ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನಾಯಕಿ ಹೆಣ್ಣಾ ನೋಡಮ್ಮ ಸತ್ಯ ಲೋಕೇಶ ಬೊಮ್ಮನೀಕೆ ಮಗನಮ್ಮ ಪ. ಶೋಣಿತ ಶುಕ್ಲ ಸಂಮ್ಮಂಧಗಳಿಲ್ಲ ಇಂಥಾ ಜಾಣತನವು ಬೇರೊಬ್ಬಗಿಲ್ಲ ವಾಣೀಶ ಶಂಭು ಮುಖ್ಯ ಸುರರೆಲ್ಲ ತತ್ವ ಕಾಣದೆ ನಿತ್ಯಮೆಣೀಸುವವರಲ್ಲ 1 ಮೂಢ ದೈತ್ಯರ ಮೋಹಿಸಲಿಕಂದು ಒಳ್ಳೆ ಪಾಡಾದ ಸಮಯಕೊದಗಿ ಬಂದು ಮೂಡಿ ಸುಧೆಯ ಕಲಶ ತಂದು ತಡ ಮಾಡದೆ ಸುರರಿಗಿಕ್ಕಿದಳಂದು 2 ಶಿವನು ಮರಳುಗೊಂಡ ಶೃಂಗಾರಸಾರ ಭುವನೈಕರಕ್ಷ ದೀನಮಂದಾರ ಪವನವಂದಿತೆ ಪದ್ಮೆಗಾಧಾರ ನಿತ್ಯ ನವಯವ್ವನೆಗೆ ನಾವು ಪರಿವಾರ 3 ಭಸ್ಮೋದ್ಧೂಳಿತ ದೇಹಭವನಂದು ವರವ ಭಸ್ಮಾಸುರನಿಗಿತ್ತೋಡುವ ಬಂದು ವಿಸ್ಮಯಗೊಂಡು ನೀನೆ ಗತಿಯೆಂದು ಪೇಳೆ ಭಸ್ಮಗೈದಳು ದೈತ್ಯಾಧಮನಂದು 4 ನಾಗಗಿರಿಯ ಶಿಖರದ ಮೇಲೆ ನೆಲೆ ಯಾಗಿ ಶೋಭಿಪಳತ್ಯದ್ಭುತ ಬಾಲೆ ಶ್ರೀಗುರು ಶಿವಮುಖ್ಯ ಸುರಪಾಲೆ ದಯ ವಾಗಿ ತೋರ್ಪಳು ತನ್ನ ಶುಭಲೀಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಾರಿಸೊ ಶ್ರೀಹರಿ ತಾರಿಸೊ ಪತಾರಿಸೊ ಭವವ ನಿವಾರಿಸೊ ನಿನ್ನಡಿಯತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪಪಾಪವಿನಾಶನ ಮಾಡುವಿ ನೀತಾಪಸರನುನಿತ್ಯಸಲಹುವಿ ||ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1ಹಿರಣ್ಯಕಶಿಪುವನು ಸೀಳಿದೆ ಅವನಕರುಳನು ಕೊರಳೊಳು ಹಾಕಿದೆ ||ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದಕರುಣ ದಿಂದಲಿ ಕಂದಗೊಲಿದೆ ಗೋವಿಂದ 2ಅಸುರೆ ಪೂತನಿಯ ಸಂಹರಿಸಿದೆ ನೀಶಶಿಮುಖಿಯಭಿಮಾನ ಕಾಯ್ದೆ ||ಶಿಶುವಾಗಿ ಬಾಲಲೀಲೆಗಳನು ತೋರಿದೆಕುಸುಮನಾಭ ಶ್ರೀಪುರಂದರವಿಠಲ3
--------------
ಪುರಂದರದಾಸರು