ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ ನಮೋ ಬಾದರಾಯಣ ನರನ ಪ್ರಾಣ ಪ ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ ಶಿವನೊಳಗೆ ಏರಿದೆ ಶಿವನಿಗೊಲಿದೆ ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ ಶಿವನ ಮಗನಾ ಪಡೆದೆ ಶಿವನ ಕಾಯ್ದೆ1 ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ ಶಿವನ ಧನುವನು ಮುರಿದೆ ಶಿವನೊಲಿಸಿದೆ ಶಿವನ ಜಡ ಮಾಡಿದೆ ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ 2 ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ ಶಿವನ ಕೂಡಲಿ ಕಾದಿದವನ ಭಾವ ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ ಶಿವನ ಶೈಲವನೆತ್ತಿದವನ ವೈರಿ3 ಶಿವ ನುಂಗಿದದ ನುಂಗಿದವನ ಒಡನಾಡುವ ಶಿವ ಪರಾಶಿವ ನಿನ್ನ ಶಿವ ಬಲ್ಲನೇ ಯವೆ ಇಡುವನಿತರೊಳಗೆ ಧವಳ ಹಾಸಾ4 ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ ಶಿವನೊಳಗಿಳಿದ ಶಿಷ್ಯನಿವ ಹರಾತೀ ತಲ್ಪ ಶಿವ ಸಮಾನಿಕ ರೂಢ ಶಿವನ ಮನೆ ತೊಲಗಿಸುವ ಶಿವ ಬಾಂಧವಾ 5 ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು ಶಿವಮಣಿ ಎನಿಸುವ ಸ್ತವ ಪ್ರಿಯನೇ ವಾಹನ ವೈರ ಶಿರವ ತರಿಸಿದೆ ದೇವ ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ6 ಶಿವನ ಸೋಲಿಸಿದವನ ಜವಗೆಡಿಸಿದೆ ಶಿವನು ಕುದರಿಯ ಹೆರವ ಅವನು ಕಾಯಿದ ಗೋವ ಶಿವನವತಾರ ಶಸ್ತ್ರವನು ಹಳಿದೆ 7 ಶಿವನಧರ್Àನಾಗಿ ದಾನವನು ಕೊಂದ ಮಹಿಮಾ ಶಿವಋಷಿ ಪೇಳಿದ ಯುವತಿ ರಮಣಾ ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ ಅವರ ಬೆಂಬಲವೇ ಯಾದವಕುಲೇಶಾ 8 ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ ದಿವಿಚಾರಿಗಳ ತಮಸಿಗೆ ಹಾಕುವೆ ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ ಶಿವನಾಳು ಮಾಡಿ ಆಳುವ ದೈವವೇ9
--------------
ವಿಜಯದಾಸ
ಪೊಡೆದಾ ದೈವವೇ | ಅವರೆ ಕುಸುಮ ವಿರಚೇ ಶಿವ ದೀಪದಿಂವೆಗ್ಗಳವೇನೊ ನಿನಗೆ | 1 ಶಿರವನೆ ತರಿಸಿ ತೊಲಗಿದ ಪದಾರ್ಥದಿಂದೇನಯ್ಯಾ | ಹಂಸ ಕು ಬೇರ ನಿನ್ನವರಾಗಿದೆ | ಬರಿದೆಯಲಾ ಯೆನ್ನ ಸುವರ್ಣ ಪುಷ್ಪವೆ | ಪರಿಪರಿಗಾಯನ ನಾರದಾದ್ಯರು ಪಾಡೆ ಪೊಗಳಬಲ್ಲನೆ ನಿನ್ನನಗಣಿತ ಸ್ತೋ ನಿನಗೆರಗಿ ಕೈಮುಗಿವೆನೊ ತರಳತನದಲ್ಲಿ ನಾನು2
--------------
ವಿಜಯದಾಸ
ಪ್ರಥಮ ದೈವವೇ ಪಂಢರಿರೇಯಾ ಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ ಪ ಸಕಲಭಯನಾಶ ಸಾತ್ವಿಕ ಮೂರುತಿ ಭಕ್ತಜನಷೋಷಕ ನೀನಲ್ಲವೆ ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ 1 ಸರ್ವರಂತರಿಯ ಸಿದ್ಧ ಫಲದಾಯಕ ಸರ್ವರಲಿ ಸ್ವಾಮಿಯೆಂದೆನಿಪ ಸರ್ವ ವಿಘ್ನೋಪ ಶಾಂತಾ ವೇದಾಂತನೆ ಗೀರ್ವಾಣ ಮುನಿಸುತ ಗಿರಿಧರ ದೇವಾ 2 ಸಾಧು ಮೂರುತಿ ಸಿದ್ಧ ಫಲದಾ ಬೋಧ ಕೀರುತಿ ಆದಿಪರಬೊಮ್ಮ ವಿಜಯವಿಠ್ಠಲರೇಯಾ ನೀನು ಈ ಜಗದೊಳು ಭೀಮಾ ಕೀರನಿವಾಸಾ 3
--------------
ವಿಜಯದಾಸ
ಮರೆಯದಿರು ಮರೆಯದಿರು ಮನುಜಾನಾರಾಯಣನ ಸ್ಮರಣೆಯನು ಮಾಡು ಮನುಜಾ ಪ ಸತಿ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ 1 ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ 2 ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ3
--------------
ಕನಕದಾಸ
ವಂದಿಸಿ ಬೇಡುವೆ ನವಗ್ರಹರ ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ ಭಾಸುರ ಸೂರ್ಯನು ಭಾಸಿಸಲಿ ತತ್ವವನು ಶ್ರೀ ಸಹೋದರ ಚಂದ್ರ ತೋಷವನು ಸೂಸಿ ಕೊಡಲಿ ಮಂಗಳವನು ಮಂಗಳ ಲೇಸಾದ ಪಾಂಡಿತ್ಯ ಪಂಡಿತನೀಯಲಿ 1 ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ ಕವಿ ಕೊಡಲಿ ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2 ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ ಬಿಡದಲೆ ಧ್ವಜಿಯು ಸಡಗರದಿ ಕಡು ನವಗ್ರಹಗಳು ಪಿಡಿಗ್ರಹವಾಗಲಿ ಸಿರಿ ದೃಢದಿ ದಿನದಿನದಿ 3 ತರಣಿ ಕುಮಾರ ಮಣಿ ಹಾರ ದಾರಿದ್ರ್ಯದೂರ ಹರಿಸು ಅರಿಷ್ಟವ ಸುರಿಸು ಮನೇಷ್ಟವ ಎರಗುವೆ ಸಂಕಟಗೊಳಿಸದಿರುತ್ಕಟ 4 ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ ನಿರುತದಿ ಪಠಿಸಲು ಗ್ರಹ ಪೀಡೆಯು ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5 ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು ಚಾರು ಕನ್ನಡ ಗೀತ ರೂಪದಿಂದ ಸಾರಿದ ಲಕ್ಷ್ಮೀನಾರಾಯಣ ಶರ್ಮನು ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6 ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ ನಮೋ ಗುರು ಭಾರ್ಗವ ನಮೋ ಶನೈಶ್ಚರನೇ ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
--------------
ಲಕ್ಷ್ಮೀನಾರಯಣರಾಯರು
ವಿಜಯದಾಸರ ಭಜನೆ ಮಾಡಿರೊ |ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ಪ ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ 1 ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ2 ಪಾದ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ 3
--------------
ಮೋಹನದಾಸರು
ಎಲೆ ಮನವೆ ನೀ ತಿಳಿಹರಿ ಸರ್ವೋತ್ತಮನೆಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ಪ.ಇಕ್ಷುದಂಡಗಳಿರಲು ಇಂಧನವ ಮೇಲೇಕೆ |ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |ಪಕ್ಷಿವಾಹನನಿರಲು ಪರದೈವವೇಕೆ 1ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |ಮುರಹರನ ಪೂಜಿಸದೆ ಮುಂದುಗೆಡಲೇಕೇ 2ಭಾವಶುದ್ಧಿಗಳಿರಲು ಬಯಲಡಂಬರವೇಕೆ |ದೇವತಾ ಸ್ತುತಿಯಿರದ ದೇಹವೇಕೆ ||ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |ದೇವ ಪುರಂದರವಿಠಲನಿರಲು ಭಯವೇಕೆ 3
--------------
ಪುರಂದರದಾಸರು