ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟಮಠದ ಯತಿಗಳು ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ ಅಷ್ಟಮಠದ ಶ್ರೀಪಾದಂಗಳವರ ಪ. ಸುಧಿಂದ್ರತೀರ್ಥ ಗುರುವರ್ಯರು ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು ಶ್ರೀಹರಿಯ ತೋರುವರು ನೇಮದಿಂದಲಿ ಇವರ ನಾಮ ನೆನೆದರೆ ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು 1 ವಿಭುದಪ್ರಿಯತೀರ್ಥ ಗುರುವರ್ಯರು ಬಂದಾ ದುರ್ಜನರ ಮನವನು ಜಯಿಸುವರು ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು ಮಹಾಗುಣವಂತರು 2 ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು 3 ವಿಶ್ವೇಂದ್ರತೀರ್ಥರು ಈ ಗುರುವರ್ಯರು ವಾದಿರಾಜರ ಪೂಜಿಸುವರು ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ ಮಾಡುವರು ಭಕ್ತರಘ ಕಡಿವರು4 ಇವರು ಭವಸಮುದ್ರವ ನೀಗಿಸುವರು ಶಿಷ್ಯರಿಗ್ಹರುಷ ಪಡಿಸುವುದು ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು 5 ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು ಭಕ್ತರಿಗತಿಪ್ರಿಯರು ಮಹಾನುಭಾವರು ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು 6 ಲಕ್ಷ್ಮೀಂದ್ರತೀರ್ಥ ಶ್ರೀಗಳವರು ಇವರು ತಮ್ಮ ತುಷೆಯೊಳಗಿಟ್ಟುಕೊಂಡು ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು 7 ವಿಶ್ವಮಾನ್ಯತೀರ್ಥ ಈ ಗುರುವರ್ಯರು ಬಂದ ಭೂಸುರರಿಂದ ಅನುವಾದ ಮಾಡುವರು ನೋಡುವರಿಗಾನಂದ ಪಡಿಸುವರು ಸುಜ್ಞಾನ ಯತಿವರ್ಯರು 8 ಅಷ್ಟಮಠದ ಯತಿಗಳ ಮಹಿಮೆಯನ್ನು ನಿಷ್ಠೆಯಿಂದಲಿ ಪೇಳುವನು ಅವನು ಸುರನು ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು ಕೃಷ್ಣನ ಪೂಜಿಸುವರು 9
--------------
ಕಳಸದ ಸುಂದರಮ್ಮ
ಆನಮಿಸುವೆ ಗುರುವಾ ಮಂತ್ರಾಲಯ ಸ್ಥಾನ ಮಾಡಿದ ಯತಿಯಾ ಪ ದಾನವರೊಳವತರಿಸಿ ದೈನ್ಯರ ಮಾ£ನಿಧಿಯು ತಾನು ಜ್ಞಾನಿಗಳಿಗೆ ಕಾಮಧೇನುವೆನಿಸಿದೀ ಮಾನಿಯತೀಂದ್ರ ವಿಜ್ಞಾನಪೊಯ್ಯವನು ಅ.ಪ ಸದಯ ಸರ್ವದಾಯೆನಿಸಿ ಹೃದಯದಿ ಮುದವಾಂಕುರಿಸುವನು ಪರಿ ಸದಮಲ ಕೀರ್ತಿಯ ವಿದಿಶಮಾಗಿ ಭೂತಳದಿ ಉದಯಿಸಿದ 1 ದೋಷದೂರ ನೆನಿಸೀ ದಾಸರಿಗೀಶನಡಿಯ ತೋರ್ಪಾ ವಾಸುದೇವನಿಗೆ ನಿಜ ದಾಸನೆನಿಸಿ ಭವ- ವಾಸದೊಳಿಹ ಪರತೋವೀವನು 2 ಕರುಣಸಾಗರನೆನಿಸಿ ಶರಣಗೆ ವರಗಳ ತಾನೀವಾ ಗುರುವೆಂದೆಂಬ ಯಥಾರ್ಥ ಪದವಿ ತಾ ನರಸಿಂಹವಿಠಲನ ಕರುಣದೊಳಿಹನು 3
--------------
ನರಸಿಂಹವಿಠಲರು
ಯಾಚಿಸುವೆನು ನಿನ್ನನಿದಕೆ ಕರುಣಸಾಗರ ಗಮನ ಜಗತ್ಪಾಲ ಪ್ರಭುವರ ಪ ದೈನ್ಯರಾಹಿತ್ಯ ರಹಿತ ಜಾಡ್ಯರಹಿತವು ಪಾದ ಕಮಲರತಿ ಸದಾವಕಾಲವು 1 ಪ್ರಭುವೆ ನಿನ್ನ ಭೃತ್ಯನಾನಾದಿಕಾಲದಿ ಅಭಯವಿತ್ತು ಪಾಲಿಸೆನ್ನ ಹೇ ದಯಾನಿಧೆ 2 ತುಷ್ಟನಾದರೇನುರುಷ್ಟನಾರೇನೊಲೊ ಇಷ್ಟದೈವ ನಿನ್ನ ಹೊರತು ಗತಿಯ ಇಲ್ಲೆಲೊ 3 ತುಷ್ಟನಾದ ಬಳಿಕ ನೀನೆ ಹೇ ಕೃಪಾಕರ ಬಿಟ್ಟುನಿನ್ನ ಭಜೀಸಲ್ಯಾಕೆ ಯಿತರಕಾಯ್ವರ 4 ನೀನೆ ರೋಷವನ್ನು ತಾಳೆ ಸುಜನಬಂಧುವೆ ದೀನನನ್ನು ಕಾಯ್ವರಾರು ನೀನೆಯಲ್ಲವೆ 5 ದೋಷ ಕ್ಷಮಿಸುವಲ್ಲಿ ನಿನ್ನ ಪೋಲ್ವ ಅರಸರು ದೇಶಸರ್ವಗಳಲಿ ಪುಡುಕಲಲ್ಲೆ ದೊರಕರು 6 ಎನ್ನಸರಿ ಕೃತಘ್ನ ವಂಚನೀಯ ಮಾಳ್ಪನ ವನ್ನಜಾಭವಾಂಡದೋಳಾವಲ್ಲಿ ಕಾಣೆನಾ 7 ದೀನ ದಾಸ ನಿನಗೆ ನಾನು ಹೇ ಜಗತ್ಪತೆ ಮಾಣದೆಲ್ಲಿರಲ್ಲಿ ತೋರಿ ಪ್ರೇಮ ಸಾಮ್ಯತೆ 8 ಎನ್ನ ವಿಷಯ ಭಯವು ನಿನಗೆ ಲಕ್ಷವಾವುದು ಮನ್ನಿಸೆನ್ನ ಪೊರೆವ ಸರ್ವಭಾರ ನಿನ್ನದು 9 ಈಶಪೂರ್ಣಕಾಯ ನಿನಗಸಾಧ್ಯವಾವುದು ಆಶೆಯನ್ನದಾವಘನವು ನಿನಗೆ ತೋರ್ಪುದು 10 ದಾಸನಾಶೆಪೂರ್ತಿಸಲ್ಕಾಲಸ್ಯವುಚಿತವೋ? ಅಶಿಶಿಸುವನು ದಾಶಗೈವುದೇನು ನೀತವೋ? 11 ಲೋಕನಾಥ ಕರುಣ ಪೂರ್ಣನೇ ಪರಾತ್ಪರ ಯಾಕೆ ಯೊನ್ನೊಳಿನಿತು ನೀನು ನಿರ್ದಯಾಪರ 12 ಗರವತಾಯಿತನನುಜಗೀಯೆ ಅವುದೋಗತಿ ತರುಳನಲ್ಲಿ ಕರುಣಿಸುವದು ಕೃಷ್ಣ ಮೂರುತಿ 13 ದಾತ ಜ್ಞಾತನು ನಿನ್ನ ವಿನಹಾಭಿಷ್ಟಫಲದ ಕರ್ತೃ ಆವನು 14 ಲಕ್ಷ್ಮಿಪತಿಯ ಪೋಲ್ಪೋದಾರ ಸುಗುಣ ಶೀಲನ ಈಕ್ಷಿಸಲ್ಕೆ ಜಗದೊಳಾರನೆಲ್ಲಿ ಕಾಣೆನಾ 15 ನಿನ್ನ ಔದಾರ್ಯ ಸರ್ವರಲ್ಲಿ ಸಾಮ್ಯವು ಎನ್ನೊಳಿನಿತ್ತು ನಿನ್ನದ್ಯಾಕೆ ಕಾರ್ಪಣ್ಯವು 16 ಆರ್ತಬಂಧುವೆಂದು ನಿನಗೆ ಶರಣುಬಂದೆನು ಸಾರ್ಥಕವನು ಮಾಡುವಿಯೊ ಜರಿದೆ ಬಿರುದನು 17 ದೀನ ಬಂಧು ಕರುಣಸಿಂಧು ಸುಹೃದ್ಬಾಂಧವ ಹೀನ ಭವಾರ್ಣವದಿ ಮಗ್ನನಿರುವೆ ಭೂಧವ 18 ತಾರಿಸೈ ಭವಾಬ್ದಿಯಿಂದ ಇಂದಿರಾವರ ಸೂರಿಜನರ ಸಂಗವೆನ್ನಗೀಯೋಗಿರಿಧರ19 ಶ್ರೀನೃಸಿಂಹ ಸತತ ನೀನು ಸದಯ ಮೂರುತಿ ದೀನ ನನ್ನೊಳ್ಯಾಕೆ ನಿರ್ದಯವ ತೋರುತಿ 20 ಸಾಧುಗಳು ನಿರ್ಗುಣಿಗಳಲ್ಲಿ ದಯವÀ ಮಾಳ್ಪರು ಸಾದರದಲಿ ಸರ್ವರಲ್ಲಿ ಸದಯರಿಪ್ಪರು 21 ಧನ್ಯಜನಕೆ ನಿನ್ನನೀವುದೇನು ಅಚ್ಚರ ದ್ಯೆನ್ಯ ಬಡುವನನ್ನು ಪಾಲಿಸುವದು ಪರತರ 22 ಚಂದ್ರಚಾಂಡಾಲಗೃಹದ ಮೇಲೆಯಾದರು ಸುರತರು 23 ಈತೆರ ಶ್ರೀ ಪತಿಯೆ ಎನಗೆ ಪ್ರೀತನಾಗೆಲೋ ನೀತವಾಗಿ ಕರುಣದಿಂದ ಕರವಪಿಡಿಯಲೊ 24 ಪುನಃ ಪುನಃ ನಿನ್ನನಿದನೆ ಬೇಡಿಕೊಂಬೆನಾ ಮನದೊಳು ಪ್ರಸನ್ನನಾಗು ಜನಕಜಾರಮಣ25 ಪಂಚರಾತ್ರಾಗಮೋಕ್ತ ಈಸ್ತುತಿಯನು ವಿನುತ ಶ್ರೀ ರಾಮಚಂದ್ರನು 26 ಮುದದಿ ಮನಸಿನೊಳಗೆ ತಾನೆವದಗಿ ಪೇಳಿದ ಅದನೆ ಶ್ರೀವರದೇಶ ವಿಠಲ ನುಡಿಸಿ ಬರೆಸಿದ 27
--------------
ವರದೇಶವಿಠಲ
ಹಣ್ಣ ಸವಿಯ ಬಾರದೇ ಪ ಹಣ್ಣನ್ನು ತಿಂದರೆ ಕೇಶವನೊಲಿಯುವಾ ಚನ್ನಕೇಶವ ಸ್ವಾಮಿ ಬಿಡದೆ ಪಾಲಿಸುವಾ ಅ.ಪ. ಪ್ರೀತಿಯೆನ್ನುವಂಥ ಬೀಜವನ್ನೇ ಬಿತ್ತಿ ಭೂತ ದಯೆಯೆಂಬುವ ವೃಕ್ಷವ ಬೆಳೆಸೀ ಆತುರದಲ್ಲಿ ಪರೋಪಕಾರವೆಂಬ ನೀತಿಯ ನೀರನ್ನು ನೇಮದೊಳೆರೆದೂ 1 ಅನುದಿನ ದಾನಧರ್ಮಗಳ ಟೊಂಗೆಗಳೇರಿ ತನುಮನ ಧನದಿಂದ ದೈನ್ಯರ ಸಲಹಿ ಘನತರ ಸ್ವಾರ್ಥ ತ್ಯಾಗವುಯೆಂಬ ಪರ್ಣವ ನೆನೆದು ಕೃತಜ್ಞತೆ ಕುಸುಮವ ಪಡೆದೂ 2 ವರತರ ದೇವಾಂಶ ಗುಣದಿಂದ ಬೆಳೆದಿರ್ಪ ಹರಿಭಕ್ತಿಯೆನ್ನುವ ಫಲವನ್ನೇ ಕೊಯ್ದು ಸರಸದಿ ಕೀರ್ತನೆ ಭಜನೆ ಸೂತ್ರಗಳಿಂದ ಪರಮ ಭಕ್ತೀಯೆಂಬ ಹಣ್ಣನು ತಿಂದೂ 3 ಧರೆಯಲ್ಲಿ ಸಿಗುವಂಥ ಹಣ್ಣನು ಸವಿದರೆ ನಿರುತ ತೃಪ್ತಿಯು ಆಗಲಾರದು ದೇವಾ ಅಮೃತ ಹರುಷದಿ ತಿನ್ನಲು ಘನಮುಕ್ತಿ ದಿಟವು 4
--------------
ಕರ್ಕಿ ಕೇಶವದಾಸ