ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸಾಹಸವಂತ ಈ ನಮ್ಮ ಹನುಮಂತ ಪ ವಾನರರೇ ನೀವ್ ಕೇಳಿ ಇವನೆಂಥ ಧೀಮಂತ ಅ.ಪ. ಸಾಗರವ ದಾಟುವೊಡೆ ಸಾಧ್ಯವೇ ಪರರಿಗೆ ಹೇಗೆ ಪೊಕ್ಕನೋ ಕಾಣೆ ದೈತ್ಯಪುರವ ಹೋಗಿ ಪುನರಪಿ ಬಂದನೆಂತು ತಾ ಜೀವದಲಿ ಬೀಗುತಿಹ ರಾವಣನ ಗರ್ವವನು ಮುರಿದಿಹನು 1 ಭೂಮಿಸುತೆ ಸೀತೆಯ ಕ್ಷೇಮವಾರ್ತೆಯನೆನಗೆ ನೇಮದಲಿ ತಂದಿತ್ತ ಕುಶಲಮತಿಯು | ಸ್ವಾಮಿಕಾರ್ಯವನಿಂತು ಸಾಧಿಸಿದ ಈ ಮಹಾವೀರನಿಗೆ ಸಮರಾರು ಧರೆಯೊಳಗೆ 2 ಮಿತಿಯಿಲ್ಲದುಪಕಾರ ಮಾಡಿರ್ಪನಿವಗಿನ್ನು ಪ್ರತಿಫಲವ ನಾನೇನು ಕೊಡಬಲ್ಲೆನು | ಪ್ರತಿಯಿಲ್ಲದೆನ್ನ ಆಲಿಂಗನವನೀವೆ ಶ್ರೀ ಪತಿ ಕರಿಗಿರೀಶನ ಪರಮಭಕ್ತನು ಈತ 3
--------------
ವರಾವಾಣಿರಾಮರಾಯದಾಸರು
ನಿತ್ಯ ಶುಭಮಂಗಲಂ ಪ ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆಸೇತುವೆಯ ಭರದಿಂದ ಲಂಘಿಸಿದಗೆಸೀತೆಯನು ವಂದಿಸುತೆ ಉಂಗುರವನಿತ್ತವಗೆದೈತ್ಯಪುರವನು ಭರದಲುರಿಸಿದವಗೆ 1 ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆಕುಸುಮವನು ತಂದು ದ್ರೌಪದಿಗಿತ್ತಗೆಕುಶಲತನದಲಿ ಕೌರವಾದಿಗಳ ಸಂಹರಿಸಿ-ದಸಹಾಯ ವೀರ ಶ್ರೀ ಭೀಮಸೇನಗೆ 2 ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆಮುದ್ದು ಶ್ರೀಆದಿಕೇಶವನ ಭಜಕಗೆ 3
--------------
ಕನಕದಾಸ