ಒಟ್ಟು 10 ಕಡೆಗಳಲ್ಲಿ , 4 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ ಸಾಗಿ ಬಾರೋ ಗುರುರಾಘವೇಂದ್ರರಾಯ | ವರ ಸತ್ಕಲುಗೇಯ ಪ ಕೂಗುತ ಕರೆಯುವ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ಅ.ಪ ಪಾವನಘನ ವೃಂದಾವನ ಮಂದಿರನೆ ಸದ್ಗುಣ ಬಂಧುರನೇ ಪಾವಮಾನಿಮತಶರಧಿ ಚಂದಿರನೇ ಧರಸಮ ಕಂದರನೇ ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ 1 ಶರಣಜನರು ಮೈಮರೆದು ಕರೆಯಲಾಗಿ ನಿಲ್ಲದೆ ವರಯೋಗಿ | ಭರದಿ ಬಂದು ಕರಪಿಡಿಯುವ ಧೊರೆ ನೀನು ಎಂದರೀತೆವು ಸುರಧೇನು ಗತಿದಾಯಕ ನೀನೆಂದು ಭಜಿಪೆವು ದಯಾಸಿಂಧು 2 ಶಾಮಸುಂದರನ ಪ್ರೇಮವ ಪಡೆದಾತ ಜಗದೊಳು ಪ್ರಖ್ಯಾತ ನೇಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ 3
--------------
ಶಾಮಸುಂದರ ವಿಠಲ
ಕೋಲದೇವ ತನಯ ಕೂಲ ಸುನಿಲಯ ಪಾಲಿಸು ಜೀಯಾ ನೀ ಪಾಲಿಸು ಜೀಯಾ ಪ ದೇವಸ್ವಭಾವ ಮಹಿದೇವ ಸಂಸೇವಿತ ಪಾವನ ಸುಚರಿತ ದೇವ ಮುನಿಗತಿಪ್ರೀತ 1 ದೈಶಿಕ ಕುಲನಾಥ ಪೂಶರನಿರ್ಜಿತ | ಭಾಸುರ ಕಾಷಾಯ ವಾಸ ಭೂಷ ವ್ಯಾಸರಾಯಾ 2 ಶಾಮಸುಂದರ ಮೂಲರಾಮಪದಾರ್ಚಕ ಕಾರ್ಮುಕ ಗಜಸ್ತೋಮಸಿಂಗ ಮಂಗಳಾಂಗ 3
--------------
ಶಾಮಸುಂದರ ವಿಠಲ
ದೈಶಿಕನಾಥ | ಶ್ರೀ ಸುಶೀಲೇಂದ್ರ ಗುರು ಪ ಮಾರ್ಗಣ | ಮತ್ತಗಜಾಂಕುಶ ರಿತ್ತ ಸನ್ಮಂದಿರ ಭೋ 1 ಸದ್ಧರ್ಮಶೀಲ | ಶುದ್ಧಸ್ವಭಾವ ಮಧ್ವಮತಾಬ್ಧಿ ವಿಭೋ 2 ಶ್ರೀಮನೋವಲ್ಲಭ | ಶಾಮಸುಂದರ ಸು ಪ್ರೇಮ ಸತ್ವಾತ್ರ ಪ್ರಭೋ3
--------------
ಶಾಮಸುಂದರ ವಿಠಲ
ಪಾದ | ಲೇಸಾಗಿ ಭಜಿಸಲುಕೇಶವ ನೊಲುಮೆಗೆ ಅವಕಾಶವೊ ಪ ಆಸದಾಶಿವ ವಂದ್ಯ ಶ್ರೀಶನ ಪದ ಪದುಮಸೂಸಿ ಸೇವಿಸುವಂಥ ದೈಶಿಕರೊಡೆಯರ ಅ.ಪ. ಯತಿವರ ಬ್ರಹ್ಮಣ್ಯ ವರದಿಂದುದ್ಭವ ವಸುಮತಿಯ ಸ್ಪರ್ಶದ ಮುನ್ನ ಕನಕಪಾತ್ರ ಧೃತನೆ |ಮತಿವಂತನೆನಿಸುತಬ್ಬೂರೊಳು ನೆಲೆಸುತ್ತಯತಿಯಾಗಿ ಮೆರೆದೆ ಬ್ರಹ್ಮಣ್ಯರ ಕರಜನೆ 1 ಶ್ರೀಪಾದರಾಯರಲ್ಲೋದಿ ಸುಧಾದಿಯಆ ಪಂಪಾ ಕ್ಷೇತ್ರವ ಪ್ರಾಪಿಸಿ ನೆಲಿಸೀ |ತಾಪಸೀಗಳು ವಿಜಯೀಂದ್ರ ವಾದಿರಾಜಗಾಪಾರ ಮಹಿಮನ ತತ್ವಗಳೊರೆದಂಥ 2 ವಿದ್ಯಾನಗರಿಯ ಭವ್ಯ ಗದ್ದುಗೆಯನೆ ಯೇರ್ದತಿದ್ದೀದ ಪೃಥುವೀಪ ಕುಹುಯೋಗವಾ |ಮಧ್ವ ಸಮಯ ವರ ದುಗ್ದಾಭ್ಧಿ ಪೂರ್ಣೇಂದುಅದ್ವೈತ ತಮಸೂರ್ಯ ವರ ಚಂದ್ರಿಕಾಚಾರ್ಯ 3 ಮಾಯಾ ಸಮಯ ಮದಕರಿಗೆ ಕಂಠೀರವನ್ಯಾಯಾಮೃತವು ತರ್ಕ ತಾಂಡವ ರಚಿಸೀ |ಮಾಯಾ ಮತಂಗಳ ಛೇದಿಸಿ ಬಹುವಿಧರಾಯ ಕೃಷ್ಣನೆ ಪರಾತ್ಪರನೆಂದು ಪೇಳಿದ 4 ಮಾಸ ಫಾಲ್ಗುಣ ವದ್ಯಎರಡೆರಡನೆ ದಿನವು ಶನಿವಾರದೋಳ್ ವರ ಗುರು ಗೋವಿಂದ ವಿಠಲ ಧ್ಯಾನಾನಂದ ಪರನಾಗಿ ತನು ಕಳೆದ ನವ ವೃಂದಾವನದೊಳು 5
--------------
ಗುರುಗೋವಿಂದವಿಠಲರು
ಲಾತವ್ಯ - ಲಾತವ್ಯ ಪ ಖ್ಯಾತಾಗ್ರೇಸರ | ಭೂತರಾಜನುತ ಅ.ಪ. ಸ್ವಪ್ನದ್ರಷ್ಟ್ರುವು | ವಿಪ್ರನ ಮುಖದಿಂಸ್ವಾಪ್ನಾಖ್ಯಾನವ | ಸುಪ್ರಕಟಿಸಿದೆ 1 ವ್ಯಾಸರ ಸಮ್ಮುಖ | ವಾಸಿಸುತಿಹ ಸುವಿಶೇಷ ಮಹಿಮ ಗುರು | ದೈಶಿಕರೊಡೆಯನೆ2 ಆಖಂಡಲ ಮುಖ | ಮಂಡಿತ ಚರಣನೆಪಾಖಂಡರ ಮತ | ಖಂಡಿಸಿ ಮೆರೆದಾ 3 ಭಯವಿದೂರ ತವ | ದಯವನು ಪ್ರಾರ್ಥಿಪೆಹಯವದನನ ಪದ ಪ್ರಿಯ ಭಜಕಾಗ್ರಣಿ4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಾಣಿಸು | ಭಾವಿ ಮರುತ ಗುರು 5
--------------
ಗುರುಗೋವಿಂದವಿಠಲರು
ವಾದಿರಾಜ ಗುರು ನೀ ದಯಮಾಡದೆ ಈ ದುರಿತಗಳ ಕಳೆದಾದರಿಪರಾರೊ ಪ ದೈಶಿಕಾರ್ಯ ವಾಗೀಶಕುವರ ತವ ದಾಸಸಮೂಹವ ನೀ ಸಲಹೋ ಸದಾ 1 ನೀ ಗತಿಯೆಂದನುರಾಗದಿ ನಂಬಿದೆ ಭೋಗಪತೀಶನ ರೋಗವ ಕಳೆದೆ 2 ಜನ್ಮಾಧಿವಾಧ್ಯುನ್ಮಾದ ಭ್ರಮ ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ 3 ಭೂಮಿಪರುಪಟಳಕಾ ಮಹಿನಾಥನು ತಾ ಮೈಮರೆದಿರೆ ನೀ ಮುದವಿತ್ತೆ 4 ಮೋದಮುನಿಮತ ಪಯೋದಧಿ ಪೂರ್ಣ ವಿಧೋದಯ ಶರಣರ ಕಾದುಕೊ ಧೊರಿಯೆ 5 ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ ಇಳೆಯೊಳು ಯತಿಕುಲತಿಲಕ ಕೃಪಾಳೊ 6 ನಿನ್ನೊಶನಾದ ಜಗನ್ನಾಥ ವಿಠಲನ ಉನ್ನಾಹದಲಿ ತೋರೆನ್ನ ಮನದಲಿ 7
--------------
ಜಗನ್ನಾಥದಾಸರು
ವ್ಯಾಸಕೂಟ-ದಾಸಕೂಟ ನಮನ (ಶ್ರೀ ಜಯತೀರ್ಥರ ಪ್ರಾರ್ಥನೆ) ನಾಕನಾಯಕಟೀಕಾಕೃತ್ಪಾದ ನಾಕನಾಯಕ ಪ. ನಾಕನಾಯಕ ನಿರಾಕೃತ ತಾಮಸ ರಾಕಾ ರಮಣ ಸುಧಾಕರ ಮೂರ್ತೆ 1 ಪೂರ್ಣಮನೀಷಿಮತಾರ್ಣವ ಘೂರ್ಣನ ಪೌರ್ಣಮಿಯ ವಿಧುವರ್ಣಿತ ಕೀರ್ತೆ 2 ಕುಂಡಲೀಂದ್ರ ಗಿರಿ ಮಂಡನ ಧೂಷಕ ಖಂಡನ ದೈಶಿಕ ಪಾಂಡ್ಯಜ ಭೂಪಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ವ್ಯಾಸಾರ್ಯಾ - ವ್ಯಾಸಾರ್ಯ ಪ ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ ಅ.ಪ. ಭವ ಪರಿಹರಿಸುವೆ 1 ಭೀಕರವೆನೆ ನೃಪ | ಗಾಕುಹುಯೋಗವತಾಕುವ ಮುನ್ನವೆ | ನೀ ಕಳೆದೆಯೊ ಗುರು 2 ಪನ್ನಗ ನಗಪ ಪ್ರಪನ್ನ ಭಜಕ ನಿನ | ಗಿನ್ನುಂಟೇ ಸಮ 3 ಮಂದ ಜನರೋದ್ಧರ | ವೆಂದು ರಚಿಸಿದೇಚಂದ್ರಿಕಾದಿ ತ್ರಯ | ಸುಂದರ ಗ್ರಂಥ 4 ವ್ಯಾಸ ತ್ರಯಾಭಿಧ | ಲೇಸು ಗ್ರಂಥ ಸಂಕಾಶಿಸೆ ಬಹು ವಿಧ | ಆಸುರಿ ಮತ ಹನ5 ದಾಸ ಪಂಥ ಉಪ | ದೇಶಿಸೆ ಶ್ರೀನಿವಾಸ ನಾಯಕರ | ದಾಸರೆಂದೆನಿಸಿದೆ 6 ವಾಸವ ನಾಮಕ | ದಾಸರಿಂದ ದಿಗ್ದೇಶ ಪ್ರಸರ ಮಹಿ | ದಾಸನ ನಾಮವು 7 ಶ್ವಸನನ ಮತ ವಿ | ದ್ವೇಷಿವಾದ ಹರದೇಶ ದೇಶ ಹನು | ಮೇಶ ಪ್ರತಿಷ್ಠಿತ 8 ಸಾರ್ವ ಭೌಮ ಗುರು | ಗೋವಿಂದ ವಿಠಲನತೋರ್ವುದೆನ್ನ ಹೃದ | ಯಾ ಕಾಶದಲಿ 9
--------------
ಗುರುಗೋವಿಂದವಿಠಲರು
ಶ್ರೀ ರಘೋತ್ತಮತೀರ್ಥರು ನಮೋ ದೈಶಿಕಾರ್ಯ | ರಘೂತ್ತಮ ಪದನಮೋ ದೇವತಾತ್ಮ ಪ ವಿಮಲ ರಾಮ ಸನ್ಮಹಿಮ ಭಜಕಗುರುನಮೋ ನಮೋ ಪೂತಾತ್ಮ ಅ.ಪ. ಚಾರು ವ್ಯಾಖ್ಯ ಕೃತ ದೀಕ್ಷಭಾರಿ ಗ್ರಂಥ ಬೃಹದಾರಣ್ಯ ವಿವರಣ ನ್ಯಾಯ ಗ್ರಂಥಲಕ್ಷ್ಯಸಾರ ತತ್ವಪ್ರಭೆ ಚಾರುಗೀತ ಪ್ರಭೆ ತೋರ್ದ ಭಾವದಕ್ಷ 1 ಬೋಧ ಕಾರ್ಯತೀವ್ರ ಮನದ ದುರ್ಭಾವ ಕಳೆದು ಹರಿಭಾವ ಈಯೊ ವರ್ಯಭಾವ ಕೊಲಿವ ಕರ್ಮಾವಳಿಗಲ್ಲೆನೆ ಓವಿ ಪೇಳ್ದ ದಾಸಾರ್ಯಕಾವ ಕರುಣಿ ಹರಿಭಾವದಿ ನಿಲ್ಲುವ ಭಾವ ಬೋಧಕೃತ ಆರ್ಯಾ 2 ತೈಜಸ ಒರಯ ನ್ಯಾಯ ಸುಧೆ ಪೇಳ್ದ ಕೋಣಾಧ್ಯಕ್ಷಪರಿಪರಿ ಪ್ರಾರ್ಥಿಪೆ ಗುರು ಗೋವಿಂದ ವಿಠಲನ ಚರಣದಿ ದೀಕ್ಷ 3
--------------
ಗುರುಗೋವಿಂದವಿಠಲರು
ಶ್ರೀ ರಾಘವೇಂದ್ರ ಗುರುರಾಜ ಶ್ರೀ ಗುರುರಾಜ | ಶ್ರೀಗುರುರಾಜ ಬಾರೈ | ಭಕ್ತರಾಮರ ಭೋಜ ಶ್ರೀಗುರುರಾಜ ಪ ಮಂಗಳಮಹಿಮನಿ ಸಂಗೀತ ಪ್ರಿಯನೆ | ಅಂಗಜದೂರನೆ ಯತಿವರನೆ 1 ಶೃಂಗಾರ ವೃಂದಾವನ ನಿಲಯ | ಡಿಂಗರ ಪಾಲ ಕವಿಗೇಯ | ಶ್ರೀ ರಾಘವೇಂದ್ರ ಶ್ರೀಗುರುರಾಜ 2 ಶ್ರೀ ಶಾಮಸುಂದರ ಪ್ರಿಯದಾಸ | ಕ್ಲೇಶನಾಶನ | ವ್ಯಾಸಾರ್ಯನತಪೋಷ | ದೈಶಿಕನಾಥ | ಭಾಸುರಚರಿತ | ವರಕಾಷಾಯ ಭೂಷಿತ ಮಾಂಪಾಹಿ 3
--------------
ಶಾಮಸುಂದರ ವಿಠಲ