ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಕಿಂತ ಗುಣವಿಲ್ಲ ನರಗೆ ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ ಹೃದಯ ಮಂದಿರದಲಿ ನೆಲೆಸಿಹ ದಯೆಯು ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ ಬಾರಿಯ ಸ್ಥಾನಕೆ ಈ ದಯೆ ಗುಣವು ಭಾರಿಯ ಶಕುತಿಯ ನೀಡುವುದು ಚಾರು ಕಿರೀಟವ ಮೀರಿದ ಕಾಂತಿಯ ಬೀರುವುದೀ ದಯೆ ನರಪತಿಗೆ 1 ರಾಜನ ದಂಡವ ನೋಡುತ ನೋಡುತ ಈ ಜಗವೆಲ್ಲವು ನಡುಗುವುದು ರಾಜನ ಕಾರ್ಯಗಳೆಲ್ಲಕೆ ದೈವಿಕ ತೇಜವ ಕೊಡುವುದು ದಯೆ ಗುಣವು 2 ನಶ್ವರವೆಲ್ಲವು ಪ್ರಾಕೃತವು ಈಶ್ವರ ಧರ್ಮವೆ ಈ ದಯೆಯು ಶಾಶ್ವತ ಧರ್ಮಗಳೆಲ್ಲವು ದಯದಿ ಮಿಶ್ರಿತವಾದರೆ ಸುಖಮಯವು 3 ಪರಮ ಪುರುಷ ದಯೆ ತೋರದಿರೆ ವರಗತಿ ಪಡೆಯಲು ನರಗಳವೆ ಕರುಣೆ ಪ್ರಸನ್ನನ ಮೊರೆ ಹೋಗದೆ ನೀ ಅರಿಯಲು ಸಾಧ್ಯವೆ ಕರುಣೆಯ ಬೆಲೆಯ 4
--------------
ವಿದ್ಯಾಪ್ರಸನ್ನತೀರ್ಥರು
ಆದಿಯಲಿ ಮಧುಕೈಟಬರನು ಸಂಹರಿಸಿದಂಥ ಶೂರನೆ ವೇದವನು ಕದ್ದೊಯ್ದ ದಾನವನೊಳು ಕಾದಿಗೆದ್ದ ಧೀರನೆ 1 ಹದಿನಾರು ಸಾವಿರ ಗೋಪಿಯನಾಳಿದಾಮಿತ ಬಲವಂತನೆ ಕದನಕೊದಗಿದಸುರರನ್ನು ಸದೆ ಬಡಿದ ಪ್ರಖ್ಯಾತನೆ 2 ಸಾಧು ಸಜ್ಜನರ ಸಂತಾಪ ಕಳೆದಾಮೋದ ತೀರ್ಥಾರಾಧ್ಯನೆ ಆದಿದೈವಿಕಾದಿ ಈತಿ ಬಾಧೆ ಕಳೆಯೊ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಭಕ್ತಿ ಗೀತಾವಳಿ ಸರಸ್ವತಿ ಸ್ತುತಿಗಳು 1 ಜಯ ಜಯ ಜನನಿ ಜಗದುಜ್ಜೀವಿನಿ ಪ ಜಯ ಬ್ರಹ್ಮಾಣಿ ಅ.ಪ ಆವಳ ಕೃಪೆಯಿಂ ಜೀವಿಪೆಮೋ ಮ ತ್ತಾವಳ ವ್ಯಾಪನೆಯಿಂ ದೈವಿಕ ಗುಣಸಂಭಾವಿತರಪ್ಪೆವೋ ಭಾವಿಪೆವಾದೇವಿಯ ನಾವ್ 1 ಉಡುವುದು ತೊಡುವುದು ಕೊಡುವುದು ಹಿಡಿವುದದಾರಿಂದಂ ನುಡಿವೆಣ್ಣೆನಿಸಿದವಳಾವಳೋ ನಾವವ ಳೆಡಬಿಡದೆರೆವೋಂ 2 ತಾಯೆಮಗರಿವಂ ಕಾಯಕೆಬಲಮಂ ಮಾಯೆಯೆ ಬಿಡಿಸಿನ್ನು ಕಾಯಜಪಿತ ಶೇಷಾದ್ರೀಶನೆ ನೆನೆವಾಸನ್ಮತಿಯೆಂದೆಂದುಂ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಕರ ನೀನೆ ಗತಿಯಲ್ಲದೆ ಬ್ಯಾರಾಕರವಿಲ್ಲ ಕೃಪಾಕರನೆ ದುರಿತ ನಿರಾಕರಿಸಯ್ಯ ಪರಾಪರನೆ ಪ. ರಾಜಿಕ ದೈಹಿಕ ದೈವಿಕರೆಲ್ಲ ಮ- ಹೋಜಸ ನಿನ್ನೊಶವಾಗಿಹವು ಪೂಜಿಸದೆನ್ನ ಸಭಾಜಿಸು ಮಂಗಲ ಭಾಜನ ಶತ್ರು ಪರಾಜಯ ಮಾಡಿಸು 1 ಹಲವಂಗದಿ ನಾ ಬಳಲುವ ಚಿಂತೆಯು ತಿಳಿಯದೆ ಚಿನ್ಮಯ ಜಲಜ ಸುಲಭದಿ ಸಂಪತ್ಫಲಗಳ ವರ್ಧಿಸಿ ನೆಲೆದೋರೆನ್ನೊಳು ಸುಕಟಾ 2 ರೋಗಭಯಂಗಳ ನೀಗುತ ಭಕ್ತಮ- ನೋಗತ ಫಲಸಂಯೋಗಗಳ ಬೇಗದಿ ನೀಡು ಕರಾಗತ ಮಾಡು ಸು- ನಾಗ ಗಿರೀಂದ್ರ ಸರಾಗ. . . . . . 3
--------------
ತುಪಾಕಿ ವೆಂಕಟರಮಣಾಚಾರ್ಯ