ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1 ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2 ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂದ ತೀರಥರಾಯ ಅಸ್ಮದ್ಗುರೋರ್ಗುರು ಕಾಯ ಪೊರೆಯಯ್ಯ ಜೀಯಾ ಪ ಪಾದ ಕಮಲಕೆ ನಂದ ಮಧುಕರ ನಂದದಲಿ ನಿಜ ಮಂದ ಜನರಿಗೆ ನಂದ ಕೊಡುವಾ ಮೂರ್ತಿ ಆನಂದಕಾರಿಯೆ ಅ.ಪ ಮಧ್ಯಮನಿ ದ್ವಿಜನಲ್ಲಿ ಉದ್ಭವಿಸಿ ನೀನೂ ಮಧ್ವಮುನಿ ಪೆಸರಲ್ಲಿ ದುರ್ವಾದಿಗಳ ಅ - ಶುದ್ಧ ಭಾಷ್ಯಗಳಲ್ಲಿ ಜಯಪಡೆದ ನಿನ್ನಾ ಶುದ್ಧ ಭಾಷ್ಯಗಳಲ್ಲಿ ಭಕ್ತಿಯಿಂದಲ್ಲಿ ಶುದ್ಧ ಶ್ರೀ ಹರಿಮತದ ಶುಭ ಸಿದ್ಧಾಂತ ಸ್ಥಾಪಿಸಿ ಜಗದಿ ಜೀವರ ಸಿದ್ಧಗಣಕಧಿನಾಥನೆಂದೂ ಪ್ರ - ಸಿದ್ಧಗೈಸಿದಿ ಶುದ್ಧ ಮೂರುತಿ 1 ಬದರಿಕಾಶ್ರಮವನ್ನು ಐದಿದ್ಯೊ ಮುದದಿ ಪದುಮನಾಭನನ್ನು ಬಲಗೈಸಿ ನಿನ್ನ ಬದಿಗ ಜನರಿಗಿನ್ನೂ ಸುವಾಕ್ಯ ದಿಂದಲಿ ಪೇಳಿದದು ನಿಜ ಪದುಮನಾಭನೆ ಪರಮದೈವನು ಪದುಮೆ ಮೊದಲು ಬ್ರಹ್ಮಾಂತ ಜೀವರ ಪದದಿ ಗುಣದ ತಾರತಮ್ಯವ ಹೃದಯ ಮಂದಿರದಲ್ಲಿ ಪೇಳಿದ 2 ಘನ್ನಮಹಿಮನೆ ಎನ್ನಮನ ವಚನ ಕಾಯದಿ ಇನ್ನು ಮಾಡುವುದನ್ನು ಸ್ವೀಕರಿಸಿ ಹರಿಗೆ ಮುನ್ನ ನೀಡೆಲೊ ಚೆನ್ನವಾಗಿ ನಿಜಫಲ ನಿನ್ನ ಜನರೀಗಿನ್ನ ನೀಡಯ್ಯ ಮುನ್ನ ನಿನ್ನ ಒಳಗೆ ನಿರುತ ಇರುವ ಘನ್ನ ಗುರುಜಗನ್ನಾಥವಿಠಲನ ಎನ್ನ ಮನದಲಿ ತೋರಿಸೆಂದು ನಿನ್ನ ಪದಯುಗವನ್ನು ಭಜಿಸಿದೆ 3
--------------
ಗುರುಜಗನ್ನಾಥದಾಸರು
ನಂಬಿ ಭಜಿಸಿರೈಯ್ಯಾ ಶರಣರು ಪ ನಂಬಿ ಭಜಿಸಿರೈಯ್ಯಾ ಶರಣರು|ಅಂಬುಧಿವಾಸ ಶ್ರೀ ದೇವನಾ| ಹಂಬಲ ಬಿಡಿ ಅನ್ಯ ಮಾರ್ಗದಾ| ಅಂಬುಜಾಂಬಕ ಪರದೈವನು ಗಡಾ| 1 ತ್ರಿಮೂರ್ತಿಯೊಳು ಮಿಗಿಲಾರೆಂದು ನೋಡಾ| ಲಾ ಮುನಿಯಮರರು ಕಳುಹಲು| ಪರದೈವವೆಂದನು ಗಡಾ|2 ದೇವಾ|ಸುರರೆಲ್ಲ ತವಕದಿ ಕುಳಿತಿರೇ| ಇಂದಿರೆ ಬಂದು|ಹರಿಗೆ ಮಾಲೆಯ ಹಾಕಿದಳು ಗಡಾ 3 ಶ್ರೀ ಚರಣವ ತೊಳೆಯಲು| ಸುರನದಿ ಬರೆ| ಮೃಢ ಶಿರಸದಿ ಧರಿಸಿದ ಗಡಾ4 ಮೂರಕ ಮೂರ ಮೂರುತಿಯಾಗಿ ಗುಣ| ಮೂರಕದೂರವದೆನಿಸುವಾ| ಸಾರಿದವರಾ ಕಾವಾ ಮಹಿಪತಿಸುತ| ಸಾರಥಿಯಾಗಿ ರಕ್ಷಾಪ ಗಡಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ
ಸಿರಿದೇವ ನಮ್ಮ ನಿದೈವನು ಶರಣರಕ್ಷಕವಾವನು ಪ ಆಲಯದೊಳುಛಲವಿಡಿದರೆ| ಪಾಲಗಡಲದೊಳಗಿಟ್ಟೀ ಹಾ 1 ವರದ ಮದದಿ ಭಸ್ಮಾಸುರ ಬೆನ್ನಟ್ಟಿ|ಗಿರಿಜೇಶನ ಪೀಡಿಸುತಿರೇ ಭರದಿಂದೊದಗಿ ಬಂದು ಮೋಹಕ ರೂಪದಿ| ದುರುತಳನ ಭಸ್ಮವ ಮಾಡಿದಾ 2 ಅಖಳ ದೊಳಗೆ ಅರಾರಾಧಿಸುವರು| ಭಕುತಿಯಂದದಿ ತನೊಲಿವನು ಪ್ರಕಟಿದಿ ಮಹಿಪತಿ ನಂದನಮುಖದೊಳು ಸಕಲಚರಿತೆಯನು ನುಡಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು