ ಪ್ರೀತಿ ಶುಭಪದಪ್ರಾಪ್ತಿಸಂತರ ವಾರ್ತಾಖಿಳ ಪುರುಷಾರ್ಥಸಂತರ ಮಹಿಮಿ ಹೊಗಳ್ವಾತ ಪ್ರೇಮಿ 4ಸಂತರ ಊರೆ ಎನ್ನ ತವರೂರುಸಂತರ ಗತಿಗೋತ್ರರು ಎನಗಾಗಿಸಂತರ ಪದವನಪ್ಪಿದರೊಲಿವಸಂತರಿಗರಸ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು