ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಭಾರತೀರಮಣ ಕರುಣಿಸು ಪ ಪರಮದಯಾದಿಂದ ಹರಿಯನ್ನ ತೋರಿಸು ದುರುಳರೊಳಡಗಿದೆ ನಿಲಿಸೊ ಜ್ಞಾನಿಗಳಲ್ಲಿ ಅ.ಪ ತ್ರೇತಾಯುಗದಲ್ಲವತರಿಸಿ | ಕಪಿ ವ್ರಾತ ಶಿರೋಮಣಿ ಎನಿಸಿ | ಪಕ್ಷ - ಚೂತ ಫಲಗಳನ್ನು ಸಲಿಸಿ | ಭೂಮಿ - ಜಾತೆಯ ಪಾದಕ್ಕೆ ನಮಿಸೀ | ಅಹ ಘಾತಿಸಿ ಖಳರನ್ನು ಸೀತಾಪತಿ | ಮನೋ ರಥವನು ಸಲಿಸಿದ ಮಾತರಿಶ್ವನೆ ನೀ 1 ಕುಂತಿಯ ಉದರದಿ ಜನಿಸಿ | ಬಹು ಸಿರಿ - ಕಾಂತನ ಪಾದಕ್ಕೆ ನಮಿಸಿ | ಮಡದಿ ಚಿಂತೆಯನು ದೂರಗೈಸಿ | ಅಹ ಸಂತಾಪಗೊಳುತಿಪ್ಪ ದಂತಿಪುರಾಧಿಪನ ತಂತುಗೆಡಹಿತ ಬಲವಂತ ಶಿರೋರನ್ನ 2 ಕಲಿಯುಗದಲುದ್ಭವಿಸಿ | ಬಹು ಲೀಲೆಯೊಳನ್ಯರ ಜಯಿಸಿ | ಸತ್ಯ ಶೀಲರನ್ನುದ್ಧರಿಸಿ | ಸಿರಿ ಲೋಲನೆ ಪರದೈವವೆನಿಸಿ | ಆಹ ಬಾಲ ರವಿ ತೇಜ ವಿಜಯ ರಾಮಚಂದಿರವಿ - ಠಲನ್ನ ಪೂಜಿಸುವಂಥ ಆಲವ ಬೋರ್ಧಾಯನೆ 3
--------------
ವಿಜಯ ರಾಮಚಂದ್ರವಿಠಲ
ಬರಿದೆ ಮೋಹದೊಳು ಬೆರೆದೆ ನಮ್ಮ ಗುರುವಾದಿರಾಜಾರ್ಯ ಚರಣಗಳ ಮರೆದೆ ಪ. ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ ಗಣಪತಿಶಕ್ತಿ ಪೂರ್ವದೇವತೆಗಳನು ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ- ಪರ ದೈವವೆನಿಸಿ ಮೆರೆವಂಥ ಪಾರ್ವತೀವರವಂದ್ಯಪದ ಪಾತ್ರನೆನಿಸದೆ 1 ಅಂತರ್ಬಹಿಃಶತ್ರು ಸಂತತಿಯ ಗೆಲುವ ತೋರಿಸುವ ಚಂತಿತಾಭೀಷ್ಟಗಳ ಪರಮಾಂತರಂಗದಿ ಕೊಡುವ ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ- ಲ್ಪಾಂತದಲಿ ಪವಮಾನನಾಗುವನ ಮರೆದೆ 2 ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ ಶುಭಕರವಜ್ಞಾನ ಸುಖ ಸಾರ ವೆಂಕಟಪತಿಯ ಮನದಿ ಧರಿಸಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಏನು ಮರುಳಾದೆಯೇ ಎಲೆ ರುಕ್ಮಿಣಿ |ಹೀನಕುಲ ಗೊಲ್ಲ ಶ್ರೀ ಗೋಪಾಲಗೆ ಪಹಾಸಿಕಿಲ್ಲದೆ ಪೋಗಿ ಹಾವಿನೊಳು ಪವಡಿಸಿದ |ಹೇಸಿಕಿಲ್ಲದೆ ಕರಡಿಯನುಕೂಡಿದ||ಗ್ರಾಸಕಿಲ್ಲದೆ ಪೋಗಿ ದಾಸನ ಮನೆಯಲುಂಡ |ದೋಷಕಂಜದೆಮಾನವಶಿರವ ತರಿದವಗೆ1ಕುಂಡಗೋಳಕರ ಮನೆ ಕುಲದೈವವೆನಿಸಿದನು |ಮಂಡೆಬೋಳಾದವರ ಮನೆದೈವವು ||ಹಿಂಡುಗೋವಳರೊಳಗೆ ಹಿರಿಯ ಗೋವಳನೀತ |ಭಂಡಾಟಗಾರನಿವ ಭುವನದೊಳಗೆಲ್ಲ 2ಒಬ್ಬರಲಿ ಪುಟ್ಟಿದನು ಒಬ್ಬರಲಿ ಬೆಳೆದನು |ಒಬ್ಬರಿಗೆ ಮಗನಲ್ಲ ಭುವನದೊಳಗೆ ||ಅಬ್ಬರದ ದೈವಸಿರಿ ಪುರಂದರವಿಠಲನ |ಉಬ್ಬುಬ್ಬಿ ಮರುಳಾದೆ ಉತ್ಸಾಹದಿಂದ 3
--------------
ಪುರಂದರದಾಸರು