ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ ಪರಿಪೂರ್ಣ ಶ್ರೀಗುರು ಮನ್ನಾಥ ಧ್ರುವ ಅಂದಿಗಿಂದಿಗೆ ನೀನೆ ನಿತ್ಯನುಭವದಿಂದ ತಂದಿ ತಾಯಿ ನೀನೆ ಶ್ರೀಹರಿ ಮುಕುಂದ ಬಂಧುಬಳಗ ನೀನೆ ಕುಲಕೋಟಿಗಳಿಂದ ಎಂದೆಂದೆನಗೆ ನೀನೆ ಫಲದೊಲವಿಂದ 1 ಸೃಷ್ಟಿ ಜನ ಪಾಲಕ ನೀನೆ ಸದ್ಗುರು ರನ್ನ ಸೃಷ್ಟಿಯಲಿ ಪೊಗಳುತಲಿ ಶ್ರುತಿಸ್ಮøತಿಗಳು ನಿನ್ನ ಇಷ್ಟ ಕುಲದೈವಗಳೆಂಬುದು ನೀ ಎನ್ನ ದೃಷ್ಟಿಸಿ ಮಾಡುವ ಭಕ್ತಜನರಿಗೆ ಪಾವನ್ನ 2 ಮನೋಹರ ಮಾಡುವ ಮಂಗಳಕರಮೂರ್ತಿ ಘನ ಸುಖದಾಯಕ ನೀನೆ ಜ್ಞಾನದ ನಿಜಸ್ಫೂರ್ತಿ ಭಾನುಕೋಟಿತೇಜ ನೀನೆ ಸಕಲಸಾರ್ಥಿ ಅನುದಿನ ಮಾಡೊ ಮಹಿಪತಿ ಶ್ರೀಪಾದಕೆ ಆರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಸರ ಸಂಗ ದೊರೆಯಿತು ಎನಗೀಗ ಇನ್ನೇನಿನ್ನೇನುವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ಪಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನುತೋಯಜಾಕ್ಷನ ನಾಮ ಜಿಹ್ವೆಯೊಳ್ನೆಲಸಿತು ಇನ್ನೇನಿನ್ನೇನು 1ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನುಜಲಜನಾಭನ ಧ್ಯಾನ ಹೃದಯದೊಳ್ನೆಲಸಿತು ಇನ್ನೇನಿನ್ನೇನು 2ತಂದೆ ತಾಯೆ ಮುಚುಕುಂದವರದನಾದ ಇನ್ನೇನಿನ್ನೇನುಸಂದೇಹವಿಲ್ಲ ಮುಕುಂದ ದಯಮಾಡಿದ ಇನ್ನೇನಿನ್ನೇನು 3ಏನೆಂದು ಹೇಳಲಿ ಆನಂದಸಂಭ್ರಮಇನ್ನೇನಿನ್ನೇನುಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು 4ಎನ್ನವಂಶಗಳೆಲ್ಲ ಪಾವನವಾದುವು ಇನ್ನೇನಿನ್ನೇನುಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು 5
--------------
ಪುರಂದರದಾಸರು