ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸಕೇಳಲೈ ಸರಸಿಯೊಳಗೆ ತಾ ಸರಸವಾಡುತಾ ಕರಿವರನಿರೆÉ ಪರಮ ಭೀಕರ ಪ್ರಬಲ ನಕ್ರವು ಕರಿಯ ಕಾಲನು ಪಿಡಿದು ಸೆಳೆಯಿತು 1 ಚಕಿತನಾಗುತ ಚತುರ ದ್ವಿಪವರ ಮಕರಿ ವದನದಿಂ ಮುಕ್ತನಾಗಲು ಸಕಲ ಸಾಹಸಗೈದನಕ್ಕಟ ವಿಕಲವಾಯಿತಾ ಯತ್ನವೆಲ್ಲವು 2 ನಕ್ರ ಸೆಳೆತವು ಪ್ರಬಲವಾಗಲು ದಿಕ್ಕು ತೋರದೆ ಕೂಗಿಕೊಂಡನು ಮಿಕ್ಕ ಗಜಗಳು ಕೂಡಿ ಬಿಡಿಸಲು ಶಕ್ತಿಮೀರಿ ಸಾಹಸಗೈದುವು 3 ಆನೆಗಳು ಒಂದೆಡೆ ಎಳೆಯಲು ನೆಗಳು ಒಂದೆಡೆ ಎಳೆಯಲು ಏನನೆಂಬೆ ಹೋರಾಟವೀ ಪರಿ ಏನು ನಡೆದರೂ ವಿಫಲವಾಯಿತು 4 ಹಿಂಡು ಬಳಗಗಳೆಲ್ಲ ನೋಡುತ ದಂಡೆ ಮೇಲೆ ತಾವ್ ನಿಂತುಬಿಟ್ಟವು ಜೊಂಡು ಹುಲ್ಲು ತಾ ಪಿಡಿದು ತನ್ನಯ ಶುಂಡಾಲ ಗೆದ್ದನು 5 ನಕ್ರಬಾಧೆಯು ಬಿಡಿಸಲಾರಿಗೂ ಶಕ್ಯವಾಗದೆ ಹೋಯಿತಕ್ಕಟ ದಿಕ್ಕುಗೆಟ್ಟು ತಾ ದೈನ್ಯದಿಂದಲೇ ದುಃಖಪಡುತ ಭೋರಿಟ್ಟು ಕೂಗಿದ 6 ಉದಿಸಿತಾಗ ಸುಜ್ಞಾನವವನೊಳು ಸುದತಿ ಮಕ್ಕಳು ಸಲಹರೆಂಬುದು ಬದಲು ಬಯಸದ ಬಂಧು ಕರಿಗಿರಿ ಸದನನೆಂದು ತಾನಂಬಿ ನೆನೆದನು 7
--------------
ವರಾವಾಣಿರಾಮರಾಯದಾಸರು
ದೇವ ದೇವನೆ ಪಾಲಿಸೈ ಹಿತ ಬಂಧು ನೀನೇ ರಕ್ಷಿಸೈ ಪ ಕಾವುದೈ ತವದಾಸನನು ಭವ ಬಂಧದಿಂದಂ ದಾಟಿಸೈ ಮಂದರಾಧರ ವಿಶ್ವರೂಪನೇ ಅಂದದಲಿ ಶ್ರೀಪತೇ ಬಂದು ನೀನೇ ಪಾಲಿಸೈ ನಿಜ ಬಂಧು ನ್ಯಾಯದಿ ದಾಸನ 1 ಎಲ್ಲಿ ಕೂತರೂ ನಿನ್ನ ಭಜಿಸೆನು ವಲ್ಲಭನ ಶ್ರೀ ಲಕ್ಷ್ಮಿದೇವಿಯ ಅಲ್ಲಗಳೆಯದೆ ರಕ್ಷಿಸೈ 2 ನೀನೆ ಭಕ್ತರ ತಂದೆ ತಾಯಿಯು ಚನ್ನಕೇಶವ ಸ್ವಾಮಿ ರಕ್ಷಿಸು ದೈನ್ಯದಿಂದಲಿ ಬೇಡುವೇ 3
--------------
ಕರ್ಕಿ ಕೇಶವದಾಸ
ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ಪ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಅ. ಪ. ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ವಾಕು 1 ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ2 ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು ಮರುತ ಪ್ರತಿಬಿಂಬ 3
--------------
ವಿಜಯದಾಸ
ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ಪ ಈಶ ಹೊರತು ಮಿಕ್ಕ ಜನರು ದಾಸರೇ ಸರಿ ಅ.ಪ. ವೇದವ್ಯಾಸದೇವ ದೇವ ಸರ್ವರಿಗೆ ಈಶ ಕಾಣಿರೋ ಮೋದಮುನಿಯು ಆತನಿಗೆ ಮುಖ್ಯದಾಸ ಶಾಸ್ತ್ರಸಿದ್ದವೋ ಎಂದಮೇಲೆ ನೀನು ಯಾರು ಸಾಕ್ಷಿಕೇಳಿ ಬೇಗ ನುಡಿಯಲೋ ಛಂದ ಭಜಿಸಿ ಜ್ಞಾನ ಘಳಿಸಿ ದಾಸನೆಂದು ಹರಿಯ ಭಜಿಸೆಲೋ 1 ಧರ್ಮಶಾಸ್ತ್ರ ಮರ್ಮಬಿಟ್ಟು ಓದಿ ಓದಿ ಏನು ಫಲವೊ ನಿತ್ಯ ತೃಪ್ತ ನಿರ್ಜರೇಶ ನೊಲಿಮೆ ಮುಖ್ಯವೋ ಕಮಲೆಯರಸ ಕಲ್ಪವೃಕ್ಷ ಹೃಸ್ಥದೊರೆಯ ಕಾಣಬೇಕೆಲೋ ಕರ್ಮಬಿಡದೆ ಆಶೆತೊರೆದು ಕರ್ಮಪತಿಯ ಶರಣು ಪೊಗೆಲೋ 2 ವೇದಶಾಸ್ತ್ರ ಸ್ಮøತಿಗಳಲ್ಲಿ ಪೇಳಿರುವ ತತ್ವಗಳನ್ನು ನಡತೆಯಿಂದ ನಡಿಸಿ ನಡಿಸುತ ಇಂದಿರೇಶನ ದಾಸಜನರು ಪದಗಳಿಂದ ಪಾಡಿ ಪಾಡುವ ಖೇದವಳಿದು ಸಾಧು ಜನಕೆ ನಂದ ಸೂರೆಗೈದು ನಲಿವರೋ 3 ವೇಷದಿಂದ ಭಾಷೆಯಿಂದ ಶ್ರೀಶನೊಲಿಮೆ ಕಾಣಲಾಗದೋ ದಾಸನೆಂದು ದೈನ್ಯದಿಂದ ದ್ವೇಷ ತ್ಯಜಿಸಿ ಕೂಗಬೇಕೆಲೋ ಕುಣಿದು ಕುಣಿಯಲೊ 4 ಶಕ್ತಿಜರಿದ್ವಿರಕ್ತಿಬೇಡಿ ಭಕ್ತಿಯಿಂದ ಭಜಿಸಿ ಭಜಿಸೆಲೊ ಶಕ್ತ ವಿಜಯಸೂತ ಶ್ರೀ ವಾಯುಹೃಸ್ಥ “ಕೃಷ್ಣವಿಠಲ” ಯುಕ್ತಿಯಿಂದ ಬಂಧಬಿಡಸಿ ನಿತ್ಯಸುಖವ ನಿತ್ತು ಕಾಯ್ವನೊ ಭಕ್ತಿಯಿಂದ ಶಕ್ಯನಾದ ಜ್ಞಾನ ಘಳಿಸಿ ಕೊಲ್ಲು ಸಂಶಯ 5
--------------
ಕೃಷ್ಣವಿಠಲದಾಸರು
ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ ಸುಖದಾತ ಸುಂದರನ ಪ್ರಾಣಸಖನ ಕಡುದೈನ್ಯದಿಂದೆರೆಯಲೊಡನೆ ಬಂದು ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ ಕ್ರೋಧಿರಕ್ಕಸನುರವ ಛೇದಿಸುತೆ ವೇದವ ನ್ನಾದರಿಸಿ ತಂದೀಯುತ ಜಗಕೆನಲವಿಂ ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ ಸ್ವರ್ಣಗರ್ಭನನಂತು ಮೀನನಾಗಿ ಅರ್ಣವದಿ ನೆಲೆಯಾಗಿ ನಿಂತ ಸುಗುಣ
--------------
ನಂಜನಗೂಡು ತಿರುಮಲಾಂಬಾ